ಆಸ್ಪತ್ರೆ ಸಿಬ್ಬಂದಿ ಎಡವಟ್ಟಿಗೆ ಬಲಿಯಾದ ಅಮಾಯಕ: ವೈದ್ಯರ ನಿರ್ಲಕ್ಷ್ಯಕ್ಕೆ ಸಂಬಂಧಿಕರ ಆಕ್ರೋಶ

ಲಾಚನಕೇರಿ ಸಮೀಪ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಫಕೀರಪ್ಪನನ್ನು ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕೊಪ್ಪಳದ ಕೆ.ಎಸ್.ಆಸ್ಪತ್ರೆಗೆ ಕರೆತರಲಾಗಿತ್ತು. ನಿನ್ನೆ ರಾತ್ರಿಯಿಂದ ಮಧ್ಯಾಹ್ನ 12.30ರ ವರೆಗೆ ಚಿಕಿತ್ಸೆ ನೀಡಲಾಗಿದ್ದು,ನಂತರ ಡೆತ್ ಎಂದು ವೈದ್ಯರು ತಿಳಿಸಿದ್ದಾರೆ.

  • TV9 Web Team
  • Published On - 19:31 PM, 4 Feb 2021
ಆಸ್ಪತ್ರೆ ಸಿಬ್ಬಂದಿ ಎಡವಟ್ಟಿಗೆ ಬಲಿಯಾದ ಅಮಾಯಕ: ವೈದ್ಯರ ನಿರ್ಲಕ್ಷ್ಯಕ್ಕೆ ಸಂಬಂಧಿಕರ ಆಕ್ರೋಶ
ಆಸ್ಪತ್ರೆಯ ದೃಶ್ಯ

ಕೊಪ್ಪಳ:  ಜೀವ ಇರುವಾಗಲೇ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿ ವೈದ್ಯರು ಎಡವಟ್ಟು ಮಾಡಿದ ಘಟನೆ ಕೊಪ್ಪಳದ ಕೆ.ಎಸ್.ಆಸ್ಪತ್ರೆಯಲ್ಲಿ ನಡೆದಿದೆ. ಲಾಚನಕೇರಿ ಸಮೀಪ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಫಕೀರಪ್ಪನನ್ನು ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕೊಪ್ಪಳದ ಕೆ.ಎಸ್.ಆಸ್ಪತ್ರೆಗೆ ಕರೆತರಲಾಗಿತ್ತು. ನಿನ್ನೆ ರಾತ್ರಿಯಿಂದ ಮಧ್ಯಾಹ್ನ 12.30ರ ವರೆಗೆ ಚಿಕಿತ್ಸೆ ನೀಡಲಾಗಿದ್ದು, ನಂತರ ಡಿಸ್‌ಚಾರ್ಜ್ ಸಾರಾಂಶದಲ್ಲಿ ಡೆತ್ ಎಂದು ಬರೆದಿದ್ದಾರೆ.

ಡೆತ್ ಎಂಬ ಪದ ನೋಡಿ ಮೃತದೇಹ ಕೊಡಿ ಎಂದು ಸಂಬಂಧಿಕರು ಕೇಳಿದಾಗ ಜೀವ ಇರುವುದು ಬೆಳಕಿಗೆ ಬಂದಿದ್ದು, ಫಕೀರಪ್ಪ ದೊಡ್ಡಮನಿ ಉಸಿರಾಡಿದ್ದಾನೆ. ತಕ್ಷಣವೇ ಆತನನ್ನು ಜಿಲ್ಲಾಸ್ಪತ್ರೆಗೆ ಆಟೋದಲ್ಲಿ ಸಂಬಂಧಿಕರು ಕರೆದುಕೊಂಡು ಹೊಗಿದ್ದು, ಆ್ಯಂಬುಲೆನ್ಸ್‌ನ್ನು ಕೂಡ ನೀಡದೇ ಕೆ.ಎಸ್‌.ಆಸ್ಪತ್ರೆ ಸಿಬ್ಬಂದಿಗಳು ಅಮಾನವೀಯತೆ ತೋರಿದ್ದಾರೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಇದೀಗ ಫಕೀರಪ್ಪ ಮೃತಪಟ್ಟಿದ್ದಾನೆ. ಆಸ್ಪತ್ರೆಯವರ ಈ ಎಡವಟ್ಟಿಗೆ ಸದ್ಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡೆತ್ ಸಾರಾಂಶ ಹಿಡಿದಿರುವ ಕುಟುಂಬಸ್ಥರು

ಆಯುಷ್ ಆಸ್ಪತ್ರೆ ಕರ್ಮಕಾಂಡ.. ಲಕ್ಷಾಂತರ ರೂ ಸಂಬಳ ಪಡೆಯುವ ವೈದ್ಯರು ಆಸ್ಪತ್ರೆಗೆ ಬಾರದೇ ಚಕ್ಕರ್!