ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೈಸೂರು-ಬೆಂಗಳೂರು ನಡುವೆ ಶೀಘ್ರ 10 ಪಥದ ಎಕ್ಸ್ ಪ್ರೆಸ್ ವೇ ಅಭಿವೃದ್ಧಿ ಪಡಿಸಲಿದೆ. ಇದರಲ್ಲಿ 6 ಪಥಗಳನ್ನು Access controlled expressway ಆಗಿ ಮತ್ತು ಎರಡೂ ಭಾಗದಲ್ಲಿ 2 ಪಥದ ಸರ್ವೀಸ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನ ಪರಿಷತ್ನಲ್ಲಿ ಸದಸ್ಯ ಮರಿತಿಬ್ಬೇಗೌಡರ ಪ್ರಶ್ನೆಗೆ ಉತ್ತರಿಸಿದ ಗೋವಿಂದ ಕಾರಜೋಳ, ಬೆಂಗಳೂರು-ನಿಡಗಟ್ಟ ಕಾಮಗಾರಿಗೆ ₹ 2190 ಕೋಟಿ ಹಾಗೂ ನಿಡಗಟ್ಟ-ಮೈಸೂರು ಕಾಮಗಾರಿಗೆ ₹ 2283 ಕೋಟಿ ವೆಚ್ಚ ಮಾಡಲಾಗಿದೆ. ಎರಡೂ ಕಾಮಗಾರಿಗಳು ಕ್ರಮವಾಗಿ ಶೇ 67.5 ಮತ್ತು ಶೇ 50.5 ಪೂರ್ಣಗೊಂಡಿವೆ. ಕೊರೊನಾ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಮಾಡಲಾಗಿದೆ. ಮೊದಲ ಯೋಜನೆ ಫೆ.2, 2022ಕ್ಕೆ ಮುಕ್ತಾಯ ಆಗಲಿದೆ. 2ನೇ ಯೋಜನೆ ಸೆ.7ಕ್ಕೆ ಮುಗಿಯಲಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ಕ್ರಮವಹಿಸುತ್ತೇವೆ ಎಂದಿದ್ದಾರೆ.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಿ.ಎಂ.ಇಬ್ರಾಹಿಂ ಅವಧಿ ಮುಗಿದ ನಂತರವೂ ಟೋಲ್ ಸಂಗ್ರಹ ನಡೆಯುತ್ತಿದೆ ನೈಸ್ ಕಾಮಗಾರಿ ಮುಗಿದು ಎಷ್ಟು ವರ್ಷ ಆಗಿದೆ? ಆದ್ರೆ ಇನ್ನು ಟೋಲ್ ಸಂಗ್ರಹ ಮಾಡ್ತಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದರು. ಈ ಪ್ರಶ್ನೆಗೆ ಉತ್ತರಿಸಿದ ಕಾರಜೋಳ, ಟೋಲ್ ಸಂಗ್ರಹದ ಅವಧಿ ಮುಗಿದ ಟೋಲ್ಗಳಿಂದ ಹಣ ಸಂಗ್ರಹ ಮಾಡುವುದನ್ನು ನಿಲ್ಲಿಸಲು ಆದೇಶ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಸಿದ್ದರಾಮಯ್ಯರನ್ನು ಬಿಜೆಪಿ ವಕ್ತಾರರಾಗಿ ನೇಮಕ ಮಾಡಿಲ್ಲ: ಡಿಸಿಎಂ ಗೋವಿಂದ ಕಾರಜೋಳ