ಪಾನಮತ್ತ ವ್ಯಕ್ತಿಯಿಂದ ಮನೆಗೆ ಬೀಗ ಹಾಕಿ ಬೆಂಕಿ; 6 ವರ್ಷದ ಬಾಲಕಿ ಸೇರಿ ಆರು ಜನರು ಬೆಂಕಿಗೆ ಆಹುತಿ

ಕಂಠಪೂರ್ತಿ ಕುಡಿದುಬಂದ ಬೋಜ ಮನೆಯ ಹೊರಗಿನಿಂದ ಬೆಂಕಿ ಹಚ್ಚಿದ ವೇಳೆ ಮನೆಯೊಳಗಿದ್ದವರು ನಿದ್ರಿಸುತ್ತಿದ್ದರು. ಆತ ಹೊರಗಿನಿಂದ ಬಾಗಿಲು ಹಾಕಿ ಬೆಂಕಿ ಹಚ್ಚಿದ ಪರಿಣಾಮ ಬೇಬಿ(45), ಸೀತೆ(40), ಪ್ರಾರ್ಥನಾ(6) ಸಜೀವ ದಹನವಾಗಿದ್ದು, ವಿಶ್ವಾಸ್(3), ವಿಶ್ವಾಸ್(6), ಪ್ರಕಾಶ್(7) ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

  • TV9 Web Team
  • Published On - 10:06 AM, 3 Apr 2021
ಪಾನಮತ್ತ ವ್ಯಕ್ತಿಯಿಂದ ಮನೆಗೆ ಬೀಗ ಹಾಕಿ ಬೆಂಕಿ; 6 ವರ್ಷದ ಬಾಲಕಿ ಸೇರಿ ಆರು ಜನರು ಬೆಂಕಿಗೆ ಆಹುತಿ
ಸಾಂದರ್ಭಿಕ ಚಿತ್ರ

ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದಲ್ಲಿ ಪಾನಮತ್ತ ವ್ಯಕ್ತಿಯ ದುಷ್ಕೃತ್ಯಕ್ಕೆ 6 ಮಂದಿ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಬೋಜ ಎಂಬಾತ ಮದ್ಯ ಸೇವಿಸಿ ಬಂದು ಎರವರ ಮಂಜು ಎನ್ನುವವರ ಮನೆ ಬಾಗಿಲು ಹಾಕಿ ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಮನೆಯೊಳಗೆ ನಿದ್ರಿಸುತ್ತಿದ್ದವರು ಬೆಂಕಿಗೆ ಆಹುತಿಯಾಗಿದ್ದಾರೆ. ಒಟ್ಟು ಎಂಟು ಜನರ ಪೈಕಿ ಮೂವರು ಸಜೀವ ದಹನವಾಗಿದ್ದು, ಮೂವರು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಇನ್ನುಳಿದ ಇಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಂಠಪೂರ್ತಿ ಕುಡಿದುಬಂದ ಬೋಜ ಮನೆಯ ಹೊರಗಿನಿಂದ ಬೆಂಕಿ ಹಚ್ಚಿದ ವೇಳೆ ಮನೆಯೊಳಗಿದ್ದವರು ನಿದ್ರಿಸುತ್ತಿದ್ದರು. ಆತ ಹೊರಗಿನಿಂದ ಬಾಗಿಲು ಹಾಕಿ ಬೆಂಕಿ ಹಚ್ಚಿದ ಪರಿಣಾಮ ಬೇಬಿ(45), ಸೀತೆ(40), ಪ್ರಾರ್ಥನಾ(6) ಸಜೀವ ದಹನವಾಗಿದ್ದು, ವಿಶ್ವಾಸ್(3), ವಿಶ್ವಾಸ್(6), ಪ್ರಕಾಶ್(7) ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಭಾಗ್ಯ (40) ಪಾಚೆ (60) ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ಹತ್ತಾರು ಎಕರೆ ಅರಣ್ಯ ಭಸ್ಮ; ಬೆಂಕಿಯಿಂದ ತಪ್ಪಿಸಿಕೊಳ್ಳಲು ಜಿಂಕೆ, ಕೃಷ್ಣಮೃಗಗಳ ಪರದಾಟ 

ಅಗ್ನಿ ಅವಘಡ; ಬಳ್ಳಾರಿಯಲ್ಲಿ ಕೋಟಿ ಕೋಟಿ ಮೌಲ್ಯದ ಕಾಟನ್ ಸುಟ್ಟು ಕರಕಲು