ಜಾರಿ ಬಿದ್ದ ಕೊಡಗು ಎಂಎಲ್ಸಿ, ಮುರಿದ ಕಾಲು; 45 ದಿನ ವಿಶ್ರಾಂತಿ ಪಡೆಯುವಂತೆ ಸುಜಾ ಕುಶಾಲಪ್ಪಗೆ ವೈದ್ಯರ ಸಲಹೆ

ಜಾರಿ ಬಿದ್ದ ಕೊಡಗು ಎಂಎಲ್ಸಿ, ಮುರಿದ ಕಾಲು; 45 ದಿನ ವಿಶ್ರಾಂತಿ ಪಡೆಯುವಂತೆ ಸುಜಾ ಕುಶಾಲಪ್ಪಗೆ ವೈದ್ಯರ ಸಲಹೆ
ಕೊಡಗು ಎಂಎಲ್ಸಿ ಸುಜಾ ಕುಶಾಲಪ್ಪ

ಮೈಸೂರು ಜಿಲ್ಲೆಯ ಕೆ.ಆರ್.ನಗರದ ಹೊಸ ಅಗ್ರಹಾರದ ರೈಲ್ವೆ ನಿಲ್ದಾಣ ಬಳಿ ಬಸ್-ಮಿನಿ‌ ಕ್ಯಾಂಟರ್ ನಡುವೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್ ಹಾಗೂ ಕ್ಯಾಂಟರ್ ನುಜ್ಜುಗುಜ್ಜಾಗಿದೆ.

TV9kannada Web Team

| Edited By: Ayesha Banu

May 18, 2022 | 8:20 PM

ಕೊಡಗು: ಓಡಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಕೊಡಗು ಎಂಎಲ್ಸಿ ಸುಜಾ ಕುಶಾಲಪ್ಪ(Kodagu MLC Suja Kushalappa) ಕಾಲು ಮುರಿದ ಘಟನೆ ನಡೆದಿದೆ. 45 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದು MLC ಸುಜಾ ವಿರಾಜಪೇಟೆ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ.

ರಸ್ತೆ ಅಪಘಾತದಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ ಮೈಸೂರು ಜಿಲ್ಲೆಯ ಕೆ.ಆರ್.ನಗರದ ಹೊಸ ಅಗ್ರಹಾರದ ರೈಲ್ವೆ ನಿಲ್ದಾಣ ಬಳಿ ಬಸ್-ಮಿನಿ‌ ಕ್ಯಾಂಟರ್ ನಡುವೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್ ಹಾಗೂ ಕ್ಯಾಂಟರ್ ನುಜ್ಜುಗುಜ್ಜಾಗಿದೆ. ರಸ್ತೆ ಅಪಘಾತದಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು ಗಾಯಾಳುಗಳಿಗೆ ತಾಲೂಕು & ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆ.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಬಿಸಿ ಕೋಟಾಕ್ಕೆ ಸುಪ್ರೀಂ ಒಪ್ಪಿಗೆ; ಕಾಂಗ್ರೆಸ್ ವಿರುದ್ಧ ಶಿವರಾಜ್ ಸಿಂಗ್ ಚೌಹಾಣ್ ಟೀಕಾ ಪ್ರಹಾರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮಗು ನೋಡಲು ಬಂದ ಅತ್ತೆಗೆ ಚಾಕು ಹಾಕಿದ ಅಳಿಯ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ತೆಗೆ ಪಾಪಿ ಅಳಿಯ ಚಾಕು ಇರಿದ ಘಟನೆ ನಡೆದಿದೆ. ಕುಟುಂಬ ಕಲಹದ ಹಿನ್ನೆಲೆ, ಅತ್ತೆ ಮೇಲೆ ಅಳಿಯ ಹಲ್ಲೆ ಮಾಡಿದ್ದಾನೆ. ರಮಜಾನ್ (25) ಎಂಬುವವನಿಂದ ಮಮ್ಮದಬೀ ಎಂಬ ಮಹಿಳೆಯ ಮೇಲೆ ಹಲ್ಲೆಯಾಗಿದ್ದು ಮಹಿಳೆಯ ಹೊಟ್ಟೆ ಭಾಗಕ್ಕೆ ರಮಜಾನ್ ಚಾಕು ಇರಿದಿದ್ದಾನೆ.ಮಗಳ ಮಗುವನ್ನ ನೋಡಲು ಮಮ್ಮದಬೀ ಆಸ್ಪತ್ರೆಗೆ ಬಂದಿದ್ದರು. ನನ್ನ ಮಗುವನ್ನ ನೀವು ಯಾಕೆ ನೋಡಲು ಬಂದಿದ್ದಿರಿ ಎಂದು ಆರೋಪಿ ಹಲ್ಲೆ ಮಾಡಿದ್ದಾನೆ.ಆಸ್ಪತ್ರೆಯ SICU ವಿಭಾಗದಲ್ಲಿ ಮಮ್ಮದಬೀ ಗೆ ಚಾಕು ಇರಿದಿದ್ದಾನೆ. ಚಾಕು ಇರಿತದಿಂದ ಮಹಿಳೆ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ವನ್ಯ ಜೀವಿಗಳ ಚರ್ಮ, ಕೊಂಬು, ಚಿಪ್ಪು ಮಾರಾಟಕ್ಕೆ ಯತ್ನಿಸಿದ ಆರೋಪಿಗಳ ಬಂಧನ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಬಳ್ಳಾರಿ ಘಟಕ ಕಾರ್ಯಾಚರಣೆ ನಡೆಸಿ ವನ್ಯ ಜೀವಿಗಳ ಚರ್ಮ, ಕೊಂಬು, ಚಿಪ್ಪು ಹಾಗೂ ಮೂಳೆಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ ಕೃಷ್ಣ ಮೃಗದ ತಲೆ ಬುರುಡೆ ಸಮೇತ ಇರುವ ಎರಡು ಕೊಂಬುಗಳು, ಕೃಷ್ಣ ಮೃಗದ ಚರ್ಮ, ಚಿಪ್ಪು, ಹಂದಿಯ ಚಿಪ್ಪುಗಳು ಹಾಗೂ ಅದರ ಮೂಳೆಗಳನ್ನು ವಶಕ್ಕೆ ಪಡೆಯಲಾಗಿದೆ. ಸಂಡೂರಿನ ಹೆಚ್.ಕೆ.ವೀರೇಶ, ವಿಜಯನಗರ ಜಿಲ್ಲೆಯ ಗುಡೇಕೋಟೆ ನಿವಾಸಿ ಹುಲಿಕುಂಟೆಪ್ಪ ಬಂಧಿತ ಆರೋಪಿಗಳು. ಬಂಧಿತರ ವಿರುದ್ಧ ವನ್ಯ ಜೀವಿ ಕಾಯ್ದೆಯ ಕಲಂ ಗಳಡಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada