ಆನೇಕಲ್: ಗೂಗಲ್ಪೇ ಇಲ್ಲ ಅಂದಿದ್ದಕ್ಕೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಹುಳಿಮಾವು ಬಳಿಯ ಡಿಎಲ್ಎಫ್ ಬಳಿ ನಡೆದಿದೆ. ಕಾಂತರಾಜು ಹಲ್ಲೆಗೆ ಒಳಗಾದ ಯುವಕ. ಕಳೆದ ಮೂರು ದಿನಗಳ ಹಿಂದೆ ಎಸ್ಎಲ್ಆರ್ ವೈನ್ಸ್ನಲ್ಲಿ ಕುಡಿಯಲು ಬಂದಿದ್ದ ಭರತ್ ಮತ್ತ ಇನ್ನಿಬ್ಬರು ಈ ಕೃತ್ಯವನ್ನು ಎಸಗಿದ್ದಾರೆ.
ಎಣ್ಣೆ ತೆಗೆದುಕೊಳ್ಳುವುದಕ್ಕೆ ಬಾರ್ಗೆ ಬಂದಿದ್ದ ಭರತ್ ಆಂಡ್ ಗ್ಯಾಂಗ್ ಹಣ ಪಾವತಿಸಲು ಕ್ಯಾಶ್ ಇಲ್ಲ ಗೂಗಲ್ ಪೇ ಮಾಡ್ತೀವಿ ಎಂದು ಗಲಾಟೆ ಮಾಡಿದ್ದಾರೆ. ನಂತರ ಬಾರ್ ಒಳಗೆ ನುಗ್ಗಿ ಚಾಕುವಿನಿಂದ ಕೆಲಸ ಮಾಡುತ್ತಿದ್ದ ಕಾಂತರಾಜು ಎಂಬ ಯುವಕನಿಗೆ ಚುಚ್ಚಿದ್ದಾರೆ. ಸದ್ಯ ಮೂವರಲ್ಲಿ ಭರತ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.