Elephant Attack: ವಿರಾಜಪೇಟೆಯಲ್ಲಿ ಒಣಗಲು ಹಾಕಿದ್ದ 3,000 ಕೆಜಿ ಕಾಫಿ ಬೀಜಗಳ ತಿಂದುತೇಗಿದ ಕಾಡಾನೆ ಹಿಂಡು!

Elephants Attack: ಕೆಲವು ದಿನಗಳಿಂದ ರಾಜ್ಯದಲ್ಲಿ ಹಲವು ಕಡೆ ಕಾಡಾನೆಗಳ ದಾಳಿಯಿಂದ ರೈತರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕಬ್ಬು, ರಾಗಿ, ಕಾಫಿ, ಬಾಳೆ, ಅಡಿಕೆ ಸೇರಿದಂತೆ ಹಲವು ಬೆಳೆಗಳನ್ನು ನಾಶಪಡಿಸುವ ಕಾಡಾನೆಗಳ ದಾಳಿಗೆ ಸೂಕ್ತ ಪರಿಹಾರವೂ ಸಿಗುತ್ತಿಲ್ಲ ಎಂದು ಕೆಲವು ಭಾಗದ ರೈತರು ತಲೆ ಕೆಡೆಸಿಕೊಂಡಿದ್ದಾರೆ.

  • TV9 Web Team
  • Published On - 14:50 PM, 20 Feb 2021
Elephant Attack: ವಿರಾಜಪೇಟೆಯಲ್ಲಿ ಒಣಗಲು ಹಾಕಿದ್ದ 3,000 ಕೆಜಿ ಕಾಫಿ ಬೀಜಗಳ ತಿಂದುತೇಗಿದ ಕಾಡಾನೆ ಹಿಂಡು!
ಆನೆಗಳ ದಾಳಿಗೆ ಕಂಗಾಲಾಗಿರುವ ಬಾಳೆ ಬೆಳೆದ ರೈತರು, ಒಣ ಹಾಕಿದ ಕಾಫಿ ಬೀಜಗಳ ಮೇಲೆ ಆನೆಗಳ ದಾಳಿ

ಮಡಿಕೇರಿ: ರೈತರಿಗೆ ಎದುರಾಗುವ ಸಮಸ್ಯೆಗಳು ಒಂದೆರಡಲ್ಲ. ಒಮ್ಮೆ ಬೆಳೆ ಕೈಕೊಟ್ಟರೆ ಕೆಲವೊಮ್ಮೆ ಮಳೆ ಕೈಕೊಡುತ್ತದೆ. ಇನ್ನೊಮ್ಮೆ ಪ್ರಾಣಿಗಳ ಹಾವಳಿ ತೀರಾ ನಷ್ಟವನ್ನುಂಟು ಮಾಡುತ್ತವೆ. ವರ್ಷಪೂರ್ತಿ ಬೆವರು ಸುರಿಸಿ ಬೆಳೆದ ಬೆಳೆ ಇನ್ನೇನು ಫಸಲು ಬರುತ್ತದೆ ಎನ್ನುವ ಸಂತೋಷದ ನಿರೀಕ್ಷೆಯಲ್ಲಿರುವ ರೈತರಿಗೆ ಕೆಲವೇ ಸಮಯದಲ್ಲಿ ಪ್ರಾಣಿಗಳ ಹಾವಳಿಯಿಂದ ಬೆಳೆ ಸಂಪೂರ್ಣವಾಗಿ ನಾಶಾವಾದಾಗ ರೈತರು ಆತಂಕಕ್ಕೆ ಒಳಗಾಗುತ್ತಾರೆ.

ಕೆಲವು ದಿನಗಳಿಂದ ರಾಜ್ಯದಲ್ಲಿ ಹಲವು ಕಡೆ ಕಾಡಾನೆಗಳ ದಾಳಿಯಿಂದ ರೈತರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕಬ್ಬು, ರಾಗಿ, ಕಾಫಿ, ಬಾಳೆ, ಅಡಿಕೆ ಸೇರಿದಂತೆ ಹಲವು ಬೆಳೆಗಳನ್ನು ನಾಶಪಡಿಸುವ ಕಾಡಾನೆಗಳ ದಾಳಿಗೆ ಸೂಕ್ತ ಪರಿಹಾರವೂ ಸಿಗುತ್ತಿಲ್ಲ ಎಂದು ಕೆಲವು ಭಾಗದ ರೈತರು ತಲೆ ಕೆಡೆಸಿಕೊಂಡಿದ್ದಾರೆ. ಹಾಸನ, ಮಡಿಕೇರಿ, ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳ ರೈತರು ಕಾಡಾನೆಗಳ ಉಪಟಳಕ್ಕೆ ಹೈರಾಣಾಗಿದ್ದಾರೆ.

ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿರಾಜಪೇಟೆ ತಾಲೂಕಿನ ಪಾಲಂಗಾಲದಲ್ಲಿ ಒಣಗಲು ಹಾಕಿದ್ದ ಸುಮಾರು 3,000 ಕೆಜಿ ಕಾಫಿ ಬೀಜಗಳನ್ನು ತಿಂದಿವೆ. ಬಿಪಿನ್ ಎಂಬುವರಿಗೆ ಸೇರಿದ ಕಾಫಿ ಹಣ್ಣನ್ನು ಕೊಯ್ದು ಒಗಣಲು ಹಾಕಿದ್ದರು. ಆದರೆ ಕಾಫಿ ರಾಶಿಗೆ ಕಾಲಿಟ್ಟ ಕಾಡಾನೆಗಳ ಹಿಂಡು ರಾತ್ರಿ ಪೂರಾ ಮನಸೋ ಇಚ್ಛೆಯಂತೆ ತಿಂದಿವೆ. ಮಾತ್ರವಲ್ಲದೇ ಗಜಪಡೆ ಕಾಫಿಗಿಡಗಳನ್ನು ನಾಶಪಡಿಸಿದ್ದು, ಎಸ್ಟೇಟ್ ಮಾಲಿಕರಿಗೆ ಸಹಸ್ರಾರು ನಷ್ಟವಾಗಿದೆ.

ಬುಡ ಸಮೇತ ನೆಲಕ್ಕೆ ಉರುಳಿರುವ ಬಾಳೆ ಗಿಡಗಳು

ಬಾಳೆ ತೋಟಕ್ಕೆ ಕಾಲಿಟ್ಟ ಆನೆಗಳ ಹಿಂಡು ತೋಟದ ಮಧ್ಯೆ ಮಲ ವಿಸರ್ಜನೆ ಮಾಡಿವೆ.

ಕಾಫಿ ಗಿಡಗಳನ್ನ ಕಿತ್ತಿರುವ ಆನೆಗಳು

ಇನ್ನೂ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಾಣಸಮುದ್ರ ಗ್ರಾಮದ ಬಳಿ ಇಂದು (ಫೆಬ್ರವರಿ 20) ಕಾಡಾನೆಗಳ ದಾಳಿಯಿಂದಾಗಿ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿದೆ. ಬೆಂಗಳೂರಿನ ನಿವಾಸಿ ರಾಜಶೇಖರ ರೆಡ್ಡಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿದ್ದು, ಸುಮಾರು ಒಂದು ಎಕರೆಗೂ ಹೆಚ್ಚು ಪ್ರದೇಶದ ಬಾಳೆ ಬೆಳೆಯನ್ನು ಹಾಳು ಮಾಡಿವೆ. ಶಿಂಷಾ ಅರಣ್ಯ ಪ್ರದೇಶದಿಂದ ಕಾಡಾನೆಗಳ ಹಿಂಡು ಬಂದು ಬೆಳೆಯನ್ನು ಹಾಳು ಮಾಡಿವೆ. ನಮಗಾದ ನಷ್ಠಕ್ಕೆ ಪರಿಹಾರವನ್ನು ನೀಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡುತ್ತಿದ್ದಾರೆ.

ಒಣ ಹಾಕಿದ ಕಾಫಿ ಬೀಜಗಳನ್ನು ಎಳೆದಾಡಿದ ಆನೆಗಳು

ಕಾಫಿ ಬೀಜಗಳನ್ನು ಒಣ ಹಾಕಿದ ಟಾರ್ಪಲ್​ಗಳನ್ನು ಹಾಳು ಮಾಡಿದ ಗಜಪಡೆ

ಇದನ್ನೂ ಓದಿ: ಹುಣಸೂರು ತಾಲೂಕಿನ ಜಮೀನಿನಲ್ಲಿ ಕೆಲಸ ಮಾಡುವಾಗ JCB ಗೆ ಗುದ್ದಿದ ಕಾಡಾನೆ!

ಇದನ್ನೂ ಓದಿ: ಕಾಡಾನೆ ದಾಳಿಗೆ ಟ್ರ್ಯಾಕ್ಟರ್ ಟ್ರಾಲಿ, ಕಾರು ಜಖಂ