ಕರ್ತವ್ಯ ನಿರತ ಪೊಲೀಸರ ಮೇಲೆ ದರ್ಪ: ಅವಾಚ್ಯ ಪದಗಳಿಂದ ನಿಂದನೆ, ವಿಡಿಯೋ ವೈರಲ್

ಪ್ರಭಾವಿ ಕಾಂಗ್ರೆಸ್​ ನಾಯಕ ಬೆಂಬಲಿಗ ಹನುಮೇಶ್ ಲಾಡ್ಜಿ ದರ್ಪ ತೋರಿಸಿದ ವ್ಯಕ್ತಿ. ಜೊತೆಗೆ ನೀವು ಗೂಂಡಾಗಿರಿ ಮಾಡುತ್ತಿದ್ದೀರಾ ಎಂದು ಪೊಲೀಸರಿಗೆ ನಿಂದನೆ ಮಾಡಲಾಗಿದೆ.

ಕರ್ತವ್ಯ ನಿರತ ಪೊಲೀಸರ ಮೇಲೆ ದರ್ಪ: ಅವಾಚ್ಯ ಪದಗಳಿಂದ ನಿಂದನೆ, ವಿಡಿಯೋ ವೈರಲ್
ಹನುಮೇಶ್ ಲಾಡ್ಜಿ ದರ್ಪ ತೋರಿದ ವ್ಯಕ್ತಿ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 25, 2022 | 8:25 PM


ಕೊಪ್ಪಳ: ಹುಲಿಹೈದರ್​ ಗ್ರಾಮದಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ದರ್ಪ ತೋರುವುದರೊಂದಿಗೆ ನಿಂದನೆ ಮಾಡಿರುವಂತಹ ಘಟನೆ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್​ ಗ್ರಾಮದಲ್ಲಿ ನಡೆದಿದೆ. ಪ್ರಭಾವಿ ಕಾಂಗ್ರೆಸ್​ ನಾಯಕ ಬೆಂಬಲಿಗ ಹನುಮೇಶ್ ಲಾಡ್ಜಿ ದರ್ಪ ತೋರಿಸಿದ ವ್ಯಕ್ತಿ. ಜೊತೆಗೆ ನೀವು ಗೂಂಡಾಗಿರಿ ಮಾಡುತ್ತಿದ್ದೀರಾ ಎಂದು ಪೊಲೀಸರಿಗೆ ನಿಂದನೆ ಮಾಡಲಾಗಿದೆ. ಕುಡಿದ ಅಮಲಿನಲ್ಲಿ ಹನುಮೇಶ್ ಲಾಡ್ಜಿಯಿಂದ ದರ್ಪದ ಮಾತುಗಳನ್ನಾಡಿದ್ದಾನೆ. ಸದ್ಯ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದರ್ಪ ತೋರಿದ ಹನುಮೇಶ್ ಲಾಡ್ಜಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಆ.11ರಂದು ಹುಲಿಹೈದರ್ ಗ್ರಾಮದಲ್ಲಿ 2 ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟು, ಒಬ್ಬರು ಗಂಭೀರ ಗಾಯಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಹುಲಿಹೈದರ್ ಗ್ರಾಮದಲ್ಲಿ ಪೊಲೀಸ್ ಭದ್ರತೆ ನೀಡಿದ್ದು, ತಡರಾತ್ರಿ ಗ್ರಾಮದಲ್ಲಿ ಯಾರೂ ಓಡಾಡದಂತೆ ಕಟ್ಟೆಚ್ಚರ ವಹಿಸಲಾಗಿತ್ತು.

ಮೊಟ್ಟೆಯನ್ನು ನೆಲಕ್ಕೆ ಹೊಡೆದು ಕಾಲುಕೆದರಿ ಕರ್ತವ್ಯದಲ್ಲಿದ್ದ 112 ಪೊಲೀಸರೊಂದಿಗೆ ರಂಪಾಟ ಮಾಡಲಾಗಿದೆ. ತೊಡೆತಟ್ಟಿ ಪೊಲೀಸರಿಗೆ ಧಿಕ್ಕಾರ ಕೂಗಿದ್ದಾನೆ. ಕಳೆದ ನಾಲ್ಕೈದು ದಿನಗಳ ಹಿಂದೆ ಘಟನೆ ನಡೆದಿದ್ದು, ಸದ್ಯ ಗಲಾಟೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಸಮುದ್ರದಲ್ಲಿ ಮುಳುಗಿದ ಮೂವರು ವಿದ್ಯಾರ್ಥಿಗಳು

ಉಡುಪಿ: ಸಮುದ್ರದಲ್ಲಿ ಈಜಲು ಇಳಿದಿದ್ದ 3 ವಿದ್ಯಾರ್ಥಿಗಳು ನೀರುಪಾಲಾಗಿದ್ದು, ಸ್ಥಳೀಯರಿಂದ ವಿದ್ಯಾರ್ಥಿಗಳಿಬ್ಬರ ರಕ್ಷಣೆ ಮಾಡಿದ್ದು, ಮತ್ತೊಬ್ಬನಿಗಾಗಿ ಶೋಧ ಕಾರ್ಯ ನಡೆಯುತ್ತಿರುವಂತಹ ಘಟನೆ ಉಡುಪಿಯ ಹೂಡೆ ಬೀಚ್​ನಲ್ಲಿ ನಡೆದಿದೆ. ನಿಶಾಂತ್, ಷಣ್ಮುಖ ಎಂಬ ಇಬ್ಬರನ್ನು ಸ್ಥಳೀಯರು ಮೇಲಕ್ಕೆತ್ತಿದ್ದು, ಶ್ರೀಕರ್​ಗಾಗಿ ಕುಡುಕಾಟ ನಡೆಯುತ್ತಿದೆ. ಈ ಮೂವರು ಮಣಿಪಾಲ ಎಂಐಟಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ಉಡುಪಿಯ ಮಲ್ಪೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈಜಲು ಹೋಗಿದ್ದ ಇಬ್ಬರು ಸಹೋದರರು ನೀರು ಪಾಲು

ಬೀದರ್: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ದುರ್ಮರಣ ಹೊಂದಿರುವಂತಹ ಘಟನೆ ಬೀದರ್​ ತಾಲೂಕಿನ ಅಲಿಯಂಬರ್​ ಗ್ರಾಮದಲ್ಲಿ ನಡೆದಿದೆ. ವಿನಯ್(20), ವೀರೇಶ್(17) ಮೃತ ಸಹೋದರರು. ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಕೊಲ್ಹಾರ ಪೊಲೀಸ್ ಠಾಣೆಯ ಪಿಎಸ್ಐ ಪ್ರೀತಮ್ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು. ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸರಣಿ ಕೇಬಲ್ ಕಳ್ಳತನಕ್ಕೆ ರೈತರ ಆತಂಕ

ತುಮಕೂರು: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಜುಂಜರಾಮನಹಳ್ಳಿ ಗ್ರಾಮದಲ್ಲಿ 9ನೇ ಬಾರಿ ಕೇಬಲ್ ಕಳ್ಳತನವಾಗಿದೆ. ಗ್ರಾಮದ ನೀರಿನ ಕೊಳವೆ ಬಾವಿಯ ಮೋಟಾರ್ ಗೆ ಅಳವಡಿಸಿದ್ದ ವಿದ್ಯುತ್ ಕೇಬಲ್‌ ಕಳ್ಳತನ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಇದೇ ಕೊಳವೆ ಬಾವಿಯಿಂದ 9 ಸಲ ಕಳ್ಳತನವಾಗಿದೆ. ಜೊತೆಗೆ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಹೊಲ್ತಾಳು ಹಾಗೂ ಕುರುಬರಹಳ್ಳಿ, ಗೊಲ್ಲರಹಟ್ಟಿಯ ಕುಡಿಯುವ ನೀರಿನ ಕೊಳವೆ ಬಾವಿಗಳಲ್ಲಿ ಕೇಬಲ್ ಕಳವು ನಡೆದಿದೆ. ಲಕ್ಷಾಂತರ ರೂ ಬೆಲೆ ಬಾಳುವ ಕೇಬಲ್ ಕಳವು ಆಗುತ್ತಿದ್ದು. ಸರಣಿ ಕಳ್ಳತನಕ್ಕೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada