ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ನ್ಯಾಯಸಮ್ಮತವಾಗಿದೆ; ಭೂ ಪರಭಾರೆ ಮಾಡದಿದ್ರೆ ನಾನೇ ಪಿಐಎಲ್ ಸಲ್ಲಿಸುವೆ -ಕೆಸಿ ಕೊಂಡಯ್ಯ

ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ನ್ಯಾಯಸಮ್ಮತವಾಗಿದೆ; ಭೂ ಪರಭಾರೆ ಮಾಡದಿದ್ರೆ ನಾನೇ ಪಿಐಎಲ್ ಸಲ್ಲಿಸುವೆ -ಕೆಸಿ ಕೊಂಡಯ್ಯ
ಕೆಸಿ ಕೊಂಡಯ್ಯ

ಭೂಮಿ ಪರಭಾರೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಲೀಸ್ ಕಮ್ ಸೇಲ್ ಡೀಡ್ ಕ್ರಮ ಬದ್ಧವಾಗಿದೆ. ಸರ್ಕಾರವೇ ಲೀಸ್ ಕಮ್ ಸೇಲ್ ಗೆ ಒಪ್ಪಂದ ಮಾಡಿಕೊಂಡಿದೆ. 1994 ಮತ್ತು 2006 ರಲ್ಲಿ ಈ ಹಿಂದೆಯೂ ಕೂಡ ಒಪ್ಪಂದವಾಗಿದೆ. ಬಿಜೆಪಿ ಪಕ್ಷದ ಶಾಸಕರು ಇದನ್ನೇ ಅಸ್ತ್ರವಾಗಿ ಮಾಡಿಕೊಂಡಿದ್ದಾರೆ. ವಿರೋಧ ವ್ಯಕ್ತಪಡಿಸುವ ಶಾಸಕರಿಗೆ ಪತ್ರ ಬರೆದಿದ್ದೇನೆ. -ಕೆಸಿ ಕೊಂಡಯ್ಯ

TV9kannada Web Team

| Edited By: Ayesha Banu

Jun 03, 2021 | 1:06 PM

ಬಳ್ಳಾರಿ: ಜಿಂದಾಲ್ ಕಂಪನಿಗೆ 3667 ಎಕರೆ ಭೂಮಿ ಪರಭಾರೆ ಮಾಡುವುದು ನ್ಯಾಯ ಸಮ್ಮತವಾಗಿದೆ ಎಂದು ಬಳ್ಳಾರಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೆಸಿ ಕೊಂಡಯ್ಯ ಹೇಳಿದ್ದಾರೆ.

ಭೂಮಿ ಪರಭಾರೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಲೀಸ್ ಕಮ್ ಸೇಲ್ ಡೀಡ್ ಕ್ರಮಬದ್ಧವಾಗಿದೆ. ಸರ್ಕಾರವೇ ಲೀಸ್ ಕಮ್ ಸೇಲ್ ಗೆ ಒಪ್ಪಂದ ಮಾಡಿಕೊಂಡಿದೆ. 1994 ಮತ್ತು 2006 ರಲ್ಲಿ ಈ ಹಿಂದೆಯೂ ಕೂಡ ಒಪ್ಪಂದವಾಗಿದೆ. ಬಿಜೆಪಿ ಪಕ್ಷದ ಶಾಸಕರಿಗೆ ಸಮರ್ಥಿಸಿಕೊಳ್ಳಲು ಇದೇ ಅಸ್ತ್ರವಾಗಿದೆ. ಇನ್ನು ವಿರೋಧ ವ್ಯಕ್ತಪಡಿಸುವ ಶಾಸಕರಿಗೂ ಪತ್ರ ಬರೆದು ವಿಷಯ ಗಮನಕ್ಕೆ ತಂದಿರುವೆ. ಪರಭಾರೆ ವಿಚಾರ ಕ್ರಮಬದ್ದವಾಗಿದ್ದು ಅನಗತ್ಯ ಗೊಂದಲ ಸೃಷ್ಟಿಸದಂತೆ ಪತ್ರ ಬರೆದಿದ್ದೇನೆ. ಒಂದು ವೇಳೆ ಸರ್ಕಾರ ಭೂಮಿ ಪರಭಾರೆ ಮಾಡದಿದ್ರೆ ನಾನೇ ಪಿಐಎಲ್ ಸಲ್ಲಿಸುವೆ ಎಂದು ಹೇಳಿದ್ದಾರೆ.

ಭೂಮಿ ಪರಭಾರೆ ಮಾಡಲು ಸಚಿವ ಆನಂದ್ ಸಿಂಗ್ ವಿರೋಧ ಕೆಲ ತಿಂಗಳ ಹಿಂದೆ ಜಿಂದಾಲ್ ಕಂಪನಿಗೆ 3667 ಎಕರೆ ಭೂಮಿ ಪರಭಾರೆ ಮಾಡಲು ಸಚಿವ ಆನಂದ್ ಸಿಂಗ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಭೂಮಿಯನ್ನು ಲೀಸ್ ರೂಪದಲ್ಲಿ ಕೊಡಲಿ, ಪರಭಾರೆ ಮಾಡುವುದು ಬೇಡ. ಸುಮಾರು ಮೂರು ಸಾವಿರ ಕೋಟಿ ಬೆಲೆ ಬಾಳುವ ಭೂಮಿಯನ್ನು ಕಡಿಮೆ ದರದಲ್ಲಿ ಪರಭಾರೆ ಮಾಡುವುದು ಸರಿಯಲ್ಲ.

ನಾನು ಈ ಹಿಂದೆ ಕೂಡ ವಿರೋಧ ಮಾಡಿದ್ದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿರೋಧ ವ್ಯಕ್ತಪಡಿಸುವೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆನಂದ್ ಸಿಂಗ್ ಏಪ್ರಿಲ್ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ವಿಪಕ್ಷದಲ್ಲಿದ್ದಾಗ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈಗ ಅವರೇ ಪರಭಾರೆ ಮಾಡುತ್ತಿರುವುದು ಸರಿಯಲ್ಲ. ಸರ್ಕಾರ ಯಾವ ರೀತಿ ತೀರ್ಮಾನ ಕೈಗೊಳ್ಳುವುದೆಂದು ನೋಡುವೆ. ಸರ್ಕಾರದ ನಿರ್ಧಾರ ಬಳಿಕ ಮತ್ತೆ ನನ್ನ ತೀರ್ಮಾನ ತಿಳಿಸುವೆ ಎಂದು ಅವರು ತಿಳಿಸಿದ್ದರು.

ಇದನ್ನೂ ಓದಿ: ಜಿಂದಾಲ್ ಕಂಪನಿಗೆ 3667 ಎಕರೆ ಭೂಮಿ ಪರಭಾರೆ ಮಾಡಲು ಸಚಿವ ಆನಂದ್ ಸಿಂಗ್ ವಿರೋಧ

Follow us on

Most Read Stories

Click on your DTH Provider to Add TV9 Kannada