AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್‌ಡೌನ್‌ ತೆರವಾದರೂ ಸುಧಾರಿಸಿಲ್ಲ ನೇಕಾರರ ಬದುಕು; ಬಾಗಲಕೋಟೆಯಲ್ಲಿ ನೇಯ್ದ ಬಟ್ಟೆ ಮನೆಯಲ್ಲೇ ರಾಶಿ

ನೇಯ್ದ ಪ್ರತಿ ಸೀರೆಗೆ 99 ರೂಪಾಯಿ ಸಿಗುತ್ತಿತ್ತು. ಹೀಗಾಗಿ ನೇಕಾರರ ಜೀವನ ಸಮೃದ್ಧ ಅಲ್ಲದಿದ್ದರೂ ಸ್ವಲ್ಪಮಟ್ಟಿಗೆ ಸುಖಮಯವಾಗಿತ್ತು. ಆದರೆ ಮಾರುಕಟ್ಟೆ ಮುಚ್ಚಿದ ಕಾರಣ ಒಂದು ಕುಟುಂಬದಿಂದ ಕೇವಲ ಒಂದೇ ಸೀರೆ ನೇಯುವ ಪರಿಸ್ಥಿತಿ ಬಂದಿದೆ ಎಂದು ನೇಕಾರರಾದ ವಿಷ್ಣು ತಿಳಿಸಿದ್ದಾರೆ.

ಲಾಕ್‌ಡೌನ್‌ ತೆರವಾದರೂ ಸುಧಾರಿಸಿಲ್ಲ ನೇಕಾರರ ಬದುಕು; ಬಾಗಲಕೋಟೆಯಲ್ಲಿ ನೇಯ್ದ ಬಟ್ಟೆ ಮನೆಯಲ್ಲೇ ರಾಶಿ
ಲಾಕ್‌ಡೌನ್‌ ತೆರವಾದರೂ ಸುಧಾರಿಸಿಲ್ಲ ನೇಕಾರರ ಬದುಕು
TV9 Web
| Updated By: preethi shettigar|

Updated on: Jun 28, 2021 | 1:18 PM

Share

ಬಾಗಲಕೋಟೆ: ರಾಜ್ಯದಲ್ಲಿಯೇ ಅತೀ ಹೆಚ್ಚು ನೇಕಾರರು ಇರುವ ಜಿಲ್ಲೆ ಎಂದರೆ ಅದು ಬಾಗಲಕೋಟೆ. ಆದರೆ ಹೆಚ್ಚು ನೇಕಾರರನ್ನೇ ಹೊಂದಿರುವ ಜಿಲ್ಲೆಯಲ್ಲಿ ಅವರ ಗೋಳು ಮಾತ್ರ ನಿರಂತರವಾಗಿದೆ. ಕೊವಿಡ್ ಲಾಕ್​ಡೌನ್‌ ಸಮಯದಲ್ಲಿ ನೇಕಾರರು ಸೀರೆ ವ್ಯಾಪಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ಅನ್​ಲಾಕ್​ ಆಗಿದೆ. ಆದರೂ ಕೂಡ ಬಟ್ಟೆ ನೇಯುವ ನೇಕಾರನ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಸೂಕ್ತ ಮಾರುಕಟ್ಟೆ ಸಿಗದ ಕಾರಣ ನೇಯ್ದಿಟ್ಟ ಬಟ್ಟೆಗಳು ಮನೆಯಲ್ಲಿಯೇ ಇಟ್ಟುಕೊಂಡು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತ ಮಾರುಕಟ್ಟೆ ಇಲ್ಲದೇ ಯಾವುದೇ ಆರ್ಡರ್​ಗಳು ನಮಗೆ ಸಿಗುತ್ತಿಲ್ಲ. ಅಲ್ಲದೇ ಈಗಾಗಲೇ ನೇಯ್ದಿಟ್ಟ ಬಟ್ಟೆಗಳು ಹಾಗೆಯೇ ಮನೆಯಲ್ಲಿಯೇ ಉಳಿದಿವೆ. ಕಳೆದ ವರ್ಷವೂ ಲಾಕ್​ಡೌನ್​ನಲ್ಲಿ ಮಾರುಕಟ್ಟೆ ಬಂದ್ ಆಗಿ ನೇಕಾರರು ಸಾಲದ ಸುಳಿಯಲ್ಲಿ ಸಿಲುಕಿದ್ದರು. ಈಗಲೂ ಪುನಃ ಲಾಕ್​ಡೌನ್ ಹೊಡೆತದಿಂದ ಕಂಗಾಲಾಗಿದ್ದೇವೆ. ಇನ್ನು‌ ಮದುವೆಗಳು ನಡೆಯದೇ ಇರುವುದು ನಮ್ಮ ನಷ್ಟಕ್ಕೆ ಕಾರಣವಾಗಿದೆ ಎಂದು ನೇಕಾರರಾದ ದೀಪಾ ತಿಳಿಸಿದ್ದಾರೆ.

ಸಾಮಾನ್ಯವಾಗಿ ಒಂದು ಸೀರೆ ರೆಡಿಯಾಗಿ ಬರಬೇಕಂದರೆ ಕನಿಷ್ಠ 6 ಗಂಟೆ ಸಮಯ ಹಿಡಿಯುತ್ತದೆ. ಹಾಗಿದ್ದರೂ ಓರ್ವ ನೇಕಾರ ಮಾರುಕಟ್ಟೆ ಓಪನ್‌ ಇದ್ದಾಗ ದಿನವೊಂದಕ್ಕೆ 4 ಸೀರೆಗಳನ್ನು ನೇಯುತ್ತಿದ್ದರು.‌ ಒಂದು ಕುಟುಂಬದಲ್ಲಿ ಮೂರರಿಂದ ನಾಲ್ಕು ಜನ ಒಂದು ದಿನಕ್ಕೆ 16 ಸೀರೆಗಳನ್ನು ನೇಯ್ದು ಅಂದೇ ಅವುಗಳನ್ನು ಮಾರುಕಟ್ಟೆಗೆ ರವಾನೆ ಮಾಡುತ್ತಿದ್ದರು. ಹೀಗೆ ನೇಯ್ದ ಪ್ರತಿ ಸೀರೆಗೆ 99 ರೂಪಾಯಿ ಸಿಗುತ್ತಿತ್ತು. ಹೀಗಾಗಿ ನೇಕಾರರ ಜೀವನ ಸಮೃದ್ಧ ಅಲ್ಲದಿದ್ದರೂ ಸ್ವಲ್ಪಮಟ್ಟಿಗೆ ಸುಖಮಯವಾಗಿತ್ತು. ಆದರೆ ಮಾರುಕಟ್ಟೆ ಮುಚ್ಚಿದ ಕಾರಣ ಒಂದು ಕುಟುಂಬದಿಂದ ಕೇವಲ ಒಂದೇ ಸೀರೆ ನೇಯುವ ಪರಿಸ್ಥಿತಿ ಬಂದಿದೆ ಎಂದು ನೇಕಾರರಾದ ವಿಷ್ಣು ತಿಳಿಸಿದ್ದಾರೆ.

ನೇಯ್ದ ಒಂದು ಸೀರೆಯೂ ಈಗ ಮಾರುಕಟ್ಟೆಗೆ ಹೋಗಲ್ಲ. ಇದರಿಂದ ನೇಯ್ದ ಸೀರೆಗಳು, ಕಣಗಳು ಮಾರಾಟ ಆಗದೇ ಮನೆಯಲ್ಲಿಯೇ ಉಳಿಯುವಂತಾಗಿದೆ. ಕಳೆದ ಸರ್ಕಾರ ನೇಕಾರರಿಗೆ ಘೋಷಿಸಿದ ಪರಿಹಾರ ಕೇವಲ ನೇಕಾರ ಕಾರ್ಡ್ ಹೊಂದಿದವರಿಗೆ ಸಿಕ್ಕಿದ್ದು, ಉಳಿದವರಿಗೆ ಸಿಕ್ಕಿಲ್ಲ. ಈಗ ಪುನಃ 2 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಆದರೆ ಸರ್ಕಾರ ನೀಡಿರುವ ಈ ಪರಿಹಾರ ಯಾವುದಕ್ಕೂ ಸಾಲಲ್ಲ. ಹಾಗಾಗಿ ಸರ್ಕಾರ ನಮ್ಮ ನೆರವಿಗೆ ಬರಬೇಕು. ಮಾರುಕಟ್ಟೆ ಇಲ್ಲದೇ ಸಂಕಷ್ಟಕ್ಕೀಡಾದ ಬಡ ನೇಕಾರರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು ಎಂದು ನೇಕಾರರಾದ ವಿಷ್ಣು ಮನವಿ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಬಟ್ಟೆ ನೇಯುವಿಕೆಯನ್ನು ಕುಲಕಸುಬಾಗಿ ಮುಂದುವರೆಸಿಕೊಂಡು ಬಂದಿರುವ ನೇಕಾರರಿಗೆ ನೇಕಾರಿಕೆ ಬಿಟ್ಟು ಬೇರೆ ಕಾಯಕ ಬರಲ್ಲ. ಸದ್ಯ ಮಾರುಕಟ್ಟೆ ಇರದೇ ನೇಯ್ದ ಬಟ್ಟೆಗಳು ಮನೆಯಲ್ಲಿಯೇ ಉಳಿದುಕೊಂಡು ನೇಕಾರರ ಸ್ಥಿತಿ ಅಯೋಮಯವಾಗಿದೆ. ಸರ್ಕಾರ ಬಡ ನೇಕಾರರ ಇಂತಹ ಸಂಕಷ್ಟಕ್ಕೆ ಸ್ಪಂದಿಸಿ ಸೂಕ್ತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ಮಾಡಬೇಕಿದೆ.

ಇದನ್ನೂ ಓದಿ:

ಗದಗದಲ್ಲಿ ತಯಾರಾಗುವ ಶಿಗ್ಲಿ ಸೀರೆಗೆ ಮಾರು ಹೋದ ಮಹಿಳೆಯರು; ಬೇಸಿಗೆಗೆ ಹೇಳಿ ಮಾಡಿಸಿದ ಕಾಟನ್ ಸೀರೆ

ಲಾಕ್​ಡೌನ್​ನಿಂದ ಬಾಡುತ್ತಿದೆ ರೈತರ ಬದುಕು; 80 ಸಾವಿರ ಖರ್ಚು ಮಾಡಿ ಬೆಳೆದ ಬೀಟ್ರೂಟ್​ನಿಂದ 80 ರೂ. ಲಾಭವಿಲ್ಲ

ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ