ಹಸುವನ್ನೂ ಬಿಡದ ಕಾಮುಕ, ಗದ್ದೆಯಲ್ಲಿ ಮೇಯುತ್ತಿದ್ದ ಹಸುವಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದವ ಅಂದರ್

TV9kannada Web Team

TV9kannada Web Team | Edited By: Ramesh B Jawalagera

Updated on: Nov 30, 2022 | 4:41 PM

ಹಸುವಿನ‌ನೊಂದೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದ ವ್ಯಕ್ತಿಯೋರವನನ್ನು ಪೊಲೀಸರು ಬಂಧಿಸಿದ್ದಾರೆ.ಈ ವಿಚಿತ್ರ ಪ್ರಕರಣ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಹಸುವನ್ನೂ ಬಿಡದ ಕಾಮುಕ, ಗದ್ದೆಯಲ್ಲಿ ಮೇಯುತ್ತಿದ್ದ ಹಸುವಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದವ ಅಂದರ್
ಹಸುವಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದವ ಅಂದರ್

ಕೊಡಗು: ಮೇಯುತ್ತಿದ್ದ ಹಸುವಿನೊಂದಿಗೆ (Cow) ಅಸಹಜ ಲೈಂಗಿಕ ಕ್ರಿಯೆ (Unnatural Sex)ನಡೆಸಿದ್ದ ವಿಕೃತ ಕಾಮಿಯನ್ನು ಪೊಲೀಸರು, ಇಂದು(ನವೆಂಬರ್ 30) ಕೊಡಗಿನಲ್ಲಿ(Kodagu) ಬಂಧಿಸಿದ್ದಾರೆ. ದೇವಯ್ಯ ಎನ್ನುವವರಿಗೆ ಸೇರಿದ್ದ ಹಸು ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದ ಅಬೂಬಕ್ಕರ್‌ ಸಿದ್ದಿಕಿ (40) ಬಂಧಿತ ಆರೋಪಿ.

ಕಳೆದ‌ 15 ದಿನಗಳಿಂದ ಅಂದಗೋವೆಗೆ ಬೈಕ್‌ನಲ್ಲಿ ಆಗಮಿಸುತ್ತಿದ್ದ ಅಬುಬಕ್ಕರ್, ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ‌ ಸಮೀಪದ ಅಂದಗೋವೆಯಲ್ಲಿ ಹಸುವಿನ ಜೊತೆ ಸೆಕ್ಸ್ ಮಾಡಿದ್ದ. ಹೀಗೆ ಒಂದು ದಿನ ಹೊಲದಲ್ಲಿ ಮೇಯುತ್ತಿದ್ದ ಹಸುವಿನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಅಬೂಬಕ್ಕರ್‌ ಸಿಕ್ಕಿಬಿದ್ದಿದ್ದಾನೆ.

ತಾಜಾ ಸುದ್ದಿ

ಇದನ್ನೂ ಓದಿ: ಉಂಡು ಹೋದ..ಚಿನ್ನದ ಒಡವೆ ಕೊಂಡು ಹೋದ: ಮದ್ವೆ ಆಗ್ತೀನಿ ಎಂದು ಬಂದವ ವಿಧವೆ ಬಾಳಲ್ಲಿ ಚೆಲ್ಲಾಟ

ದೇವಯ್ಯ ಅವರು ತಮ್ಮ ಮೂರು ಹಸುಗಳನ್ನ ಗದ್ದೆಯಲ್ಲಿ ಕಟ್ಟುತ್ತಿದ್ದರು. ಘಟನೆ ಬಳಿಕ ಗಬ್ಬದ ಹಸು ಕರುವಿಗೆ ಜನ್ಮ ನೀಡಿದೆ. ಆದ್ರೆ, ಜನಿಸುತ್ತಲೇ ಕರು ಸಾವನ್ನಪ್ಪಿದೆ. ಗಬ್ಬದ ಹಸುವಿನ ಜೊತೆಗೂ ಸಂಭೋಗ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ದೇವಯ್ಯ ಅವರು ಸುಂಟಿಕೊಪ್ಪ ಪೊಲಿಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಅಬುಬಕ್ಕರ್ ಮತ್ತು ಹಸುವಿಗೆ ವೈದ್ಯಕೀಯ ಪರೀಕ್ಷೆಗೊಳಪಡಿಸಿ ತನಿಖೆ ಮುಂದುವರಿಸಿದ್ದಾರೆ.

ದೇವಯ್ಯ ನೀಡಿದ ದೂರಿನಲ್ಲೇನಿದೆ?

ದಿನಾಂಕ 27-11-2022ರಂದು ಮಧ್ಯಾಹ್ನ 2 ಗಮಟೆಗೆ ಸುಂಟಿಕೊಪ್ಪ ಸಂತೆಗೆ ಹೋಗಿ ವಾಪಸ್ ಮನೆಗೆ ಬರುತ್ತಿದ್ದಾಗ ಗದ್ದೆಯ ದಾರಿಯಲ್ಲಿ ಒಂದು ಕೆಂಪು ಬಣ್ಣದ ಕೆಎ -09-6223 ಹೀರೋ ಹೋಂಡಾ ಪ್ಯಾಷನ್ ಪ್ರೋ ಬೈಕ್​ ನಿಂತಿತ್ತು. ಅದನ್ನು ಗಮನಿಸಿದ ದೇವಯ್ಯ ಮನೆಗೆ ಹೋಗಿ ಬಟ್ಟೆ ಸಂತೆಯಲ್ಲಿ ತಂದಿದ್ದ ಸಮಾನುಗಳನ್ನು ಇಟ್ಟು ಗದ್ದೆಯ ಬಳಿ ಹೋದಾಗ ಹಸುವಿನೊಂದಿಗೆ ಸಂಭೋಗ ಮಾಡುತ್ತಿದ್ದ. ಬಳಿಕ ದೇವಯ್ಯನನ್ನು ನೋಡಿ ಆರೋಪಿ ಓಡಿ ಹೋಗಲು ಯತ್ನಿಸಿದ್ದಾನೆ. ಆದರೂ ದೇವಯ್ಯ ಆತನನ್ನು ಹಿಡಿದು ವಿಚಾರಣೆ ಮಾಡಿದಾಗ ಎಲ್ಲಾವನ್ನು ಬಾಯ್ಬಿಟ್ಟಿದ್ದಾನೆ. ಬಳಿಕ ಆರೋಪಿ ಅಬುಬಕ್ಕರ್ ಹಾಗೂ ಆತನ ಹೀರೋ ಹೋಂಡಾ ಪ್ಯಾಷನ್ ಪ್ರೋ ಬೈಕ್ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada