ಮಗಳಿಂದಲೇ ಅತ್ಯಾಚಾರ ಆರೋಪ.. ಪತ್ನಿ, ಮಗಳ ಹೆಸರು ಬರೆದು ಆತ್ಮಹತ್ಯೆಗೆ ಶರಣಾದ ಅಪ್ಪ

ಭರತ್ ಪುತ್ರಿ ಮೇಘ ತಂದೆಯ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಳು. ಆದ್ರೆ ಈ ಕೇಸ್ ಕೋರ್ಟ್​ನಲ್ಲಿ ನಿಲ್ಲಲಿಲ್ಲ. ವಾದ-ವಿವಾದ, ತನಿಖೆಗಳಾಗಿ ಕೊನೆಗೆ ಭರತ್ ಆರೋಪ ಮುಕ್ತನಾಗಿ ಬಂದಿದ್ದರು.

  • TV9 Web Team
  • Published On - 11:26 AM, 2 Apr 2021
ಮಗಳಿಂದಲೇ ಅತ್ಯಾಚಾರ ಆರೋಪ.. ಪತ್ನಿ, ಮಗಳ ಹೆಸರು ಬರೆದು ಆತ್ಮಹತ್ಯೆಗೆ ಶರಣಾದ ಅಪ್ಪ
ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪುದಿಯೊಕ್ಕಡ ಭರತ್

ಮಡಿಕೇರಿ: ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮರಗೋಡುನಲ್ಲಿ ನಡೆದಿದೆ. ಪುದಿಯೊಕ್ಕಡ ಭರತ್(55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತನ್ನ ಸಾವಿಗೆ ಪತ್ನಿ, ಮಗಳೇ ಕಾರಣವೆಂದು ಡೆತ್‌ನೋಟ್​ನಲ್ಲಿ ಭರತ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆರೋಪ ಮುಕ್ತರಾಗಿ ಬಂದಿದ್ದರೂ ತೀವ್ರ ಮಾನಸಿಕ ಹಿಂಸೆ ನೀಡುತ್ತಿದ್ದರು
ಇದೊಂದು ಅಪರೂಪದ ಪ್ರಕರಣ ಏಕೆಂದರೆ ಸ್ವಂತ ಅಪ್ಪನ ಮೇಲೆಗೆ ಮಗಳು ಅತ್ಯಾಚಾರದ ಆರೋಪ ಹೊರಿಸಿದ್ದಳು. ಹಾಗೂ ಹೆಂಡತಿ, ಮಗಳು ಸೇರಿಕೊಂಡು ಭರತ್​ನಿಗೆ ಚಿತ್ರ ಹಿಂಸೆ ನೀಡುತ್ತಿದ್ದರಂತೆ. ಹೀಗಾಗಿ ಮನನೊಂದ ಭರತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಪತ್ನಿ, ಮಗಳೇ ಕಾರಣವೆಂದು ಡೆತ್‌ನೋಟ್ ಬರೆದಿಟ್ಟಿದ್ದಾರೆ. ಭರತ್ ಪುತ್ರಿ ಮೇಘ ತಂದೆಯ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಳು. ಆದ್ರೆ ಈ ಕೇಸ್ ಕೋರ್ಟ್​ನಲ್ಲಿ ನಿಲ್ಲಲಿಲ್ಲ. ವಾದ-ಪ್ರತಿವಾದ, ತನಿಖೆಗಳಾಗಿ ಕೊನೆಗೆ ಭರತ್ ಆರೋಪ ಮುಕ್ತನಾಗಿ ಬಂದಿದ್ದರು.

ದೇಶದಲ್ಲಿ ಅತ್ಯಾಚಾರ ಕುರಿತ ಕಾನೂನು ಬದಲಾಗಬೇಕು

ಆದ್ರೆ ಆರೋಪ ಮುಕ್ತರಾಗಿ ಬಂದಿದ್ದರೂ ತೀವ್ರ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಪತ್ನಿ ಮತ್ತು ಮಗಳ ವಿರುದ್ಧ ಭರತ್ ಡೆತ್‌ನೋಟ್‌ನಲ್ಲಿ ಆರೋಪ ಮಾಡಿದ್ದಾರೆ. ದೇಶದಲ್ಲಿ ಅತ್ಯಾಚಾರ ಕುರಿತ ಕಾನೂನು ಬದಲಾಗಬೇಕು ಎಂದು ಡೆತ್‌ನೋಟ್‌ನಲ್ಲಿ ಭರತ್ ಮನವಿ ಮಾಡಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

Madikeri Man Suicide

ಪುದಿಯೊಕ್ಕಡ ಭರತ್

ಇದನ್ನೂ ಓದಿ: ಟ್ಯಾಕ್ಸಿ ಚಾಲಕ ಪ್ರತಾಪ್ ಆತ್ಮಹತ್ಯೆ ನಂತರ ಎಚ್ಚೆತ್ತ ರಾಜ್ಯ ಸರ್ಕಾರ; ಟ್ಯಾಕ್ಸಿ ಪ್ರಯಾಣ ದರ ಹೆಚ್ಚಳ

(Father writes Death Note and commits suicide in Madikeri)