ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದವರಿಗೆ ವರ್ತೂರು ಪ್ರಕಾಶ್​ರಿಂದ ಭರ್ಜರಿ ಬಾಡೂಟ

ಕೋಲಾರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದವರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಔತನ ಕೂಟ ಆಯೋಜಿಸಿದ್ದಾರೆ.

  • TV9 Web Team
  • Published On - 15:14 PM, 23 Feb 2021
ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದವರಿಗೆ ವರ್ತೂರು ಪ್ರಕಾಶ್​ರಿಂದ ಭರ್ಜರಿ ಬಾಡೂಟ
ಬಾಡೂಟ ತಯಾರಿಸುತ್ತಿರುವುದನ್ನು ವೀಕ್ಷಿಸಿದ ವರ್ತೂರು ಪ್ರಕಾಶ್

ಕೋಲಾರ: ಗ್ರಾಮ ಪಂಚಾಯತಿ ಚುನಾವಣೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದವರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಇಂದು ಔತಣ ಕೂಟ ಆಯೋಜಿಸಿದ್ದರು. ಕೋಲಾರದ ಕೋಗಿಲಳ್ಳಿಯಲ್ಲಿ ಬೊಂಬಾಟ್ ಬಾಡೂಟ ಪಾರ್ಟಿ ಆಯೋಜನೆ ಮಾಡಿದ್ದರು. ಸುಮಾರು 1,000 ಕೆ.ಜಿ. ಮಟನ್ ಮತ್ತು 1,250 ಕೆ.ಜಿ. ಚಿಕನ್​ನಿಂದ ಬಾಡೂಟ ಮಾಡಿಸಿ ವರ್ತೂರು ಪ್ರಕಾಶ್ ತಮ್ಮ ಬೆಂಬಲಿಗರಿಗೆ ಭರ್ಜರಿ ಬಾಡೂಟ ಮಾಡಿಸಿದ್ದಾರೆ.

ಬಿರಿಯಾನಿಗಾಗಿ ನೂಕುನುಗ್ಗಲು
ಭರ್ಜರಿ ಬಿರಿಯಾನಿ ಬಾಡೂಟಕ್ಕೆ ತಾ ಮುಂದು ನಾ ಮುಂದು ಎಂದು ನೂರಾರು ಕಾರ್ಯಕರ್ತರು ಮುಗಿಬಿದ್ದಿದ್ದಾರೆ. ಕೋಲಾರ ನಗರದ ಕೋಗಿಲಹಳ್ಳಿ ವರ್ತೂರು ಪ್ರಕಾಶ್ ನಿವಾಸದ ಬಳಿ ಬಾಡೂಟ ಬಡಿಸಲಾಗುತ್ತಿದೆ.

Varthur prakash badoota

ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದವರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಔತಣ ಕೂಟ ಆಯೋಜಿಸಿದ್ದಾರೆ

 

Varthur prakash badoota

ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದವರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಔತಣ ಕೂಟ

 

Varthur prakash badoota

ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದವರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಔತಣ

ಇದನ್ನೂ ಓದಿ: ಗ್ರಾ. ಪಂ. ಚುನಾವಣೆ: ಮತದಾರರಿಗೆ ತಯಾರಿಸಿದ್ದ ಬಾಡೂಟ ಜಪ್ತಿ ಮಾಡಿದ ಚುನಾವಣಾ ಅಧಿಕಾರಿಗಳು