ಕೋಲಾರ: ಪ್ರತಿಷ್ಠಿತ ಐಪೋನ್ ತಯಾರಿಕಾ ಘಟಕವಾದ ಕೋಲಾರದ ವಿಸ್ಟ್ರಾನ್ ಸಂಸ್ಥೆಯಲ್ಲಿ ಕಳೆದ ಡಿಸೆಂಬರ್12 ರಂದು ಕಾರ್ಮಿಕರೇ ಕಂಪೆನಿ ಮೇಲೆ ನಡೆಸಿದ್ದ ದಾಂಧಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಪೂರ್ಣಗೊಂಡಿದೆ. ಘಟನೆ ಸಂಬಂಧ ಮೂರು ಪ್ರಕರಣ ದಾಖಲು ಮಾಡಿದ್ದ ಪೊಲೀಸರು ಈಗ ತಮ್ಮ ತನಿಖೆ ಪೂರ್ಣಗೊಳಿಸಿದ್ದಾರೆ. ಈ ವೇಳೆ ಪೊಲೀಸರು ಸುಮಾರು 11,000 ಪುಟಗಳ ಚಾರ್ಚ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವುದಾಗಿ ಕೋಲಾರದ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಇಡೀ ಪ್ರಕರಣವನ್ನು ಕೂಲಂಕಶವಾಗಿ ತನಿಖೆ ಮಾಡಲಾಗಿದೆ, ಅಗತ್ಯ ಸಾಕ್ಷಾಧಾರಗಳನ್ನು ಕಲೆ ಹಾಕಲಾಗಿದೆ. ವಿಸ್ಟ್ರಾನ್ ದಾಂಧಲೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಇಬ್ಬರು ಎಎಸ್ಪಿಗಳಿಗೆ ವಹಿಸಲಾಗಿತ್ತು. ಇದೀಗ 11 ಸಾವಿರ ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಹೇಳಿದರು.
ಇನ್ನು ಘಟನೆ ಸಂಬಂಧ ತನಿಖೆ ವೇಳೆ ವಿಸ್ಟ್ರಾನ್ ದಾಂಧಲೆ ಪ್ರಕರಣದ ತನಿಖೆ ಘಟನೆ ಕೇವಲ ವೇತನ, ಹೆಚ್ಚುವರಿ ಅವಧಿ ಕೆಲಸಕ್ಕೆ ವೇತನ ನೀಡದಿರುವುದು(ಓಟಿ) ಹಾಗೂ ಹಾಜರಾತಿಗೆ ಸಂಬಂಧಿಸಿದಂತೆ ಸಮಸ್ಯೆ ಇದ್ದ ಪರಿಣಾಮ, ಅಂದು ಕಾರ್ಮಿಕರು ಏಕಾಏಕಿಯಾಗಿ ಗುಂಪು ಸೇರಿ ಕಂಪನಿಯಲ್ಲಿ ಗಲಾಟೆ ಮಾಡಿದ್ದರು. ಅಲ್ಲದೇ ದಾಂಧಲೆಗೆ, ಹೊರಗಡೆಯಿಂದ ಯಾವುದೇ ಕುಮ್ಮಕ್ಕು ಇಲ್ಲ ಎನ್ನುವುದು ನಮ್ಮ ತನಿಖೆಯಿಂದ ಕಂಡುಬಂದಿದೆ. ಇನ್ನು 170 ಜನರನ್ನ ಬಂಧಿಸಿದ್ದು , 30 ಜನರನ್ನ ಜೈಲಿಗೆ ಕಳುಹಿಸಲಾಗಿದೆ ಎಂದು ಕೋಲಾರದ ಎಸ್ಪಿ ಕಾರ್ತಿಕ್ರೆಟ್ಟಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ವಿಸ್ಟ್ರಾನ್ ಸಂಸ್ಥೆ ಪುನಾರಂಭಕ್ಕೆ ಭರದ ಸಿದ್ಧತೆ.. ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಮತ್ತೆ ಕೆಲಸ ಸಿಗುವ ನಿರೀಕ್ಷೆ
ಕೋಲಾರದ ವಿಸ್ಟ್ರಾನ್ ಕಂಪನಿಗೆ ಮರುನೇಮಕ: ಪೊಲೀಸ್ ಠಾಣೆಯಲ್ಲಿ ಅಭ್ಯರ್ಥಿಗಳ ದಂಡು!
(Police completed the investigation case on the prestigious Wistron Company in Kolar)