Kidney Dialysis: ಕಿಡ್ನಿ ಡಯಾಲಿಸಿಸ್​ಗೆ ಬರುವ ಜನರ ಪ್ರಮಾಣದಲ್ಲಿ ಹೆಚ್ಚಳ; ಬ್ಲ್ಯಾಕ್ ಫಂಗಸ್ ರೋಗಿಗಳಲ್ಲಿ ಹೆಚ್ಚಿನ ಸಮಸ್ಯೆ

TV9 Digital Desk

| Edited By: ganapathi bhat

Updated on: Jul 02, 2021 | 3:31 PM

ಬ್ಲ್ಯಾಕ್ ಫಂಗಸ್​ಗೆ ಪ್ರತಿ ದಿನವೂ 7ರಿಂದ 8 ಇಂಜೆಕ್ಷನ್‌ ನೀಡಲಾಗುತ್ತದೆ. ಅನಾರೋಗ್ಯಕ್ಕೆ ತುತ್ತಾದವರು ಬರೋಬ್ಬರಿ 4 ವಾರಕ್ಕೂ ಹೆಚ್ಚು ದಿನ ಆಸ್ಪತ್ರೆಯಲ್ಲಿರುತ್ತಾರೆ. ಈ ವೇಳೆ ಕಿಡ್ನಿ ಮೇಲೆ ಪರಿಣಾಮ ಆಗುವ ಸಾಧ್ಯತೆ ಇದೆ.

Kidney Dialysis: ಕಿಡ್ನಿ ಡಯಾಲಿಸಿಸ್​ಗೆ ಬರುವ ಜನರ ಪ್ರಮಾಣದಲ್ಲಿ ಹೆಚ್ಚಳ; ಬ್ಲ್ಯಾಕ್ ಫಂಗಸ್ ರೋಗಿಗಳಲ್ಲಿ ಹೆಚ್ಚಿನ ಸಮಸ್ಯೆ
ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ

ಬೆಂಗಳೂರು: ನಗರದ ಆಸ್ಪತ್ರೆಗಳಲ್ಲಿ ಕಿಡ್ನಿ ಡಯಾಲಿಸಿಸ್‌ಗೆ ಬರುವ ಜನರ ಸಂಖ್ಯೆ ಹೆಚ್ಚಳವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಕಿಡ್ನಿ ಸಮಸ್ಯೆ ಇರುವವರಲ್ಲಿ ಡಯಾಲಿಸಿಸ್​ಗೆ ಒಳಪಡುವರ ಪ್ರಮಾಣ ಶೇಕಡಾ 20ರಷ್ಟು ಹೆಚ್ಚಾಗಿದೆ. ಕೊವಿಡ್‌ ಸೋಂಕಿಗೆ ಹೆಚ್ಚು ಸ್ಟಿರಾಯ್ಡ್ ಪಡೆದಿದ್ದವರು, ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಈ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ತಿಳಿದುಬಂದಿದೆ.

ಬ್ಲ್ಯಾಕ್ ಫಂಗಸ್‌ಗೆ ನೀಡುವ ಔಷಧದಿಂದ ಕಿಡ್ನಿಯ ಮೇಲೆ ಪರಿಣಾಮ ಉಂಟಾಗುತ್ತದೆ. ಬ್ಲ್ಯಾಕ್ ಫಂಗಸ್​ಗೆ ಪ್ರತಿ ದಿನವೂ 7ರಿಂದ 8 ಇಂಜೆಕ್ಷನ್‌ ನೀಡಲಾಗುತ್ತದೆ. ಅನಾರೋಗ್ಯಕ್ಕೆ ತುತ್ತಾದವರು ಬರೋಬ್ಬರಿ 4 ವಾರಕ್ಕೂ ಹೆಚ್ಚು ದಿನ ಆಸ್ಪತ್ರೆಯಲ್ಲಿರುತ್ತಾರೆ. ಈ ವೇಳೆ ಕಿಡ್ನಿ ಮೇಲೆ ಪರಿಣಾಮ ಆಗುವ ಸಾಧ್ಯತೆ ಇದೆ. ಹೀಗಾಗಿ ಡಯಾಲಿಸಿಸ್‌ಗೆ ಹೆಚ್ಚು ಜನ ಹೋಗುತ್ತಿದ್ದಾರೆ ಎಂದು ರಂಗಾದೊರೈ ಆಸ್ಪತ್ರೆ ಇಎನ್​ಟಿ ಸರ್ಜನ್ ಸುಬ್ರಹ್ಮಣ್ಯ ರಾವ್ ಮಾಹಿತಿ ನೀಡಿದ್ದಾರೆ.

ನ್ವೇಷನಲ್ ಆಂಪೋಟೆರಿಸಿನ್ ಇಂಜೆಕ್ಷನ್ ತಗೊಂಡವರಿಗೆ ಈ ಸಮಸ್ಯೆ ಕಾಡುತ್ತಿದೆ. ನೀರಿನಲ್ಲಿ ಮಿಕ್ಸ್ ಮಾಡಿ ಆಂಪೊಟೆರಿಸಿನ್ ಇಂಜೆಕ್ಷನ್ ಕೊಡೋದನ್ನ ಕನ್ವೇಷನಲ್ ಆಂಪೋಟೆರಿಸಿನ್ ಅಂತಾರೆ ಎಂದು ರಂಗಾದೊರೈ ಆಸ್ಪತ್ರೆ ಇಎನ್​ಟಿ ಸರ್ಜನ್ ಸುಬ್ರಮಣ್ಯ ರಾವ್ ವಿವರಣೆ ನೀಡಿದ್ದಾರೆ. ಬ್ಲ್ಯಾಕ್ ಫಂಗಸ್ ತಂತು ಕಿಡ್ನಿಗೆ ಆಪತ್ತು ಉಂಟುಮಾಡಬಹುದು. ಹೆಚ್ಚು ಸ್ಟಿರಾಯ್ಡ್ ಪಡೆದಿರುವ ಕೊವಿಡ್ ಹಾಗೂ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಇದು ಕಂಟಕವಾಗಿ ಪರಿಣಮಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Kidney Stone: ಕಿಡ್ನಿ ಸ್ಟೋನ್ ಸಮಸ್ಯೆ ಏಕೆ ಕಂಡುಬರುತ್ತದೆ? ಅದರಿಂದ ರಕ್ಷಣೆ ಹೇಗೆ? ಇಲ್ಲಿದೆ ವಿವರ

ಹಣ, ಕಿಡ್ನಿ ಜೋಪಾನ! ಪ್ರಸಿದ್ಧ ಆಸ್ಪತ್ರೆಯ ಹೆಸರಲ್ಲಿ ಫೇಕ್ ವೆಬ್​ಸೈಟ್; ಕಿಡ್ನಿ ಮಾರಿ 5 ಕೋಟಿ ರೂಪಾಯಿ ಪಡೆಯಿರಿ ಎಂದು ಜಾಹೀರಾತು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada