ಮಡಿಕೇರಿ ನಗರಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಮಂಗಳಮುಖಿ ದೀಕ್ಷಾ.ಕೆ

ಅವರು ತಮ್ಮ ನಗರವನ್ನು ಅಭಿವೃದ್ಧಿ ಮಾಡುವ ಗುರಿ ಹೊಂದಿದ್ದು, ಮಂಗಳಮುಖಿಯರೂ ಸಮಾಜದ ಮುಖ್ಯವಾಹಿನಿಯಲ್ಲಿ ಬರಬೇಕು ಎಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ದೀಕ್ಷಾ. ಕೆ ತಿಳಿಸಿದ್ದಾರೆ.

  • TV9 Web Team
  • Published On - 13:52 PM, 16 Apr 2021
ಮಡಿಕೇರಿ ನಗರಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಮಂಗಳಮುಖಿ ದೀಕ್ಷಾ.ಕೆ
ಮಂಗಳಮುಖಿ ದೀಕ್ಷಾ.ಕೆ

ಮಡಿಕೇರಿ: ಜಿಲ್ಲೆಯ ನಗರಸಭೆ ಚುನಾವಣೆಗೆ ಮಂಗಳಮುಖಿಯೋರ್ವರು ಸ್ಪರ್ಧಿಸಲಿದ್ದಾರೆ.  ಮಡಿಕೇರಿನಗರದ 21ನೇ ವಾರ್ಡ್​ನಿಂದ ಮಂಗಳಮುಖಿ ದೀಕ್ಷಾ.ಕೆ ಅಖಾಡಕ್ಕೆ ಇಳಿದಿದ್ದಾರೆ.  ದೀಕ್ಷಾ.ಕೆ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ನಗರವನ್ನು ಅಭಿವೃದ್ಧಿ ಮಾಡುವ ಗುರಿ ಹೊಂದಿದ್ದು, ಮಂಗಳಮುಖಿಯರೂ ಸಮಾಜದ ಮುಖ್ಯವಾಹಿನಿಯಲ್ಲಿ ಬರಬೇಕು ಎಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ದೀಕ್ಷಾ. ಕೆ ತಿಳಿಸಿದ್ದಾರೆ.

ಮಂಗಳಮುಖಿಯರಿಗೂ ತಟ್ಟಿದ ಲಾಕ್​ಡೌನ್​ ಬಿಸಿ, ದುಸ್ತರವಾಯ್ತು ಬದುಕು
ಕಳೆದ ವರ್ಷ ಕೊರೊನಾ ಮಹಾಮಾರಿಯ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಘೋಷಿಸಿದ ಲಾಕ್​ಡೌನ್​ ಕ್ರಮದಿಂದಾಗಿ ಅನೇಕ ವರ್ಗಗಳು ಸಂಕಷ್ಟಕ್ಕೆ ಸಿಲುಕಿದ್ದರು. ಈ ವರ್ಗಗಳಲ್ಲಿ ಮಂಗಳಮುಖಿ ಸಮಾಜವೂ ಒಂದಾಗಿತ್ತು. ಇಷ್ಟು ದಿನ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರಿಗೆ ಲಾಕ್​ಡೌನ್​ನಿಂದ ಬದುಕು ನಡೆಸಲು ಕಷ್ಟವಾಗುತ್ತಿದೆ. ಬರೀ ಬೆಂಗಳೂರಿನಂಥ ಮಹಾನಗರವಲ್ಲದೆ, ಕರ್ನಾಟಕದ ಗಡಿ ಜಿಲ್ಲೆ ಬೀದರ್​ನಲ್ಲಿರುವ ಮಂಗಳಮುಖಿಯರಿಗೂ ಇಂಥ ಕಷ್ಟದ ಪರಿಸ್ಥಿತಿ ಬಂದೊದಗಿತ್ತು.

ಬೀದರ್ ಜಿಲ್ಲೆಯ ಹಲವು ಭಾಗಗಳಲ್ಲಿ ಸುಮಾರು 60 ಕ್ಕಿಂತಲ್ಲೂ ಹೆಚ್ಚು ತೃತೀಯಲಿಂಗಿಯರು ಜೀವನ ಸಾಗಿಸುತ್ತಿದ್ದಾರೆ. ಹಲವರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದು ಈಗ ಲಾಕ್​ಡೌನ್​ನಿಂದ ಆದಾಯಕ್ಕೆ ಕಲ್ಲು ಬಿದ್ದು ಕೇವಲ ಬಾಡಿಗೆಯಷ್ಟೇ ಅಲ್ಲದೆ, ಹಸಿವು ನೀಗಿಸಿಕೊಳ್ಳುವುದಕ್ಕೂ ಪರದಾಡುವಂತಾಗಿದ್ದರು. ಲಾಕ್​ಡೌನ್ ಕೊಂಚ ಸಡಿಲಿಕೆಯಾಗಿದ್ದರೂ ಕೊರೊನಾ ಭಯದಿಂದ ಜನರು ಜಿಲ್ಲೆಯಲ್ಲಿ ಹೆಚ್ಚು ಓಡಾಡುತ್ತಿರಲಿಲ್ಲ. ಇದರಿಂದ ಇವರ ಸಂಪಾದನೆ ಬಹಳಷ್ಟು ಇಳಿಕೆ ಕಂಡಿತ್ತು.

ಇದನ್ನೂ ಓದಿ: https://tv9kannada.com/karnataka/bidar/travails-of-the-transgender-community-during-the-covid-19-lockdown-74385.html

(transgender deeksha filed nomination for municipal election in madikeri)