ತೆಂಗಿನ ಗರಿಯಲ್ಲಿ ಶ್ರೀಗಳ ಚಿತ್ರ ಬಿಡಿಸಿ ಗೌರವ ಸಲ್ಲಿಸಿದ ಕೊಪ್ಪಳ ಯುವಕ; ವಿಡಿಯೋ ವೈರಲ್

ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರ ಗ್ರಾಮದ ಚಂದ್ರಶೇಖರ್ ಕೆಲ್ಲರೂ ಎಂಬ ಯುವಕ ತೆಂಗಿನ ಗರಿಯಲ್ಲಿ ಇಬ್ಬರು ಸ್ವಾಮೀಜಿಗಳ ಚಿತ್ರ ಬಿಡಿಸಿದ್ದಾನೆ. ಇಂದು ಪುಣ್ಯ ತಿಥಿ ಹಿನ್ನೆಲೆ ಚಂದ್ರಶೇಖರ ನಿರಂತರ ಹತ್ತು ಗಂಟೆಗಳ ಕಾಲ ತೆಂಗಿನ ಗರಿಯಲ್ಲಿ ಚಿತ್ರ ಬಿಡಿಸಿ ಜಿಲ್ಲೆಯ ಮನ ಗೆದ್ದಿದ್ದಾನೆ.

ತೆಂಗಿನ ಗರಿಯಲ್ಲಿ ಶ್ರೀಗಳ ಚಿತ್ರ ಬಿಡಿಸಿ ಗೌರವ ಸಲ್ಲಿಸಿದ ಕೊಪ್ಪಳ ಯುವಕ; ವಿಡಿಯೋ ವೈರಲ್
ತೆಂಗಿನ ಗರಿಯಲ್ಲಿ ಶ್ರೀಗಳ ಚಿತ್ರ

ಕೊಪ್ಪಳ: ಸಾಮಾನ್ಯವಾಗಿ ಚಿತ್ರಕಲೆಯನ್ನು ಪೇಪರ್, ಗೋಡೆ, ವಿವಿಧ ತರಹದ ಕಲಾಕೃತಿಗಳ ಮೇಲೆ ಕಾಣಬಹುದು. ಆದರೆ ಯುವಕನೊಬ್ಬ ತೆಂಗಿನ ಗರಿಯಲ್ಲಿ ಚಿತ್ರ ಬಿಡಿಸಿದ್ದಾನೆ. ಸ್ವಾಮಿಗಳ ಮೇಲಿನ ಗೌರವವನ್ನು ಚಿತ್ರಕಲೆ ಮೂಲಕ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಾನೆ. ಇಂದು (ಜೂನ್ 24) ಮಠದ ಚಂದ್ರಶೇಖರ ಸ್ವಾಮೀಜಿ, ಶಶಿಧರ ಸ್ವಾಮೀಜಿಗಳ ಪುಣ್ಯ ತಿಥಿ ಇತ್ತು. ಸಾಮಾನ್ಯವಾಗಿ ಪುಣ್ಯ ತಿಥಿ ಅಂದರೆ ಪೂಜೆ ಮಾಡಿ ಗೌರವ ಸಲ್ಲಿಸುತ್ತಾರೆ. ಆದರೆ ಯುವಕ ತೆಂಗಿನ ಗರಿಯಲ್ಲಿ ಸ್ವಾಮೀಜಿಗಳ ಚಿತ್ರ ಬರೆದು ಗೌರವ ನೀಡಿದ್ದಾನೆ.

ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರ ಗ್ರಾಮದ ಚಂದ್ರಶೇಖರ್ ಕೆಲ್ಲರೂ ಎಂಬ ಯುವಕ ತೆಂಗಿನ ಗರಿಯಲ್ಲಿ ಇಬ್ಬರು ಸ್ವಾಮೀಜಿಗಳ ಚಿತ್ರ ಬಿಡಿಸಿದ್ದಾನೆ. ಇಂದು ಪುಣ್ಯ ತಿಥಿ ಹಿನ್ನೆಲೆ ಚಂದ್ರಶೇಖರ ನಿರಂತರ ಹತ್ತು ಗಂಟೆಗಳ ಕಾಲ ತೆಂಗಿನ ಗರಿಯಲ್ಲಿ ಚಿತ್ರ ಬಿಡಿಸಿ ಜಿಲ್ಲೆಯ ಮನ ಗೆದ್ದಿದ್ದಾನೆ. ಚಂದ್ರಶೇಖರ್​ಗೆ ಮೊದಲಿನಂದಲೂ ಚಿತ್ರಕಲೆ ಅಂದರೆ ಹೆಚ್ಚು ಆಸಕ್ತಿ. ಅರಳಿ ಎಲೆಯ ಮೇಲೆ ಚಿತ್ರ ಬಿಡಿಸುತ್ತಿದ ಚಂದ್ರಶೇಖರ್, ಸ್ವಾಮೀಜಿಗಳ ಪುಣ್ಯತಿಥಿಗೆ ಏನಾದರೂ ಮಾಡಬೇಕು ಎನ್ನುವ ಉದ್ದೇಶಕ್ಕೆ ತೆಂಗಿನ ಗರಿಯನ್ನು ಆಯ್ಕೆ ಮಾಡಿಕೊಂಡಿದ್ದಾನೆ.

ತೆಂಗಿನ ಗರಿಯನ್ನು ತೆಗೆದುಕೊಂಡು ನಿರಂತರ ಹತ್ತು ಗಂಟೆಗಳ ಕಾಲ ಒಂದೇ ಗೆರೆಯಲ್ಲಿ ಇಬ್ಬರು ಸ್ವಾಮೀಜಿಗಳ ಚಿತ್ರ ಬಿಡಿಸಿದ್ದಾನೆ. ಚಂದ್ರಶೇಖರ್ ಬಿಡಿಸಿದ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುವೆ ವ್ಯಕ್ತವಾಗಿದೆ. ಜನ ವಿಶೇಷ ಪ್ರತಿಭೆಯನ್ನು ನೋಡಿ ಚಿತ್ರಕಲೆ ವಿಡಿಯೋಗೆ ನಾನಾ ತರಹದ ಹಾಡು ಹಾಕಿ ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ.

ಅರಳಿ ಎಲೆ ಮೇಲೆ ಮೂಡಿಬಂದ ಚಿತ್ರ

ಇದಕ್ಕೂ ಮೊದಲು ಚಂದ್ರಶೇಖರ್ ಅರಳಿ ಗಿಡದ ಎಲೆಯಲ್ಲಿ ಬಾಲಿವುಡ್ ತಾರೆ ಸೊನು ಸೂದ್ ಚಿತ್ರ ಬಿಡಿಸಿದ್ದ. ಕೊರೊನಾ ಸಂದರ್ಭದಲ್ಲಿ ಕರುನಾಡಿಗೆ ನೆರವಾದ ಬಾಲಿವುಡ್ ತಾರೆ ಸೋನು ಸುದ್ ಚಿತ್ರ ಬಿಡಿಸಿ ಗೌರವ ಸಲ್ಲಿಸಿದ್ದ.

ಚಂದ್ರಶೇಖರ್ ಸದ್ಯ ಐಟಿಐ ದ್ವೀತಿಯ ವರ್ಷದಲ್ಲಿ ಓದುತ್ತಿದ್ದಾನೆ. ಐಟಿಐ ಓದುತ್ತಿದ್ದರೂ ಚಂದ್ರುಗೆ ಕಲೆ ಬಗ್ಗೆ ಆಸಕ್ತಿ. ಕಳೆದ ಐದಾರು ವರ್ಷಗಳಿಂದ ನಾನಾ ತರಹದ ಪೇಂಟಿಂಗ್ ಮಾಡಿದ್ದಾನೆ.

ನಮ್ಮ ಗ್ರಾಮದ ಇಬ್ಬರು ಸ್ವಾಮೀಜಿಗಳ ಪುಣ್ಯ ತಿಥಿ ಇತ್ತು. ನಾನು ಏನಾದರೂ ಗೌರವ ಸಲ್ಲಿಸಬೇಕು ಅಂದುಕೊಂಡಿದ್ದೆ. ಮೊದಲು ಅರಳಿ ಮರದ ಎಲೆಯಲ್ಲಿ ಚಿತ್ರ ಬಿಡಿಸು ರೂಢಿ ಇತ್ತು. ತೆಂಗಿನ ಮರ ಕಂಡ ತಕ್ಷಣ ಅದರಲ್ಲೆ ಚಿತ್ರ ಬಿಡಿಸುವ ಯೋಚನೆ ಬಂತು. ಹಾಗಾಗಿ ಸ್ವಾಮೀಜಿಗಳ ಚಿತ್ರ ಬಿಡಿಸಿದ್ದೇನೆ. ಸುಮಾರು ಹತ್ತು ಗಂಟೆ ಕಷ್ಟ ಪಟ್ಟು ಚಿತ್ರ ಬಿಡಿಸಿದ್ದೇನೆ. ನನಗೆ ಚಿತ್ರಕಲೆಯಲ್ಲಿ ನ್ಯಾಷನಲ್ ಅವಾರ್ಡ್ ತಗೋಬೇಕು ಎನ್ನುವ ಕನಸು ಇದೆ ಅಂತ ಚಂದ್ರಶೇಖರ್ ತಿಳಿಸಿದ್ದಾನೆ.

ಇದನ್ನೂ ಓದಿ

‘ನನ್ನ ಗೆಳೆಯನನ್ನೇ ನೋಡಿದಂತಾಗುತ್ತಿದೆ’; ಜ್ಯೂ. ಚಿರು ದಿಟ್ಟಿಸಿ ನೋಡುವ ಫೋಟೋ ಹಂಚಿಕೊಂಡ ಪನ್ನಗಭರಣ

ಕೊವ್ಯಾಕ್ಸಿನ್ ಲಸಿಕೆ ಬಳಕೆಗೆ ಸಿಕ್ಕಿಲ್ಲ ಪೂರ್ಣ ಪ್ರಮಾಣದ ಒಪ್ಪಿಗೆ; ಇನ್ನೂ ಬಾಕಿ ಇದೆ 3ನೇ ಹಂತದ ಪ್ರಯೋಗ! ಮುಂದೇನು?

(koppal young man make a picture of a Swamiji on coconut feather)