ಕೊಡಗಿನ ಭಾವೀ ಪೈಲಟ್ ಗುಜರಾತ್​ನಲ್ಲಿ ಆತ್ಮಹತ್ಯೆ: ಸಾವಿನ ಸುತ್ತ ಅನುಮಾನದ ಹುತ್ತ

ಮೇ ತಿಂಗಳಲ್ಲೇ ತರಬೇತಿ ಅಂತ್ಯವಾಗಿ ಈತ ಪೈಲೆಟ್ ಆಗಿ ಹೊರ ಬರಬೇಕಿತ್ತು. ಆದರೆ ಲಾಕ್ಡೌನ್ ಕಾರಣದಿಂದಾಗಿ ತರಬೇತಿ ಅವಧಿಯೂ ಮುಂದೂಡಿಕೆಯಾಗಿತ್ತು. ಹಾಗಾಗಿ ತರಬೇತಿ ಮುಗಿಯಲೂ ಇನ್ನೂ ಎರಡು ತಿಂಗಳಷ್ಟೇ ಬಾಕಿ ಉಳಿದಿತ್ತು. ತರಬೇತಿ ಮುಗಿಸಿ ಆದಷ್ಟು ಬೇಗನೆ ಬರುವುದಾಗಿ ತಮ್ಮ ಪೋಷಕರ ಜೊತೆ ಹೇಳುತ್ತಿದ್ದನಂತೆ.

ಕೊಡಗಿನ ಭಾವೀ ಪೈಲಟ್ ಗುಜರಾತ್​ನಲ್ಲಿ ಆತ್ಮಹತ್ಯೆ: ಸಾವಿನ ಸುತ್ತ ಅನುಮಾನದ ಹುತ್ತ
ಯುವಕ ಶಿಬಿ ಬೋಪಯ್ಯ

ಕೊಡಗು: ಭವಿಷ್ಯದಲ್ಲಿ ಪೈಲೆಟ್ ಆಗಿ ಆಕಾಶದಲ್ಲಿ ಹಾರಾಡಬೇಕು ಅಂತ ಕನಸು ಕಂಡಿದ್ದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತಿನ ಅಹಮದಾಬಾದ್​​ನಲ್ಲಿ ನಡೆದಿದೆ. ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದ ನಿವಾಸಿ ಶಿಬಿ ಬೋಪಯ್ಯ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಅಹಮದಾಬಾದ್​ನ ಏರೋನಾಟಿಕಲ್ ಟ್ರೈನಿಂಗ್ ಸೆಂಟರ್​ನಲ್ಲಿ ಪೈಲೆಟ್ ತರಬೇತಿ ಪಡೆಯುತ್ತಿದ್ದ.

ಮೇ ತಿಂಗಳಲ್ಲೇ ತರಬೇತಿ ಅಂತ್ಯವಾಗಿ ಈತ ಪೈಲೆಟ್ ಆಗಿ ಹೊರ ಬರಬೇಕಿತ್ತು. ಆದರೆ ಲಾಕ್​ಡೌನ್​ ಕಾರಣದಿಂದಾಗಿ ತರಬೇತಿ ಅವಧಿಯೂ ಮುಂದೂಡಿಕೆಯಾಗಿತ್ತು. ಹಾಗಾಗಿ ತರಬೇತಿ ಮುಗಿಯಲೂ ಇನ್ನೂ ಎರಡು ತಿಂಗಳಷ್ಟೇ ಬಾಕಿ ಉಳಿದಿತ್ತು. ತರಬೇತಿ ಮುಗಿಸಿ ಆದಷ್ಟು ಬೇಗನೆ ಬರುವುದಾಗಿ ತಮ್ಮ ಪೋಷಕರ ಜೊತೆ ಹೇಳುತ್ತಿದ್ದನಂತೆ. ಪ್ರತಿದಿನ ರಾತ್ರಿ ಊಟದ ಬಳಿಕ ತಂದೆ ತಾಯಿ ಜೊತೆ ವೀಡಿಯೋಕಾಲ್ ಮಾಡಿ ಮಾತನಾಡಿಯೇ ಮಲಗುತ್ತಿದ್ದನಂತೆ.

ಆದರೆ ಮೊನ್ನೆ ರಾತ್ರಿ ಆತನ ಕರೆ ಬಂದಿರಲಿಲ್ಲ. ಪೋಷಕರು ಕರೆ ಮಾಡಿದರೂ ಸ್ವೀಕರಿಸಲಿಲ್ಲವಂತೆ. ಇದೇ ವೇಳೆ ಅಹಮದಾಬಾದ್ ಪೊಲೀಸರು ಬೆಂಗಳೂರಿನಲ್ಲಿರುವ ಶಿಬಿಯ ಸಹೋದರಿಗೆ ಕರೆ ಮಾಡಿ ಶಿಬಿ ಮರಕ್ಕೆ ನೇಣು ಹಾಕಿಕೊಂಡಿರುವ ಸುದ್ದಿಯನ್ನು ಹೇಳಿದ್ದಾರೆ. ಸಹೋದರನ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದಪ್ಪಳಿಸಿದೆ. ತಕ್ಷಣವೇ ತಂದೆ ತಾಯಿಗೆ ವಿಷಯ ತಿಳಿಸಿರುವ ಸಹೋದರಿ ಇದೀಗ ಅಹಮದಾಬಾದ್ಗೆ ತೆರಳಿದ್ದಾರೆ. ತಮ್ಮ ಮಗನ ಸಾವಿನ ಸುದ್ದಿ ಸುಳ್ಳಾಗಿರಲಿ ಅಂತ ಮನೆಯವರು ಪ್ರಾರ್ಥಿಸುತ್ತಿದ್ದಾರೆ. ಶಿಬಿ ಮೊನ್ನೆಯವರೆಗೂ ಸಹಜವಾಗಿಯೇ ಇದ್ದನಂತೆ. ಹಾಗಾಗಿ ಈತನ ಸಾವಿನ ಸುತ್ತ ಇದೀಗ ಹಲವು ಅನುಮಾನಗಳು ಕಾಡುತ್ತಿವೆ. ಸದ್ಯ ಅಹಮದಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದು, ಸತ್ಯ ಹೊರಬರಬೇಕಿದೆ.

ಇದನ್ನೂ ಓದಿ

ಕೊರೊನಾ ಭಯದಿಂದಲೇ ಇಡೀ ಕುಟುಂಬ ನಾಶ, ಜ್ವರ ಕಾಣಿಸಿಕೊಂಡಿದಕ್ಕೆ ಎಲ್ಲರೂ ಆತ್ಮಹತ್ಯೆಗೆ ಶರಣು

ಉತ್ತರ ಪ್ರದೇಶದಲ್ಲಿ ನಾಯಕತ್ವ ಬದಲಾವಣೆ?..ಊಹಾಪೋಹಗಳಿಗೆ ತೆರೆ; ಪ್ರಮುಖ ವ್ಯಕ್ತಿಯೊಬ್ಬರ ಪ್ರವೇಶ ನಿಶ್ಚಿತ !

(A young man who was training as a pilot has committed suicide in Gujarat)