ಉತ್ತರಾಖಂಡ್ನಲ್ಲಿ ಜಲಪ್ರಳಯ; ಕರ್ನಾಟಕದ ಪ್ರವಾಸಿಗರು, ಯಾತ್ರಾರ್ಥಿಗಳಿಗಾಗಿ ಹೆಲ್ಪ್ಡೆಸ್ಕ್ ಆರಂಭಿಸಿದ ರಾಜ್ಯ ಸರ್ಕಾರ

ರಾಜ್ಯ ಸರ್ಕಾರ ಹೆಲ್ಪ್ಡೆಸ್ಕ್ ಆರಂಭಿಸಿದೆ. ಕರ್ನಾಟಕದ ಪ್ರವಾಸಿಗರು, ಯಾತ್ರಾರ್ಥಿಗಳಿಗಾಗಿ ಹೆಲ್ಪ್‌ಲೈನ್ ಸಂಖ್ಯೆ: 080-22340676, 080-1070 ಹೆಲ್ಪ್ಡೆಸ್ಕ್ ವ್ಯವಸ್ಥೆ ಮಾಡಿದೆ.

ಉತ್ತರಾಖಂಡ್ನಲ್ಲಿ ಜಲಪ್ರಳಯ; ಕರ್ನಾಟಕದ ಪ್ರವಾಸಿಗರು, ಯಾತ್ರಾರ್ಥಿಗಳಿಗಾಗಿ ಹೆಲ್ಪ್ಡೆಸ್ಕ್ ಆರಂಭಿಸಿದ ರಾಜ್ಯ ಸರ್ಕಾರ
ಮಳೆ

ಬೆಂಗಳೂರು: ಉತ್ತರಾಖಂಡ್ನಲ್ಲಿ ಜಲಪ್ರಳಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೆಲ್ಪ್ಡೆಸ್ಕ್ ಆರಂಭಿಸಿದೆ. ಕರ್ನಾಟಕದ ಪ್ರವಾಸಿಗರು, ಯಾತ್ರಾರ್ಥಿಗಳಿಗಾಗಿ ಹೆಲ್ಪ್‌ಲೈನ್ ಸಂಖ್ಯೆ: 080-22340676, 080-1070 ಹೆಲ್ಪ್ಡೆಸ್ಕ್ ವ್ಯವಸ್ಥೆ ಮಾಡಿದೆ. ಉತ್ತರಾಖಂಡ್ನಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ಈ ಹೆಲ್ಪ್ಡೆಸ್ಕ್ ಸಹಾಯಕವಾಗಲಿದೆ.

ನೆರೆ ರಾಜ್ಯ ಕೇರಳದಲ್ಲಿ ಮಹಾ ಮಳೆಗೆ ಪ್ರವಾಹ ಉಂಟಾಗಿ ಹಲವು ಮಂದಿ ಸಾವನ್ನಪ್ಪಿರೋ ದುರಂತ ಘಟನೆ ಮಾಸೋ ಮುನ್ನವೇ, ಮತ್ತೊಂದು ರಾಜ್ಯ ವರುಣ ಅಟ್ಟಹಾಸಕ್ಕೆ ತತ್ತರಿಸ್ತಿದೆ. ದೇವಭೂಮಿ ಉತ್ತರಾಖಂಡ್ ವರುಣನ ರೌದ್ರಾವತಾರಕ್ಕೆ ಸಿಲುಕಿ ಅಕ್ಷರಶಃ ನಲುಗಿ ಹೋಗಿದೆ. ಉತ್ತರಾಖಂಡ್ನಲ್ಲಿ ಭಾರಿ ಮಳೆಯಿಂದ 42 ಜನ ಮೃತಪಟ್ಟಿದ್ದಾರೆ.

ನೈನಿತಾಲ್ನಲ್ಲಿ ಮೇಘಸ್ಫೋಟ.. 28 ಮಂದಿ ಬಲಿ
ಅಂದಹಾಗೆ ನೈನಿತಾಲ್ ಹೇಳಿಕೇಳಿ ಪ್ರವಾಸಿಗರ ಪಾಲಿನ ಸ್ವರ್ಗ. ಆದರೆ ಈ ಸುಂದರ ತಾಣದಲ್ಲಿ ಸಂಭವಿಸಿದ ಮೇಘಸ್ಫೋಟಕ್ಕೆ ನೈನಿತಾಲ್ ನರಕವಾಗಿದೆ. ನಿರಂತರವಾಗಿ ಸುರಿದ ರಣಭೀಕರ ಮಳೆಗೆ ಪ್ರವಾಹ ಉಂಟಾಗಿದೆ. ಭಾರಿ ದುರಂತಗಳು ಸಂಭವಿಸಿವೆ. 15ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿದ್ದು, ಇದುವರೆಗೆ 28 ಮಂದಿ ಮೃತಪಟ್ಟಿದ್ದಾರೆ.

2,500 ಯಾತ್ರಾರ್ಥಿಗಳಲ್ಲಿ ಹೆಚ್ಚಿದ ಆತಂಕ
ಚಮೋಲಿ ಜಿಲ್ಲೆ ಬದರಿನಾಥಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 7 ಕಡೆ ಭೂಕುಸಿತ ಸಂಭವಿಸಿದೆ. ಬದರಿನಾಥ್, ಕೇದಾರನಾಥ್ ಸೇರಿದಂತೆ ಚಾರ್ ಧಾಮ್ ಯಾತ್ರೆಯನ್ನು ಈಗ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಬದರಿನಾಥ್ಗೆ ಹೋಗಿದ್ದ 2,500 ಯಾತ್ರಾರ್ಥಿಗಳು ಈಗ ಬದರಿನಾಥ್ನಲ್ಲೆ ಪರದಾಡ್ತಿದ್ದಾರೆ. ಹೆದ್ದಾರಿ ದುರಸ್ಥಿಯಾದ ಬಳಿಕ ವಾಪಸ್ ಬರಲು ಅಸಾಧ್ಯ. ಅನೇಕ ಭಕ್ತಾದಿಗಳು ಜೋಶಿಮಠದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.

ಉತ್ತರಾಖಂಡ್ನಲ್ಲಿ ಜಲಪ್ರಳಯ ಹಿನ್ನೆಲೆಯಲ್ಲಿ ಹೆಲ್ಪ್ಡೆಸ್ಕ್ ಆರಂಭವಾಗಿದೆ. ಉತ್ತರಾಖಂಡ್ನಲ್ಲಿ ಸಿಲುಕಿದ ಕರ್ನಾಟಕದ ಪ್ರವಾಸಿಗರು, ಯಾತ್ರಾರ್ಥಿಗಳಿಗಾಗಿ ರಾಜ್ಯ ಸರ್ಕಾರ ಈ ಹೆಲ್ಪ್ಡೆಸ್ಕ್ನ ಆರಂಭ ಮಾಡಿದೆ.

ಇದನ್ನೂ ಓದಿ: ಉತ್ತರಾಖಂಡ್​​ ಮಳೆಗೆ 5 ಮಂದಿ ಬಲಿ; ಸಿಎಂಗೆ ಕರೆ ಮಾಡಿ ಪರಿಸ್ಥಿತಿಯ ವರದಿ ಕೇಳಿದ ಪ್ರಧಾನಿ ಮೋದಿ

Click on your DTH Provider to Add TV9 Kannada