ಕೊರೊನಾ ಎರಡನೇ ಅಲೆಯ ಆತಂಕ; ಮತ್ತೆ ಲಾಕ್ ಆದ್ರೆ ಎದುರಾಗಲಿದೆ ಕಷ್ಟ-ನಷ್ಟ
ಬೆಂಗಳೂರಿನಲ್ಲಿ 75 ಸಾವಿರ ಜನ ಬೀದಿ ಬದಿ ವ್ಯಾಪಾರಿಗಳಿದ್ದು, ರಾಜ್ಯದಲ್ಲಿ ಒಟ್ಟು 4.5 ಲಕ್ಷ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಒಬ್ಬ ಬೀದಿ ಬದಿ ವ್ಯಾಪಾರಿಯ ದಿನದ ಆದಾಯ 200 ರಿಂದ 500 ರೂಪಾಯಿಯಾಗಿದ್ದು, ಕಳೆದ ಬಾರಿಯ ಲಾಕ್ ಡೌನ್ ನಿಂದ ಒಂದು ದಿನಕ್ಕೆ ಬರೋಬ್ಬರಿ 13.5 ಕೋಟಿ ರೂಪಾಯಿ ನಷ್ಟವಾಗಿತ್ತು.
ಬೆಂಗಳೂರು: ದೇಶದೆಲ್ಲೆಡೆ ಕೊರೊನಾ ಸೋಂಕು ಮತ್ತೆ ತೀವ್ರವಾಗುತ್ತಿದ್ದು, ಕೊವಿಡ್ 19 ರ ಎರಡನೇ ಅಲೆಗೆ ಇಡಿ ದೇಶವೇ ತತ್ತರಿಸುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಳೆದ ವರ್ಷದ ಲಾಕ್ಡೌನ್ ನಿಂದಲೇ ಸಾಕಷ್ಟು ನಷ್ಟವಾಗಿದ್ದು, ಇನ್ನೇನು ಜನರು ಈ ನಷ್ಟದಿಂದ ಮೇಲೆದ್ದು, ಮತ್ತೆ ಮೊದಲಿನಂತೆ ಜೀವನ ನಡೆಸಲು ಮುಂದಾಗಿದ್ದರು. ಆದರೆ ಈ ನಿರಾಳತೆಗೆ ಮತ್ತೆ ತಡೆಯೊಡ್ಡಿದಂತಾಗಿದ್ದೆ. ಈಗಾಗಲೇ ನೈಟ್ ಕಫ್ಯೂ ಜಾರಿಯಾಗಿದ್ದು, ಜನರ ವ್ಯಾಪಾರದ ಮೇಲೆ ಮತ್ತೆ ಕೊಡಲಿ ಏಟು ಬಿದ್ದಂತಾಗಿದೆ. ಹಿಂದಿನ ವರ್ಷ ಲಾಕ್ಡೌನ್ನಿಂದಾಗಿ ಆದ ನಷ್ಟವನ್ನು ಗಮನಿಸಿದರೆ ಮತ್ತೆ ಲಾಕ್ಡೌನ್ ಆದರೆ ಇದರ ದುಪ್ಪಟ್ಟು ನಷ್ಟ ಎದುರಿಸಬೇಕಾಗುತ್ತದೆ ಎನ್ನುವುದು ಮಾತ್ರ ನಿಜ.
ಕಳೆದ ವರ್ಷದ ಲಾಕ್ಡೌನ್ನಿಂದಾದ ನಷ್ಟ ಬೆಂಗಳೂರಿನಲ್ಲಿ 75 ಸಾವಿರ ಜನ ಬೀದಿ ಬದಿ ವ್ಯಾಪಾರಿಗಳಿದ್ದು, ರಾಜ್ಯದಲ್ಲಿ ಒಟ್ಟು 4.5 ಲಕ್ಷ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಒಬ್ಬ ಬೀದಿ ಬದಿ ವ್ಯಾಪಾರಿಯ ದಿನದ ಆದಾಯ 200 ರಿಂದ 500 ರೂಪಾಯಿಯಾಗಿದ್ದು, ಕಳೆದ ಬಾರಿಯ ಲಾಕ್ಡೌನ್ನಿಂದ ಒಂದು ದಿನಕ್ಕೆ ಬರೋಬ್ಬರಿ 13.5 ಕೋಟಿ ರೂಪಾಯಿ ನಷ್ಟವಾಗಿತ್ತು.
ಲಾಕ್ಡೌನ್ ಬೆಂಗಳೂರಿನಲ್ಲಾದ ನಷ್ಟ ಎಷ್ಟು ಗೊತ್ತಾ? ಲಾಕ್ಡೌನ್ ವೇಳೆ ಬೆಂಗಳೂರಿಗೆ ಪ್ರತೀ ಒಂದು ದಿನಕ್ಕೆ 100 ಕೋಟಿಗೂ ಅಧಿಕ ಮೊತ್ತದ ನಷ್ಟವಾಗಿತ್ತು. ಬೆಂಗಳೂರಿನಲ್ಲೇ ಶೇಕಡಾ 60 ರಷ್ಟು ಆದಾಯ ಬರುತ್ತಿದೆ. ರಾಜ್ಯದ ಇತರೆ ಜಿಲ್ಲೆಗಳಿಂದ ಶೇಕಡಾ 40ರಷ್ಟು ಆದಾಯ ಬರುತ್ತಿದೆ. ಲಾಕ್ಡೌನ್ ವೇಳೆ 12 ಸಾವಿರ ಕೋಟಿಗೂ ಅಧಿಕ ನಷ್ಟವಾಗಿತ್ತು. ಒಟ್ಟು ಅಂದಾಜು 12,100 ಕೋಟಿಗೂ ಅಧಿಕ ರೂಪಾಯಿ ನಷ್ಟವಾಗಿದೆ.
ಗಾರ್ಮೆಂಟ್ಸ್ಗಳ ಸ್ಥಿತಿ ಏನು? ಬೆಂಗಳೂರಿನಲ್ಲೇ 4 ಸಾವಿರ ಗಾರ್ಮೆಂಟ್ಸ್ಗಳಿದ್ದು, ಲಾಕ್ಡೌನ್ ವೇಳೆ ಪ್ರತೀ ದಿನ ಬೆಂಗಳೂರಿನಲ್ಲಿ 10 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿತ್ತು. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಒಟ್ಟು 3 ಸಾವಿರ ಗಾರ್ಮೆಂಟ್ಸ್ಗಳಿದ್ದು, ಲಾಕ್ಡೌನ್ ವೇಳೆ ಪ್ರತೀ ದಿನ ರಾಜ್ಯದ ಇತರೆ ಜಿಲ್ಲೆಗಳಲ್ಲಿ 4.5 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿತ್ತು. ಬೆಂಗಳೂರಿನಲ್ಲಿ 8 ಲಕ್ಷ ಗಾರ್ಮೆಂಟ್ಸ್ ಕಾರ್ಮಿಕರು ದುಡಿಯುತ್ತಿದ್ದರೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 12 ರಿಂದ 14 ಲಕ್ಷ ಜನ ಕಾರ್ಮಿಕರಿದ್ದಾರೆ. ಪ್ರಸ್ತುತ ಶೇಕಡಾ 40ರಷ್ಟು ವ್ಯಾಪಾರ ಮಾತ್ರ ನಡೆಯುತ್ತಿದ್ದು, ಶೇಕಡಾ 60 ರಷ್ಟು ವ್ಯಾಪಾರ ಕುಸಿತವಾಗಿದೆ.
ಇನ್ನು ಪಬ್, ಬಾರ್ ಮತ್ತು ಕ್ಲಬ್ಗಳಿಗೆ ಲಾಕ್ಡೌನ್ ವೇಳೆ ಪ್ರತೀ ನಿತ್ಯ 50 ರಿಂದ 60 ಕೋಟಿ ರೂಪಾಯಿ ನಷ್ಟವಾಗಿದ್ದು, ಒಟ್ಟಾರೆ ಅಂದಾಜು 2 ಸಾವಿರದ 500 ಕೋಟಿ ರೂಪಾಯಿ ನಷ್ಟವಾಗಿದೆ. ಕಳೆದ ಬಾರಿ ಲಾಕ್ಡೌನ್ ಆದಾಗ ಹೊಟೇಲ್ಗಳಿಗೆ ಆದ ನಷ್ಟ ಹೊಟೇಲ್ ಉದ್ಯಮದಲ್ಲಿ12 ಕೋಟಿಗೂ ಅಧಿಕ (ದರ್ಶಿನಿ ಸೇರಿದಂತೆ ಸಣ್ಣ ಪುಟ್ಟ ಹೊಟೇಲ್ಸ್) ನಷ್ಟವಾಗಿದೆ.
ರೆಸ್ಟೋರೆಂಟ್: 18 ಕೋಟಿಗೂ ಅಧಿಕ ನಷ್ಟ ಹೊಟೇಲ್ ಮತ್ತು ರೆಸ್ಟೋರೆಂಟ್ ಎರಡೂ ಉದ್ಯಮದಿಂದ 30 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರದ ಹೆಬ್ಬಾರ್ ಅವರ ಮಾಹಿತಿ ಪ್ರಕಾರ ಸರ್ಕಾರಕ್ಕೆ ಕಟ್ಟುತ್ತಿದ್ದ ತೆರಿಗೆಯ 2 ಪಟ್ಟು ಹೆಚ್ಚು ನಷ್ಟವಾಗಿದೆ. ಪ್ರತಿ ವರ್ಷ ಸರ್ಕಾರಕ್ಕೆ 10 ಕೋಟಿ ತೆರಿಗೆ ಕಟ್ಟಲಾಗುತ್ತಿತ್ತು. ಅದರ ಆಧಾರದ ಮೇಲೆ 30 ಕೋಟಿ ಅಧಿಕ ನಷ್ಟ ಉಂಟಾಗಿದೆ (ಲಾಡ್ಜ್, ಹೊಟೇಲ್, ತ್ರಿ ಸ್ಟಾರ್, ಫೈವ್ ಸ್ಟಾರ್ ಹೊಟೇಲ್, ಎಸಿ, ನಾನ್ ಎಸಿ ಹೊಟೇಲ್, ಮಲ್ಟಿ ಡೀಲಕ್ಸ್ ಹೊಟೇಲ್ಸ್). ಹಾಗಾಗಿ ಮತ್ತೆ ಈಗ ಲಾಕ್ಡೌನ್ ಆದರೆ ಮತ್ತಷ್ಟು ನಷ್ಟ ಆಗಲಿದ್ದು ಜನ ದೊಡ್ಡ ಸಂಕಷ್ಟವನ್ನೇ ಎದರಿಸಬೇಕಾಗುತ್ತೆ.
ಇದನ್ನೂ ಓದಿ:
ಭಾರತಕ್ಕೆ ಬರಲಿವೆ ಇನ್ನೂ 5 ಕೊರೊನಾ ಲಸಿಕೆಗಳು; ಎಲ್ಲರಿಗೂ ಶೀಘ್ರ ಲಸಿಕೆ ದೊರೆಯುವ ನಿರೀಕ್ಷೆ
Covid-19 Karnataka Update: ಕರ್ನಾಟಕದಲ್ಲಿ ಇಂದು 10,250 ಮಂದಿಗೆ ಕೊರೊನಾ ಸೋಂಕು, 40 ಸಾವು
(loss during first covid 19 lockdown)