ಬೆಂಗಳೂರು: ರಾಜ್ಯ ಸರ್ಕಾರವು ‘ಕಾವೇರಿ-2.0’ ತಂತ್ರಾಂಶವನ್ನು (Kaveri 2.0 software ) ಪರಿಚಯಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಇನ್ಮುಂದೆ ಆಸ್ತಿ ನೋಂದಣಿ(property registration )ಸುಲಭವಾಗಲಿದೆ. ಅಲ್ಲದೇ ಇದರ ಅನುಷ್ಠಾನದಿಂದ ಉಪನೋಂದಾಣಿ ಕಚೇರಿಯಲ್ಲಿ(registration Office) ಜನದಟ್ಟಣೆ ಕಡಿಮೆಯಾಗಲಿದೆ. ಸಾರ್ವಜನಿಕರು ವಿಳಂಬವಿಲ್ಲದೆ ತಮ್ಮ ದಾಸ್ತಾವೇಜುಗಳನ್ನು ನೋಂದಾಣಿ ಮಾಡಿಕೊಳ್ಳಲು ಸಹಕಾರಿಯಾಗಿದೆ. ಉಪನೋಂದಾಣಿ ಕಚೇರಿಯಿಂದ ನೀಡುವ ಸೇವೆಗಳನ್ನು ಸಾರ್ವಜನಿಕರು ಆನ್‌ಲೈನ್ ಮುಖಾಂತರ ಪಡೆಯಬಹುದಾಗಿದೆ.
ಇದನ್ನೂ ಓದಿ: ನೋಂದಣಿ ಇಲಾಖೆಯಲ್ಲಿ ಕೆಲವು ಬದಲಾವಣೆ: ದಾಖಲೆಗಳ ನೋಂದಣಿಗೆ ಕಾವೇರಿ-2 ಜಾರಿ
ಈ ತಂತ್ರಾಂಶದ ಮೂಲಕ ಸಾರ್ವಜನಿಕರು ತಮ್ಮ ಆಸ್ತಿಯ ವಿವರ, ಮೂಲ ದಾಖಲೆಗಳನ್ನು ಆನ್‌ಲೈನ್ ಮೂಲಕ ನೇರವಾಗಿ ಉಪನೋಂದಾಣಿಧಿಕಾರಿಗೆ ಕಳುಹಿಸಬಹುದಾಗಿದೆ. ಅಧಿಕಾರಿಗಳು ಪರಿಶೀಲಿಸಿದ ನೋಂದಾಣಿಗೆ ತಗಲುವ ವೆಚ್ಚವನ್ನು ಖಜಾನೆಗೆ ಆನ್‌ಲೈನ್ ಮೂಲಕ ಪಾವತಿಸಿ ನಮಗೆ ಬೇಕಾದ ದಿನಾಂಕ, ಸಮಯವನ್ನು ನಿಗದಿಪಡಿಸಿಕೊಳ್ಳಲು ಅವಕಾಶವಿದೆ. ನಿಗದಿತ ದಿನಾಂಕದಂದು ಕೆಲವೇ ನಿಮಿಷದಲ್ಲಿ ಭಾವಚಿತ್ರ, ಸಹಿ, ಹೆಬ್ಬೆಟ್ಟಿನ ಗುರುತು ತೆಗೆದುಕೊಂಡು ನೋಂದಾಣಿ ಮಾಡಿಕೊಡಲಾಗುತ್ತದೆ.
ರಾಜ್ಯದ 251 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ-2 ಸಾಫ್ಟ್‌ವೇರ್ ಕಾರ್ಯಾರಂಭ ಮಾಡಿದ್ದು, ಉಳಿದವುಗಳನ್ನು ಈ ವಾರದ ಅಂತ್ಯದೊಳಗೆ ಪೂರೈಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಗಳವಾರ ಹೇಳಿದ್ದಾರೆ.
ಇನ್ನು ಕಾವೇರಿ-2 ತಂತ್ರಾಂಶದ ಅನುಕೂಲತೆಗಳು ಏನು ಎನ್ನುವುದನ್ನು ನೋಡುವುದಾದರೆ, ಆಸ್ತಿ ನೋಂದಣಿ ಎನ್ನುವುದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ನೀಡುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ, ಸರಿಯಾದ ಸಮಯಕ್ಕೆ ನೋಂದಣಿಯಾಗದೆ ಇರುವುದು, ಲಂಚ, ಭ್ರಷ್ಟಾಚಾರ ಇತ್ಯಾದಿಗಳೆಲ್ಲವೂ ಇತ್ತು. ಆದರೆ, ಆನ್‌ಲೈನ್ ಪ್ರಕ್ರಿಯೆಯಿಂದಾಗಿ ಇಂತಹ ತೊಂದರೆಗಳು ತಪ್ಪಲಿವೆ. ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 2:26 pm, Wed, 21 June 23