AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್ ಮಾದರಿಯ ಹನಿ ನೀರಾವಾರಿ ಪದ್ಧತಿ ಅಳವಡಿಕೆ; ಕೃಷಿಯಲ್ಲಿ ಹೊಸ ಪ್ರಯೋಗ ಮಾಡಿದ ರೈತ ಕುಟುಂಬ

ಬರದ ನಾಡಿನಲ್ಲಿ ಮಳೆ ಅಭಾವ ಇರುವುದರಿಂದ ಬೀಳುವಂತಹ ಮಳೆ ಒಂದು ಹನಿ ಸಹ ವ್ಯರ್ಥ ಆಗದಂತೆ ತೋಟದಲ್ಲಿ ಎಲ್ಲಿ ಮಳೆ ಬೀಳಲಿ ಆ ನೀರನನ್ನು ತಮ್ಮ ತೋಟಗಳಲ್ಲಿ ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಿದ್ದಾರೆ. ಜೊತೆಗೆ ಇಸ್ರೇಲ್ ಮಾದರಿಯಲ್ಲಿ ಹನಿ ನೀರವಾರಿ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಇಸ್ರೇಲ್ ಮಾದರಿಯ ಹನಿ ನೀರಾವಾರಿ ಪದ್ಧತಿ ಅಳವಡಿಕೆ; ಕೃಷಿಯಲ್ಲಿ ಹೊಸ ಪ್ರಯೋಗ ಮಾಡಿದ ರೈತ ಕುಟುಂಬ
ಹನಿ ನೀರವಾರಿ ಪದ್ಧತಿ
TV9 Web
| Edited By: |

Updated on: Oct 29, 2021 | 7:42 AM

Share

ಕೋಲಾರ: ಕೊಳವೆ ಬಾವಿಗಳನ್ನು ಕೊರೆದು ನೀರಿಲ್ಲದೆ ವ್ಯವಸಾಯವನ್ನೇ ಬೀಡಬೇಕು ಎಂದುಕೊಂಡಿದ್ದ ಕೃಷಿ ಕುಟುಂಬವೊಂದು ಛಲದಿಂದ ಕೃಷಿ ಮಾಡಿದೆ. ಇಸ್ರೇಲ್ ಮಾದರಿಯಲ್ಲಿ ಬೆಳೆಗಳಿಗೆ ಬೆಡ್ ಸಿಸ್ಟಮ್ ಮಾಡಿದ್ದು, ಹನಿ ನಿರಾವರಿ ಮೂಲಕ ವಿವಿಧ ತರಕಾರಿ ಬೆಳೆಗಳನ್ನು ಬೆಳೆದಿದ್ದಾರೆ. ಆ ಮೂಲಕ ಕೃಷಿ ಮಾಡುವುದನ್ನೇ ತೊರೆದು ನಗರಕ್ಕೆ ಸೇರಿಕೊಂಡಿದ್ದ ಅನೇಕರಿಗೆ ಮಾದರಿಯಾಗಿದ್ದಾರೆ. ಹಾಗಿದ್ದರೆ ಉತ್ತಮ ಇಳುವರಿಯ ಬೆಳೆ ಬೆಳೆಯಲು ಅನುಸರಿಸಿದ ಮಾರ್ಗದ ಬಗ್ಗೆ ತಿಳಿಯುವುದು ಸೂಕ್ತ.

ಕೋಲಾರ ಜಿಲ್ಲೆಯ ಕಾಕಿನತ್ತ ಗ್ರಾಮದ ರಾಮಕೃಷ್ಣ ಮತ್ತು ಪ್ರಹ್ಲಾದ್ ಅಣ್ಣ ತಮ್ಮಂರದ್ದು ತುಂಬು ಕುಟುಂಬ. ಕುಟುಂಬದಲ್ಲಿ ಹದಿನೈದು ಜನರಿದ್ದಾರೆ. ಎಲ್ಲರೂ ಖುಷಿಯಿಂದ ಕೃಷಿಯಲ್ಲಿ ತೊಡಗುತ್ತಾರೆ. ತಮ್ಮ ಸುಮಾರು 25 ಎಕೆರೆ ಭೂಮಿಯಲ್ಲಿ ಮೊದಲು ಕೃಷಿ ಮಾಡುವುದು ಕಷ್ಟ ಎಂದುಕೊಂಡಿದ್ದ ಇವರು, ಒಂದಷ್ಟು ಬೋರ್‍ವೆಲ್‍ಗಳು ಕೈಕೊಟ್ಟರು ಛಲ ಬೀಡದೆ ಕೊಳೆವೆ ಬಾವಿಗಳನ್ನು ಕೊರೆದು ಭೂ ಗರ್ಭದಿಂದ ನೀರನ್ನು ತೆಗೆದು ಕೃಷಿ ಮಾಡಿದ್ದಾರೆ.

ರಾಮಕೃಷ್ಣ ಸೇರಿದಂತೆ ಪ್ರಹ್ಲಾದ್ ಓದಿರುವುದು ಕೇವಲ 7ನೇ ತರಗತಿ. ಆದರೆ ವ್ಯವಸಾಯದಲ್ಲಿ ಪಿಎಚ್‍ಡಿ ಮಾಡಿದ ಅನುಭವವನ್ನು ಹೊಂದಿದ್ದಾರೆ. ಇರುವಂತಹ 25 ಎಕರೆಯಲ್ಲಿ ಸುಮಾರು 6 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಬರದ ನಾಡಿನಲ್ಲಿ ಮಳೆ ಅಭಾವ ಇರುವುದರಿಂದ ಬೀಳುವಂತಹ ಮಳೆ ಒಂದು ಹನಿ ಸಹ ವ್ಯರ್ಥ ಆಗದಂತೆ ತೋಟದಲ್ಲಿ ಎಲ್ಲಿ ಮಳೆ ಬೀಳಲಿ ಆ ನೀರನನ್ನು ತಮ್ಮ ತೋಟಗಳಲ್ಲಿ ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಿದ್ದಾರೆ. ಜೊತೆಗೆ ಇಸ್ರೇಲ್ ಮಾದರಿಯಲ್ಲಿ ಹನಿ ನೀರವಾರಿ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಇದು ಕೃಷಿ ಮಾಡುವ ಕೆಲಸವಾದರೆ ಇವರು ಬೆಳೆಯುವ ಬೆಳೆಯಲ್ಲಿ ತಮಗೆ ನಷ್ಟವಾಗದಂತೆ ನೋಡಿಕೊಳ್ಳೋದು ಮುಖ್ಯ ಅದಕ್ಕಾಗಿ, ಇವರು ಭೂಮಿಯಲ್ಲಿ ವಿವಿಧ ರೀತಿಯ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಒಂದು ಬೆಳೆ ಕಟಾವಿಗೆ ಬಂದರೆ ಮತ್ತೊಂದನ್ನು ಬಿತ್ತನೆ ಮಾಡಬೇಕು. ಒಂದು ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ ಅಂದರೆ ಮತ್ತೊಂದು ಬೆಳೆ ಅದರ ನಷ್ಟವನ್ನು ತುಂಬಿಕೊಡಬೇಕು ಈ ರೀತಿ ಯೋಚನೆ ಮಾಡಿ ತಮ್ಮ ಜಮೀನಿನಲ್ಲಿ ಕನಿಷ್ಟ ಎಂದರೆ ಐದಾರು ಬಗೆಯ ತರಕಾರಿಗಳನ್ನು ಬೆಳೆಯುತ್ತಾರೆ.

agriculture

ವಿವಿಧ ರೀತಿಯ ತರಕಾರಿ ಬೆಳೆ

ಎಲ್ಲವೂ ಒಮ್ಮೆಲೆ ಕಟಾವಿಗೆ ಬಾರದಂತೆ ಒಂದಾದ ಮೇಲೆ ಒಂದರಂತೆ ಬೆಳೆಯುತ್ತಾರೆ. ಸದ್ಯ ಅವರ ತೋಟದಲ್ಲಿ ಹಾಗಲಕಾಯಿ, ಕುಂಬಳಕಾಯಿ, ಕ್ಯಾರೇಟ್, ಬೀಟ್ ರೋಟ್, ಆಲೂಗೆಡ್ಡೆ, ಹೂಕೋಸು, ಎಲೆ ಕೋಸು, ಸೇರಿದಂತೆ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುವ ಮೂಲಕ ಪ್ರತಿ ತಿಂಗಳು ಕನಿಷ್ಠ ಎರಡರಿಂದ ಮೂರು ಲಕ್ಷ ರೂಪಾಯಿ ವರೆಗೆ ಸಂಪಾದನೆ ಮಾಡುತ್ತಿದ್ದಾರೆ. ಈ ರೀತಿಯಲ್ಲಿ ಸಮಯ ಪ್ರಜ್ಞೆಯೊಂದಿಗೆ ಕೃಷಿ ಮಾಡಿದರೆ ನಷ್ಟ ಆಗುವುದಿಲ್ಲ. ಎನ್ನುವುದನ್ನು ಈ ಕುಟುಂಬ ತೋರಿಸಿ ಸ್ಥಳೀಯ ಕೃಷಿಕರಿಗೆ ಮಾದರಿಯಾಗಿದ್ದಾರೆ.

ಒಟ್ಟಾರೆ ವೈಜ್ಞಾನಿಕತೆಯಿಂದ ಮಾರುಕಟ್ಟೆ ಪರಿಸ್ಥಿತಿಯನ್ನರಿತು, ವ್ಯವಸಾಯ ಮಾಡಿದಲ್ಲಿ ಸಮಾಜಕ್ಕೆ ಅನ್ನದಾತನಾಗುವ ತಾನು ಶ್ರೀಮಂತನಾಗಿ ನೆಮ್ಮದಿಯ ಜೀವನ ಮಾಡಬಹುದು ಎನ್ನುವುದಕ್ಕೆ ಕೋಲಾರದ ಈ ರೈತ ಕುಟುಂಬ ಮಾದರಿ.

ವರದಿ: ರಾಜೇಂದ್ರಸಿಂಹ

ಇದನ್ನೂ ಓದಿ: ಬರಡು ಭೂಮಿಯಲ್ಲಿ ಮಿಶ್ರ ಬೆಳೆ ಬೆಳೆದ ಸಾಹಸಿ ರೈತ; ಮಳೆ ನೀರನ್ನೇ ಆಧಾರವಾಗಿಸಿ ವರ್ಷಕ್ಕೆ 10 ಲಕ್ಷ ರೂ. ಆದಾಯ

ಸಾವಯವ ಕೃಷಿಯಲ್ಲಿ ರೈತನ ಅಮೋಘ ಸಾಧನೆ, ಕೃಷಿ & ಉಪಕಸುಬಿನ ಮೂಲಕ ಲಕ್ಷ ಲಕ್ಷ ಗಳಿಕೆ