Karnataka Bandh: ಸೆಪ್ಟೆಂಬರ್ 27ರಂದು ಕರ್ನಾಟಕ ಬಂದ್ ಖಚಿತ: ಕುರುಬೂರು ಶಾಂತಕುಮಾರ್ ಘೋಷಣೆ

ಸೆಪ್ಟೆಂಬರ್ 27ಕ್ಕೆ ಏಕೆ ಬಂದ್​ಗೆ ಕರೆ ನೀಡಲಾಗಿದೆ? ಕರ್ನಾಟಕವೂ ಬಂದ್ ಆಗಲಿದೆಯಾ? ವಿವರಗಳಿಗಾಗಿ ಓದಿ.

Karnataka Bandh: ಸೆಪ್ಟೆಂಬರ್ 27ರಂದು ಕರ್ನಾಟಕ ಬಂದ್ ಖಚಿತ: ಕುರುಬೂರು ಶಾಂತಕುಮಾರ್ ಘೋಷಣೆ
ಕುರುಬೂರು ಶಾಂತಕುಮಾರ್
TV9kannada Web Team

| Edited By: guruganesh bhat

Sep 16, 2021 | 4:07 PM

ಕಲಬುರಗಿ: ಸೆಪ್ಟೆಂಬರ್27 ರಂದು ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಬಂದ್ ಘೋಷಿಸಲಾಗಿದ್ದು, ಅಂದು ಕರ್ನಾಟಕದಲ್ಲಿ ಕೂಡಾ ಬಂದ್ ಆಚರಿಸಲಾಗುವುದು ಎಂದು ಕಲಬುರಗಿ ನಗರದಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಘೋಷಿಸಿದರು. ಭಾರತ್ ಬಂದ್​ಗೆ ಐನೂರಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಸಹ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. 

ಸೆಪ್ಟೆಂಬರ್ 27ಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಕರ್ನಾಟಕ ಬಂದ್​ಗೆ (Karnataka Band) ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಬೆಂಬಲ ನೀಡುತ್ತಿದೆ. ಕೇಂದ್ರದ 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು(Farm Laws) ವಿರೋಧಿಸಿ ಸೆ.27ಕ್ಕೆ ಕರ್ನಾಟಕ ಬಂದ್ ಮಾಡಲಾಗುತ್ತದೆ ಎಂದು ಹೇಳಿಕೆ ನೀಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಾಂತಕುಮಾರ್, ದೇಶದಲ್ಲಿ ಆಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನಸಾಮಾನ್ಯರ ಜೀವನದ ಮೇಲೆ ಹೊಡೆತ ಬಿದ್ದಿದೆ. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು. ಕಬ್ಬು ಬೆಳೆಗಾರಿಗೆ ನ್ಯಾಯ ಸಿಗಬೇಕು. ಕಬ್ಬಿನ ಬೆಲೆ ಪರಿಷ್ಕರಣೆ ಆಗಬೇಕಿದೆ. ಈ ರೀತಿ ಎಲ್ಲಾ ವಿಚಾರಗಳಿಂದ ಬಂದ್​ಗೆ ಬೆಂಬಲ ನೀಡಲಾಗುತ್ತಿದೆ. ಆನೇಕ ಸಂಘಟನೆಗಳು ಬಂದ್​ಗೆ ಬೆಂಬಲ‌ ನೀಡಿವೆ ಎಂದು ಕುರುಬೂರು ಶಾಂತಕುಮಾರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: 

ಗೀತ ಗೋವಿಂದಂ ರೀತಿಯಲ್ಲೇ ಚಲಿಸುತ್ತಿರುವ ಬಸ್ಸಲ್ಲಿ ಯುವತಿಯನ್ನು ಚುಂಬಿಸಿದ ಯುವಕ; ಕೇಸ್ ದಾಖಲು

Credit Card: ಕ್ರೆಡಿಟ್ ಕಾರ್ಡ್ ಮಿತಿ ಜಾಸ್ತಿ ಇರುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ

(Kuruburu Shanthakumar announce Karnataka Bandh on September 27th for supporting Bharath bandh)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada