ಕೊರೊನಾ ವಿರುದ್ಧದ ಹೋರಾಟಕ್ಕೆ 4 ವಲಯಗಳ ವಿಂಗಡನೆ, ನಿಮ್ಮ ಜಿಲ್ಲೆ ಯಾವ ವಲಯದಲ್ಲಿದೆ?

ಕೊರೊನಾ ವಿರುದ್ಧದ ಹೋರಾಟಕ್ಕೆ 4 ವಲಯಗಳ ವಿಂಗಡನೆ, ನಿಮ್ಮ ಜಿಲ್ಲೆ ಯಾವ ವಲಯದಲ್ಲಿದೆ?

ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಜಗತ್ತು ನಲುಗಿ ಹೋಗಿದೆ, ಗಢಗಢ ನಡುಗಿ ಹೋಗಿದೆ. ಜಗದ ಮೂಲೆ ಮೂಲೆಗೂ ವ್ಯಾಪಿಸುತ್ತಿರುವ ಮಹಾಮಾರಿ ಕೊರೊನಾ ಎಲ್ಲಿ ನಮ್ಮನ್ನೂ ಆವರಿಸುತ್ತೋ, ಆಪೋಷಣೆ ತೆಗೆದುಕೊಳ್ಳುತ್ತೋ ಅಂತಾ ಜನ ನಿಂತಲ್ಲೇ ನಡುಗುತ್ತಿದ್ದಾರೆ.

ಇನ್ನು ಕರ್ನಾಟಕದಲ್ಲೂ ದಿನೇ ದಿನೆ ಆತಂಕದ ವಾತಾವರಣ ನಿರ್ಮಾಣವಾಗುತ್ತಲಿದೆ. ಸೋಂಕಿತರ ಸಂಖ್ಯೆ 1ರಿಂದ 500ರ ಗಡಿ ದಾಟಿಯಾಗಿದೆ. ನಿನ್ನೆಯ ವರದಿಗಳ ಪ್ರಕಾರ ಕರ್ನಾಟಕದಲ್ಲಿ ಈವರೆಗೂ 518 ಕೊರೊನಾ ಕೇಸ್​ಗಳು ಕನ್ಫರ್ಮ್ ಆಗಿದ್ದರೆ, 20 ಜನ ಮೃತಪಟ್ಟಿದ್ದಾರೆ. 193 ಮಂದಿ ಸೋಂಕಿನಿಂದ ಮುಕ್ತರಾಗಿ ಡಿಸ್ಚಾರ್ಜ್ ಆಗಿದ್ದರೂ ಮೈಮರೆಯುವಂತಿಲ್ಲ. ಹೀಗಾಗಿ 3 ವಲಯಗಳ ಬದಲು 4 ವಲಯಗಳಾಗಿ ವಿಂಗಡಣೆ ಮಾಡಿ ರಾಜ್ಯದಲ್ಲಿ ಕೊರೊನಾ ವಿರುದ್ಧ ಹೋರಾಡಲು ಬಿಎಸ್​ವೈ ಸರ್ಕಾರ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.

4 ಬಣ್ಣಗಳ ಜೊತೆ ಕೊರೊನಾ ವಿರುದ್ಧ ರಣಕಹಳೆ! ಅಂದಹಾಗೆ ಕೊರೊನಾ ಹರಡುವಿಕೆಯನ್ನು ತಡೆಯಲು ಮುಂದಾಗಿರೋ ಸಿಎಂ ಯಡಿಯೂರಪ್ಪ ರಾಜ್ಯವನ್ನ 4 ವಲಯವಾಗಿ ವಿಂಗಡಿಸಿದ್ದಾರೆ.ಸಕ್ರಿಯ ಕೇಸ್​ಗಳ ಆಧಾರದಲ್ಲಿ ಕೆಂಪು, ಕಿತ್ತಳೆ, ಹಳದಿ ಮತ್ತು ಹಸಿರು ವಲಯವಾಗಿ ವಿಂಗಡಿಸಲಾಗಿದೆ. ರಾಜ್ಯದ 6 ಜಿಲ್ಲೆಗಳು ರೆಡ್‌ಜೋನ್, 5 ಜಿಲ್ಲೆಗಳನ್ನ ಆರೆಂಜ್ ಜೋನ್ ಎಂದು ಗುರುತಿಸಲಾಗಿದೆ.

ಇನ್ನು ಯೆಲ್ಲೋ ಜೋನ್‌ಗೆ ರಾಜ್ಯದ ಐದು ಜಿಲ್ಲೆಗಳು ಸೇರ್ಪಡೆಯಾಗಿದ್ದರೆ, 14 ಜಿಲ್ಲೆಗಳನ್ನು ಗ್ರೀನ್ ಜೋನ್‌ಗಳಾಗಿ ಗುರುತಿಸಲಾಗಿದೆ. ಸದ್ಯಕ್ಕೆ ಌಕ್ಟಿವ್ ಆಗಿರುವ ಪ್ರಕರಣಗಳ ಆಧಾರದ ಮೇಲೆ ಕೆಂಪು, ಕಿತ್ತಳೆ, ಹಳದಿ, ಹಸಿರು ವಲಯ ರೂಪಿಸಲಾಗಿದೆ.

15ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದರೆ ರೆಡ್ ಜೋನ್ ಆಗಲಿದೆ. ಈ ಪೈಕಿ ಬೆಂಗಳೂರು, ಮೈಸೂರು, ಕಲಬುರಗಿ ವಿಜಯಪುರ ಬಾಗಲಕೋಟೆ, ಬೆಳಗಾವಿ ರೆಡ್​ ಜೋನ್​ನಲ್ಲಿವೆ. ಹಾಗೇ 6ರಿಂದ 14 ಸಕ್ರಿಯ ಕೇಸ್​ಗಳಿದ್ರೆ ಆರೆಂಜ್ ಜೋನ್. ಬೀದರ್, ಧಾರವಾಡ, ಬಳ್ಳಾರಿ, ದಕ್ಷಿಣ ಕನ್ನಡ ಸೇರಿದಂತೆ ಮಂಡ್ಯ ಜಿಲ್ಲೆಗಳು ಆರೆಂಜ್ ಜೋನ್​ನಲ್ಲಿವೆ.

1ರಿಂದ 5 ಸಕ್ರಿಯ ಪ್ರಕರಣಗಳಿದ್ರೆ ಯೆಲ್ಲೋ ಜೋನ್ ಎನ್ನಲಾಗುತ್ತೆ. ಈ ಲಿಸ್ಟ್​ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ತುಮಕೂರು, ಚಿಕ್ಕಬಳ್ಳಾಪುರ ಉತ್ತರ ಕನ್ನಡ, ಗದಗ ಸೇರಿದೆ. ಸಕ್ರಿಯ ಪ್ರಕರಣಗಳೇ ಇಲ್ಲದಿದ್ರೆ ಗ್ರೀನ್ ಜೋನ್​ನಲ್ಲಿ ಗುರುತಿಸಲಾಗುತ್ತದೆ. ಕೋಲಾರ, ರಾಮನಗರ, ಚಾಮರಾಜನಗರ, ಕೊಡಗು, ಹಾಸನ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ ಶಿವಮೊಗ್ಗ, ದಾವಣಗೆರೆ, ಹಾವೇರಿ, ಯಾದಗಿರಿ, ರಾಯಚೂರು, ಕೊಪ್ಪಳ ಗ್ರೀನ್ ಜೋನ್​ನಲ್ಲಿವೆ.

ಜಿಲ್ಲೆಗಳು ಮಾತ್ರವಲ್ಲ, ತಾಲೂಕುಗಳೂ ಬಣ್ಣಮಯ! ಜಿಲ್ಲೆಗಳನ್ನ ಮಾತ್ರ ವಲಯವಾರು ವಿಂಗಡಿಸಿದ್ರೆ ಕೊರೊನಾ ಕಂಟ್ರೋಲ್​ಗೆ ಸಿಗೋದಿಲ್ಲ. ಇದರ ಜತೆ ಯಾವ ಯಾವ ತಾಲೂಕುಗಳಲ್ಲಿ ಸೋಂಕು ತೀವ್ರವಾಗಿ ಹರಡುತ್ತಿದೆ ಅನ್ನೋದನ್ನ ಅರಿಯಬೇಕು.ಇದನ್ನ ಬಿಎಸ್​ವೈ ಸರ್ಕಾರ ಚೆನ್ನಾಗಿ ಅರ್ಥೈಸಿಕೊಂಡು, ತಾಲೂಕುಗಳನ್ನೂ 4 ವಲಯಗಳಾಗಿ ವಿಂಗಡಿಸಿದೆ.

ಆದ್ರೆ ಇಲ್ಲಿ ಜಿಲ್ಲೆಗಳಿಗಿಂತ ಡಿಫರೆಂಟ್ ಸ್ಟ್ರಾಟರ್ಜಿ ಅಪ್ಲೈ ಮಾಡಲಾಗಿದೆ. 5 ಕ್ಕಿಂತ ಹೆಚ್ಚು ಪ್ರಕರಣಗಳಿದ್ರೆ ರೆಡ್​ಜೋನ್. 2ರಿಂದ 5 ಕೇಸ್ ಇದ್ದಲ್ಲಿ ಕಿತ್ತಳೆ. ಹಾಗೇ ಒಂದು ಪ್ರಕರಣ ಇದ್ದಲ್ಲಿ ಹಳದಿ ವಲಯ ಹಾಗೂ ಯಾವುದೇ ಪ್ರಕರಣ ಇಲ್ಲದಿದ್ದರೆ ಹಸಿರು ವಲಯವಾಗಿ ಗುರುತಿಸಲಾಗಿದೆ. ಹಾಗಾದ್ರೆ ಯಾವ ತಾಲೂಕು ಯಾವ ವಲಯದಲ್ಲಿ ಗುರುತಿಸಿಕೊಂಡಿದೆ..? ಅಷ್ಟಕ್ಕೂ ನಿಮ್ಮ ತಾಲೂಕು ಯಾವ ವಲಯದಲ್ಲಿದೆ?

ರೆಡ್ ಜೋನ್ ತಾಲೂಕುಗಳು: ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ತಾಲೂಕುಗಳು ರೆಡ್ ಜೋನ್​ನಲ್ಲಿವೆ. ಮೈಸೂರು, ನಂಜನಗೂಡು, ಮಳವಳ್ಳಿ, ಬೀದರ್ ಹಾಗೂ ಬೆಳಗಾವಿ ತಾಲೂಕುಗಳು ಕೆಂಪು ವಲಯದಲ್ಲಿದ್ದು, ಹೊಸಪೇಟೆ ಮತ್ತು ರಾಯಬಾಗ, ಜಮಖಂಡಿ ಸೇರಿದಂತೆ ಮುಧೋಳ ತಾಲೂಕು ರೆಡ್ ಜೋನ್​ನಲ್ಲಿ ಗುರುತಿಸಿಕೊಂಡಿವೆ. ಕಲಬುರಗಿ, ಹುಬ್ಬಳ್ಳಿ ನಗರ, ಬಾಗಲಕೋಟೆ ಹಾಗೂ ವಿಜಯಪುರ ತಾಲೂಕುಗಳನ್ನೂ ರೆಡ್​ಜೋನ್ ಎಂದು ಘೋಷಿಸಲಾಗಿದೆ.

ಕಿತ್ತಳೆ ವಲಯದ ತಾಲೂಕುಗಳು: ಗೋಕಾಕ್, ಗದಗ, ಬಂಟ್ವಾಳ, ಪುತ್ತೂರು ಹಾಗೂ ಮಂಗಳೂರು ಆರೆಂಜ್ ಲಿಸ್ಟ್​ನಲ್ಲಿವೆ. ಇನ್ನುಳಿದಂತೆ ಮಂಡ್ಯ ತಾಲೂಕು, ಬೆಂಗಳೂರು ಪೂರ್ವ ತಾಲೂಕು ಹಾಗೂ ಚಿಕ್ಕಬಳ್ಳಾಪುರ ತಾಲೂಕುಗಳು ಕಿತ್ತಳೆ ವಲಯದಲ್ಲಿವೆ.

ಹಳದಿ ವಲಯದ ತಾಲೂಕುಗಳು: ನಾಗಮಂಗಲ, ಭಟ್ಕಳ, ತುಮಕೂರು, ದೊಡ್ಡಬಳ್ಳಾಪುರ ತಾಲೂಕುಗಳು ಸೇರಿವೆ. ಹಾಗೇ ಶಿರಗುಪ್ಪ, ಹುಕ್ಕೇರಿ, ಅಳಂದ, ಶಹಾಬಾದ್ ತಾಲೂಕುಗಳನ್ನು ಕೂಡ ಶಿರಗುಪ್ಪ, ಹುಕ್ಕೇರಿ, ಅಳಂದ, ಶಹಾಬಾದ್ ತಾಲೂಕುಗಳು ಎಂದು ಗುರುತಿಸಲಾಗಿದೆ.

ಒಟ್ನಲ್ಲಿ ‘ಡೂ ಆರ್ ಡೈ’ ಮ್ಯಾಚ್​ನಂತಿರುವ ಈ ಸಂದರ್ಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಲವಾರು ದಿಟ್ಟ ಕ್ರಮಗಳನ್ನ ಕೈಗೊಳ್ತಿದ್ದಾರೆ. ಪ್ರಧಾನಿ ಮೋದಿ ನಿರ್ಧಾರಗಳಿಗೆ ಸಾಥ್ ನೀಡುತ್ತಿದ್ದು, ರಾಜ್ಯದಲ್ಲಿ ಕೊರೊನಾ ಕಟ್ಟಿ ಹಾಕಲು ವ್ಯೂಹ ರಚಿಸಲಾಗ್ತಿದೆ. ಸರ್ಕಾರ ಎಷ್ಟೇ ಕ್ರಮಗಳನ್ನ ಕೈಗೊಂಡರೂ, ಜನ ಸಾಥ್ ನೀಡದ ಹೊರತು ಇದು ಸಕ್ಸಸ್ ಆಗೋದಿಲ್ಲ. ಹೀಗಾಗಿ ಲಾಕ್​ಡೌನ್ ನಿಯಮಾವಳಿಗಳನ್ನ ಪಾಲಿಸಿ, ಜನ ಮನೆಯಲ್ಲೇ ಸೇಫಾಗಿ ಇರಬೇಕಿದೆ. https://www.facebook.com/Tv9Kannada/videos/2473799246228402/

Published On - 7:05 am, Tue, 28 April 20

Click on your DTH Provider to Add TV9 Kannada