ಗಣನೀಯವಾಗಿ ಕುಸಿದ ಭತ್ತದ ಬೆಲೆ: ಕಂಗಾಲಾದ ಭತ್ತದ ಕಣಜದ ರೈತರು

ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಭತ್ತದ ಬೆಲೆ ಗಣನೀಯವಾಗಿ ಕುಸಿದಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ. ಸೋನಾ ಮಸೂರಿ, ಆರ್‌ಎನ್‌ಆರ್ ಮತ್ತು ಗಂಗಾ ಕಾವೇರಿ ಭತ್ತದ ಬೆಲೆ ಕಳೆದ ಕೆಲವು ದಿನಗಳಲ್ಲಿ ಕ್ವಿಂಟಲ್​​ಗೆ 500 ರಿಂದ 1000 ರೂಪಾಯಿಗಳಷ್ಟು ಕಡಿಮೆಯಾಗಿದೆ. ರೈತರು ಸರ್ಕಾರದಿಂದ ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ.

ಗಣನೀಯವಾಗಿ ಕುಸಿದ ಭತ್ತದ ಬೆಲೆ: ಕಂಗಾಲಾದ ಭತ್ತದ ಕಣಜದ ರೈತರು
ಗಣನೀಯವಾಗಿ ಕುಸಿದ ಭತ್ತದ ಬೆಲೆ: ಕಂಗಾಲಾದ ಭತ್ತದ ಕಣಜದ ರೈತರು
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: Ganapathi Sharma

Updated on: Nov 28, 2024 | 1:24 PM

ಕೊಪ್ಪಳ, ನವೆಂಬರ್ 28: ರಾಜ್ಯದ ಕೊಪ್ಪಳ, ರಾಯಚೂರು ಜಿಲ್ಲೆಗಳನ್ನು ಭತ್ತದ ಕಣಜ ಎಂದು ಕರೆಯುತ್ತಾರೆ. ತುಂಗಭದ್ರಾ ಜಲಾಶಯದ ನೀರನ್ನು ಬಳಸಿ ಬೆಳೆಯುವ ಈ ಭಾಗದ ಭತ್ತಕ್ಕೆ ಬಹಳ ಬೇಡಿಕೆ ಇತ್ತು. ಆದರೆ, ಈ ಬಾರಿ ಭತ್ತದ ಬೆಲೆ ಗಣನೀಯವಾಗಿ ಕಡಿಮೆಯಾಗಿದ್ದು, ಭತ್ತದ ಬೆಳೆಗಾರರನ್ನು ಕಂಗಾಲು ಮಾಡಿದೆ. ಇನ್ನೊಂದಡೆ ಭತ್ತ ಖರೀದಿ ಕೇಂದ್ರವೂ ಆರಂಭವಾಗಿಲ್ಲ.

ಮಾರುಕಟ್ಟೆಯಲ್ಲಿ ದಿಢೀರನೆ ಕುಸಿದ ಭತ್ತದ ಬೆಲೆ

ಕೊಪ್ಪಳ ಜಿಲ್ಲೆ, ರಾಯಚೂರು ಜಿಲ್ಲೆಯಲ್ಲಿ ಹೆಚ್ಚಿನ ರೈತರು ಬೆಳೆಯುವ ಪ್ರಮುಖ ಬೆಳೆ ಭತ್ತ. ಕೊಪ್ಪಳ ಜಿಲ್ಲೆಯಲ್ಲಿಯೇ ಆರವತ್ತೈದು ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ತುಂಗಭದ್ರಾ ಜಲಾಶಯದ ಕೆಳಭಾಗದಲ್ಲಿ ಬೆಳೆಯುವ ಭತ್ತಕ್ಕೆ ಹೆಚ್ಚಿನ ಡಿಮ್ಯಾಂಡ್ ಕೂಡಾ ಇದೆ. ಆದರೆ, ಕಳೆದ ವರ್ಷ ಬರಗಾಲದಿಂದಾಗಿ ಭತ್ತದ ಬೆಳೆಗಾರರು ಬೆಳೆ ಬೆಳೆಯಲಾರದೇ ಕಂಗಾಲಾಗಿದ್ದರು. ಆದರೆ, ಈ ಬಾರಿ ಉತ್ತಮ ಮಳೆ, ಬೆಳೆ ಬಂದರೂ ರೈತರು ಮತ್ತೆ ತೊಂದರೆಗೆ ಸಿಲುಕುವಂತಾಗಿದೆ. ಇದಕ್ಕೆ ಕಾರಣ, ಭತ್ತದ ಬೆಲೆ ಕುಸಿತವಾಗಿರುವುದು.

ಭತ್ತದ ಬೆಲೆ ಎಷ್ಟಿತ್ತು, ಈಗ ಎಷ್ಟಿದೆ?

ಕೆಲ ದಿನಗಳ ಹಿಂದಷ್ಟೇ ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಭತ್ತಕ್ಕೆ ಪ್ರತಿ ಎಪ್ಪತ್ತೈದು ಕಿಲೋ ತೂಕದ ಭತ್ತದ ಚೀಲಕ್ಕೆ 2300 ರೂಪಾಯಿ ಇತ್ತು. ಆದರೆ, ಸದ್ಯ 1500 ರೂಪಾಯಿಗೆ ಇಳಿಕೆಯಾಗಿದೆ. ಇನ್ನು 2500 ರೂಪಾಯಿಗೆ ಮಾರಾಟವಾಗುತ್ತಿದ್ದ ಆರ್​ಎನ್​ಆರ್ ಭತ್ತದ ಬೆಲೆ ಸದ್ಯ 1800 ರೂಪಾಯಿಗೆ ಕುಸಿತವಾಗಿದೆ. ಇನ್ನು ಗಂಗಾ ಕಾವೇರಿ ಭತ್ತ 1800 ರೂಪಾಯಿಗೆ ಮಾರಾಟವಾಗಿತ್ತು. ಆದರೆ ಸದ್ಯ 1400 ರೂಪಾಯಿಗೆ ಇಳಿಕೆಯಾಗಿದೆ. ಅಂದರೆ, ಪ್ರತಿ ಕ್ವಿಂಟಲ್ ಭತ್ತದ ಬೆಲೆ 500 ರಿಂದ 1000 ರೂಪಾಯಿಯಷ್ಟು ಕಡಿಮೆಯಾಗಿದೆ. ಇಷ್ಟು ಬೆಲೆಗೆ ಭತ್ತ ಮಾರಾಟ ಮಾಡಿದರೆ ರೈತರಿಗೆ ಲಾಭವಲ್ಲ, ಮಾಡಿದ ಖರ್ಚು ಕೂಡಾ ಬರುವುದಿಲ್ಲ ಎಂದಿದ್ದಾರೆ ರೈತ ಮುತ್ತುಸ್ವಾಮಿ.

Koppal Rice Crisis: Karnataka paddy Farmers Face Ruin Amidst Price Crash

ಪ್ರತಿ ಎಕರೆಗೆ ಭತ್ತ ಬೆಳೆಯಲು ಸರಿಸುಮಾರು ನಲವತ್ತು ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ, ಇದೀಗ ಬೆಲೆ ಇಳಿಕೆಯಿಂದ ರೈತರಿಗೆ ಭತ್ತ ಬೆಳೆಯಲು ಮಾಡಿದ ಸಾಲ ಕೂಡ ತೀರಿಸಲಾಗದಂಥ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬೆಲೆ ಕಡಿಮೆಯಾಗಿದ್ದು ಒಂದಡೆಯಾದರೆ, ಭತ್ತ ಖರೀದಿಗೆ ಕೂಡಾ ವ್ಯಾಪರಸ್ಥರು ಮುಂದಾಗುತ್ತಿಲ್ಲ. ಹೀಗಾಗಿ ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ರೈತರು ಭತ್ತವನ್ನು ಮರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಉತ್ಪಾದನೆ ಹೆಚ್ಚಳ ಬೆಲೆ ಇಳಿಕೆಗೆ ಕಾರಣವಂತೆ!

ಸದ್ಯ ಹೆಚ್ಚಿನ ಪ್ರಮಾಣದ ಭತ್ತ ಉತ್ಫಾದನೆಯಾಗಿರುವುದರಿಂದ ವ್ಯಾಪರಸ್ಥರು ಬೆಲೆ ಕಡಿಮೆ ಮಾಡಿದ್ದಾರಂತೆ. ಹೀಗಾಗಿ ಸರ್ಕಾರ ಕೂಡಲೆ ಪ್ರತಿ ಕ್ವಿಂಟಲ್​ಗೆ ಎರಡೂವರೆ ಸಾವರಿಂದ ಮೂರು ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಖರೀದಿ ಕೇಂದ್ರವನ್ನು ಆರಂಭ ಮಾಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. ಭತ್ತ ಖರೀದಿ ಕೇಂದ್ರ ಆರಂಭದಿಂದ ಮಾರುಕಟ್ಟೆಯಲ್ಲಿ ಕೂಡಾ ವ್ಯಾಪರಸ್ಥರು ಹೆಚ್ಚಿನ ಬೆಲೆಗೆ ಖರೀದಿಸುತ್ತಾರೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಆರಂಭದಲ್ಲಿಯೇ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಕೊನೆಯ ಹಂತದಲ್ಲಿ ಖರೀದಿ ಕೇಂದ್ರ ಆರಂಬಿಸಿದರೆ ಪ್ರಯೋಜನವಾಗುವುದಿಲ್ಲ. ಕೂಡಲೇ ಸರ್ಕಾರ ರೈತರ ನೆರವಿಗೆ ಬರಬೇಕು ಅಂತ ರೈತರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಉತ್ತರ ಕರ್ನಾಟಕ ಭಾಗದ ಅಗ್ನಿವೀರ್ ರ‍್ಯಾಲಿ: ಎಷ್ಟು ದಿನ, ಆಯ್ಕೆ ಪ್ರಕ್ರಿಯೆ ಹೇಗೆ? ಇಲ್ಲಿದೆ ಮಾಹಿತಿ

ಈಗಾಗಲೇ ಭತ್ತದ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಬೆಲೆ ಇಳಿಕೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಹೀಗಾಗಿ ಸರ್ಕಾರ ರೈತರ ನೆರವಿಗೆ ಬರಬೇಕಿದೆ. ಭತ್ತದ ಬೆಲೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್​ ಅಧಿಕಾರಿ
Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್​ ಅಧಿಕಾರಿ
ಕೇರಳದ ಸೀರೆ ತೊಟ್ಟು, ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಪ್ರಮಾಣವಚನ
ಕೇರಳದ ಸೀರೆ ತೊಟ್ಟು, ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಪ್ರಮಾಣವಚನ
ಅರಣ್ಯ ಇಲಾಖೆ ಸಿಬ್ಬಂದಿಯ ನಿಷ್ಕ್ರಿಯತೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಅರಣ್ಯ ಇಲಾಖೆ ಸಿಬ್ಬಂದಿಯ ನಿಷ್ಕ್ರಿಯತೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಖಾಲಿಯಿದ್ದಾಗೆಲ್ಲ ಇಬ್ರಾಹಿಂ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ: ಮಂಜುನಾಥ
ಖಾಲಿಯಿದ್ದಾಗೆಲ್ಲ ಇಬ್ರಾಹಿಂ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ: ಮಂಜುನಾಥ
‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?