ದೇಶಕ್ಕಾಗಿ ಹೋರಾಡುವ ಯೋಧರ ನೆನಪಿಗಾಗಿ ನಿರ್ಮಾಣವಾಗುತ್ತಿದೆ ನೂತನ ಸ್ಮಾರಕ ಎಲ್ಲಿ ಗೊತ್ತಾ?

ಅದ್ದೂರಿಯಾಗಿ ಅಲಂಕಾರ ಮಾಡಿದ ವಾಹನದಲ್ಲಿ ಶಿಲೆಯನ್ನಿರಿಸಿ, ಕೋಲಾರದ ದ್ವಾರದಿಂದ, ಕ್ಲಾಕ್​ಟವರ್​, ಡೂಂ ಲೈಟ್​ ಸರ್ಕಲ್​, ಮೂಲಕ ವಾದ್ಯಗೋಷ್ಠಿಯೊಂದಿಗೆ ತರಲಾಗಿದ್ದು, ಈ ವೇಳೆ ಮಾಜಿ ಯೋಧರ ಸಂಘದ ಕಾರ್ಯಕರ್ತರು, ನೂರಾರು ಜನ ದೇಶಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

  • ರಾಜೇಂದ್ರ ಸಿಂಹ
  • Published On - 10:07 AM, 21 Dec 2020
ದೇಶಕ್ಕಾಗಿ ಹೋರಾಡುವ ಯೋಧರ ನೆನಪಿಗಾಗಿ ನಿರ್ಮಾಣವಾಗುತ್ತಿದೆ ನೂತನ ಸ್ಮಾರಕ ಎಲ್ಲಿ ಗೊತ್ತಾ?
ಕೆತ್ತನೆ ಮಾಡಿಸಲಾಗಿದ್ದ ಸ್ಮಾರಕದ ಶಿಲೆಯನ್ನು ಮೆರಣಿಗೆ ಮೂಲಕ ಸಾಗಿಸುತ್ತಿರುವ ದೃಶ್ಯ

ಕೋಲಾರ: ದೇಶದ ಗಡಿಯಲ್ಲಿ ನಡೆಯುವ ಯುದ್ಧದಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸುತ್ತಾರೆ. ಇಂತಹ ಯೋಧರ ನೆನಪಿಗಾಗಿಯೇ ಕೋಲಾರದಲ್ಲಿ ಸ್ಮಾರಕವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ 15 ಅಡಿಯ ಬೃಹತ್​ ಶಿಲೆಯನ್ನು ಪ್ರತಿಷ್ಠಾಪನೆ ಮಾಡಿದ್ದು, ಈ ಸ್ಮಾರಕದ ನಿಮಾರ್ಣಕ್ಕಾಗಿ ವಿಶೇಷವಾಗಿ ಕೆತ್ತನೆ ಮಾಡಲಾಗಿದೆ.

ಸ್ಮಾರಕ ಪ್ರತಿಷ್ಠಾಪನೆ ಪೂಜೆಯಲ್ಲಿ ಭಾಗಿಯಾದ ಪ್ರತಿನಿಧಿಗಳು

ರಾಜ್ಯದ ಶಿಲ್ಪಗ್ರಾಮ ಎಂದೇ ಪ್ರಖ್ಯಾತಿ ಹೊಂದಿರುವ ಕೋಲಾರ ಜಿಲ್ಲೆಯ ಮಾಲೂರಿನ ಶಿವಾರಪಟ್ಟಣದಲ್ಲಿ ಕೆತ್ತನೆ ಮಾಡಿಸಲಾಗಿದ್ದ ಸ್ಮಾರಕದ ಶಿಲೆಯನ್ನು ಇಂದು ಕೋಲಾರ ಕೊಂಡರಾಜನಹಳ್ಳಿಯಿಂದ ನಗರದ ಪಿ.ಸಿ. ಬಡಾವಣೆಯ ಪಾರ್ಕ್​​ಗೆ ಅದ್ದೂರಿ ಮೆರವಣಿಗೆ ಮೂಲಕ ತರಲಾಯಿತು.

ಪೂಜಾ ದೃಶ್ಯ ಕಂಡು ಬಂದಿದ್ದು ಹೀಗೆ

ಅದ್ದೂರಿಯಾಗಿ ಅಲಂಕಾರ ಮಾಡಿದ ವಾಹನದಲ್ಲಿ ಶಿಲೆಯನ್ನಿರಿಸಿ, ಕೋಲಾರದ ದ್ವಾರದಿಂದ, ಕ್ಲಾಕ್​ಟವರ್​, ಡೂಂ ಲೈಟ್​ ಸರ್ಕಲ್​, ಮೂಲಕ ವಾದ್ಯಗೋಷ್ಠಿಯೊಂದಿಗೆ ತರಲಾಗಿದ್ದು, ಈ ವೇಳೆ ಮಾಜಿ ಯೋಧರ ಸಂಘದ ಕಾರ್ಯಕರ್ತರು, ನೂರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇದಲ್ಲದೇ ದಾರಿಯುದ್ದಕ್ಕೂ ನೂರಾರು ಜನ ಶಿಲೆಗೆ ಹೂವಿನ ಮಳೆಸುರಿಸಿದ್ದು ವಿಶೇಷವಾಗಿತ್ತು.

ಸ್ಮಾರಕ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಮುನಿಸ್ವಾಮಿ

ಮಾರ್ಗಮಧ್ಯದಲ್ಲಿ ವಿವಿಧ ಸಮುದಾಯಗಳ ಜನರು, ವಿವಿಧ ಧರ್ಮದ ಜನರು ಪ್ರಾರ್ಥನೆ ಸಲ್ಲಿಸಿ ಜಯ ಘೋಷ ಮೊಳಗಿಸಿದರು. ಈ ಹಿಂದೆಯೂ ಕೂಡಾ ಶಿಲಾನ್ಯಾಸ ಸಂದರ್ಭದಲ್ಲಿ ಕಾರ್ಗಿಲ್​ ನೆಲದಲ್ಲಿನ ಮಣ್ಣನ್ನು ತರಲಾಗಿದ್ದು, ಆ ಮೂಲಕ ನಮ್ಮ ಯೋಧರು ಮೆಟ್ಟಿದ ಮಣ್ಣು ಸ್ಮಾರಕಕ್ಕೆ ಜೀವಕಳೆ ತುಂಬಿದೆ. ಈ ರೀತಿಯಾ ಸ್ಮಾರಕ ನಿರ್ಮಾಣ ಮಾಡುವ ಮೂಲಕ ದೇಶಕ್ಕಾಗಿ ಹುತಾತ್ಮರಾದ ಯೋಧರ ನೆನಪು ಸದಾಕಾಲ ಉಳಿಯುತ್ತದೆ. ಈ ಸ್ಮಾರಕವನ್ನು ಕಂಡಂವರಿಗೆ ದೇಶದ ಬಗ್ಗೆ ಯೋಧರ ಬಗ್ಗೆ ಗೌರವ ಮೂಡುವಂತಾಗಬೇಕು ಎನ್ನುವುದು ಇದರ ಮುಖ್ಯ ಉದ್ದೇಶ.

ಐತಿಹಾಸಿಕ ಸ್ಮಾರಕಗಳು ಪ್ರವಾಸಿಗರ ವೀಕ್ಷಣೆಗೆ ಮುಕ್ತ, ಆದ್ರೆ ಇದನ್ನು ಬಿಟ್ಟು..