ರಾಜ್ಯದಲ್ಲಿ ಇಂದು 1,680 ಜನರಿಗೆ ಕೊರೊನಾ ಸೋಂಕು ದೃಢ; 5 ಸಾವು

ರಾಜ್ಯದಲ್ಲಿ ಇಂದು 1,680 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ  ಇಂದು ಐವರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಇಂದು 1,680 ಜನರಿಗೆ ಕೊರೊನಾ ಸೋಂಕು ದೃಢ; 5 ಸಾವು
ಸಾಂಧರ್ಬಿಕ ಚಿತ್ರ
TV9kannada Web Team

| Edited By: Vivek Biradar

Aug 10, 2022 | 9:03 PM

ಬೆಂಗಳೂರು: ರಾಜ್ಯದಲ್ಲಿ ಇಂದು (ಆಗಸ್ಟ್ 10) 1,680 ಜನರಿಗೆ ಕೊರೊನಾ (Covid) ಸೋಂಕು ದೃಢಪಟ್ಟಿದ್ದು, ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ ಇಂದು ಐವರು ಸಾವನ್ನಪ್ಪಿದ್ದಾರೆ. ರಾಯಚೂರು (Raichuru) ಜಿಲ್ಲೆಯಲ್ಲಿ ಇಬ್ಬರು, ಚಿಕ್ಕಬಳ್ಳಾಪುರ (Chikkaballapur) , ಉತ್ತರ ಕನ್ನಡ (Uttar Kannada) ಮತ್ತು ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ಧಾರೆ.  ಬೆಂಗಳೂರಿನಲ್ಲಿಂದು (Bengaluru) 1,058 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 10,351 ಇದ್ದು,  ರಾಜ್ಯದಲ್ಲಿ ಕೊವಿಡ್​ ಪಾಸಿಟಿವಿಟಿ ರೇಟ್​ ಶೇಕಡಾ 6.85 ಇದೆ

ಭಾರತದಲ್ಲಿ 16,047 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ:  ಭಾರತದಲ್ಲಿ ಬುಧವಾರ (ಆಗಸ್ಟ್​ 10) ಒಟ್ಟು 16,047 ಹೊಸ ಕೊವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ. ಒಂದು ದಿನದಲ್ಲಿ ಚೇತರಿಸಿಕೊಂಡವರ ಸಂಖ್ಯೆ 19,539. ದೇಶದಲ್ಲಿ ಪ್ರಸ್ತುತ 1,28,261 ಸಕ್ರಿಯ ಪ್ರಕರಣಗಳಿವೆ. ಈವರೆಗೆ 4,35,35,610 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ದೇಶದ ದೈನಂದಿನ ಪಾಸಿಟಿವಿಟಿ ಸರಾಸರಿಯು ಶೇ 4.94 ಇದ್ದರೆ ವಾರದ ಪಾಸಿಟಿವಿಟಿ ಸರಾಸರಿಯು ಶೇ 4.90 ಇದೆ. ದೇಶದಲ್ಲಿ ಈವರೆಗೆ 203.03 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada