AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನ್ನಂಜೆ ಗೋವಿಂದಾಚಾರ್ಯರ ನೆನಪು | ಸಂಪ್ರದಾಯ-ಆಧುನಿಕತೆಯನ್ನು ಸಮನ್ವಯಿಸಿ ನೋಡಿದ ಘನ ವಿದ್ವಾಂಸ: ಮಲ್ಲೇಪುರಂ ಜಿ.ವೆಂಕಟೇಶ್

ಬನ್ನಂಜೆ ಗೋವಿಂದಾಚಾರ್ಯರ ವಿಚಾರಧಾರೆಯನ್ನು ಸಮಗ್ರ ದೃಷ್ಟಿಕೋನದಿಂದ ನೋಡಬಲ್ಲ ಕೆಲವೇ ವಿದ್ವಾಂಸರ ಪೈಕಿ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ, ಸಂಸ್ಕೃತಿ ಚಿಂತಕ ಮಲ್ಲೇಪುರಂ ಜಿ.ವೆಂಕಟೇಶ್ ಸಹ ಒಬ್ಬರು. ಭಾನುವಾರ ನಿಧನರಾದ ಆಚಾರ್ಯರ ಬಗ್ಗೆ ‘ಟವಿ9 ಡಿಜಿಟಲ್’ ಜೊತೆಗೆ ಮಲ್ಲೇಪುರಂ ಜಿ.ವೆಂಕಟೇಶ್ ಮನದ ಮಾತು ಹಂಚಿಕೊಂಡರು.

ಬನ್ನಂಜೆ ಗೋವಿಂದಾಚಾರ್ಯರ ನೆನಪು | ಸಂಪ್ರದಾಯ-ಆಧುನಿಕತೆಯನ್ನು ಸಮನ್ವಯಿಸಿ ನೋಡಿದ ಘನ ವಿದ್ವಾಂಸ: ಮಲ್ಲೇಪುರಂ ಜಿ.ವೆಂಕಟೇಶ್
ಬನ್ನಂಜೆ ಗೋವಿಂದಾಚಾರ್ಯ ನೆನಪು
ganapathi bhat
| Edited By: |

Updated on:Dec 15, 2020 | 6:27 PM

Share

ಮಲ್ಲೇಪುರಂ ಜಿ. ವೆಂಕಟೇಶ್

ಬನ್ನಂಜೆ ಗೋವಿಂದಾಚಾರ್ಯರ ವಿಚಾರಧಾರೆಯನ್ನು ಸಮಗ್ರ ದೃಷ್ಟಿಕೋನದಿಂದ ನೋಡಬಲ್ಲ ಕೆಲವೇ ವಿದ್ವಾಂಸರ ಪೈಕಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಸಂಸ್ಕೃತಿ ಚಿಂತಕ ಮಲ್ಲೇಪುರಂ ಜಿ.ವೆಂಕಟೇಶ್ ಸಹ ಒಬ್ಬರು. ಭಾನುವಾರ ನಿಧನರಾದ ಆಚಾರ್ಯರ ಬಗ್ಗೆ ‘ಟವಿ9 ಡಿಜಿಟಲ್’ ಜೊತೆಗೆ ಮಲ್ಲೇಪುರಂ ಜಿ.ವೆಂಕಟೇಶ್ ಮನದ ಮಾತು ಹಂಚಿಕೊಂಡರು.

ಬನ್ನಂಜೆ ಗೋವಿಂದಾಚಾರ್ಯರು ಸಂಪ್ರದಾಯ ಬಲ್ಲವರು. ಆದರೆ ಸಂಪ್ರದಾಯಕ್ಕೆ ಬದ್ಧರಾದವರಲ್ಲ. ಸಂಪ್ರದಾಯ ಅಂದರೆ ಒಳ್ಳೆಯದನ್ನ ಮುಂದಕ್ಕೆ ಕೊಂಡುಹೋಗುವುದು. ಸಂಪ್ರದಾಯದ ಯಾವುದೇ ವಿಚಾರಗಳು ನಮ್ಮ ಅರಿವಿನ ಬೆಳಕಾಗಬೇಕು. ಹೀಗೆ ಒಳಿತನ್ನು ಮಾಡದ ಸಂಪ್ರದಾಯದ ಬಗ್ಗೆ ಅವರಿಗೆ ನಂಬಿಕೆ ಇರಲಿಲ್ಲ. ತತ್ವಜ್ಞಾನ ಮತ್ತು ವೇದಾಂತಗಳ ಬಗ್ಗೆ ಬನ್ನಂಜೆಯವರು ತಾಳಿದ್ದ ನಿಲುವು ಅಂಥದ್ದು.

ಅಕ್ಷತೆ ಹಚ್ಚುವುದು, ಶಾಲು ತೊಟ್ಟುಕೊಳ್ಳುವುದು ಹೀಗೆ ಸಾಮಾನ್ಯವಾಗಿ ಕಾಣುವ ಸಾಂಪ್ರದಾಯಿಕ ವಿದ್ವಾಂಸರಂತೆ ಗೋವಿಂದಾಚಾರ್ಯರು ಇರಲಿಲ್ಲ. ಅವುಗಳಲ್ಲಿ ಅವರಿಗೆ ಆಸಕ್ತಿಯೂ ಇರಲಿಲ್ಲ. ಅದು ಮುಖ್ಯವಲ್ಲ ಎನ್ನುತ್ತಿದ್ದರು. ಜಾತಿ ಧರ್ಮ ಲಿಂಗ ಇತ್ಯಾದಿಗಳ ಬಗ್ಗೆ ಮುಕ್ತವಾಗಿದ್ದ ಗೋವಿಂದಾಚಾರ್ಯರು, ಮಧ್ವರ ಕೃತಿಗಳ ಮೂಲಕವೇ ಲೋಕ ನೋಡಿದವರು. ಆಚಾರ್ಯ ಮಧ್ವರ ವಿಚಾರ ವಿಶಾಲವಾದದ್ದು. ಅವರು ಜಾತಿಯಿಂದ ಹೊರಗೆ ಬಂದವರು. ಇಂದಿನ ಜಾತಿಯ ವಿಂಗಡಣೆಯನ್ನು ಮೀರಬೇಕು ಎಂದವರು. ಅದಕ್ಕಾಗಿ ವರ್ಣ ಅನ್ನುವುದನ್ನು ಸ್ವಭಾವ ಎಂದು ಹೇಳಿದ್ದರು. ಪ್ರತಿಯೊಬ್ಬನ ಸ್ವಭಾವದ ಮೂಲಕ ಆತನ ವರ್ಣ ಗುರುತಿಸಬೇಕು, ಜಾತಿ ಮೂಲಕ ನೋಡಕೂಡದು ಎಂದಿದ್ದರು. ಬನ್ನಂಜೆಯವರು ಇದನ್ನು ಅನುಸರಿಸಿದವರು. ಹಾಗಾಗಿಯೇ ಬೇರೆ ಬೇರೆ ವೃತ್ತಿಯಲ್ಲಿರುವವರು, ಬೇರೆ ಬೇರೆ ಸಮುದಾಯದವರು ಬನ್ನಂಜೆಯವರ ಜೊತೆಗೆ ವಿಶಾಲ ಜ್ಞಾನಚಕ್ಷು ಪಡೆಯಲು ಸಾಧ್ಯವಾಯಿತು.

ಇತರ ಮಾಧ್ವ ವಿದ್ವಾಂಸರಿಗಿಂತ ಭಿನ್ನವಾಗಿ ಯೋಚನೆ ಮಾಡಿದ ಗೋವಿಂದಾಚಾರ್ಯರು. ಮತೀಯ ಪ್ರವೃತ್ತಿಗಳನ್ನು ಬದಿಗೆ ಸರಿಸಿ ಅದನ್ನು ಮೀರಿ ತಾತ್ವಿಕವಾಗಿ ನಡೆದವರು. ಆದ್ದರಿಂದ ಅವರು ಮುಕ್ತವಾಗಿ ಮಾತನಾಡಲು ಅವಕಾಶವಾಯಿತು. ಆಚಾರ್ಯ ಮಧ್ವರ ಭಾವಚಿತ್ರ, ಮೂರ್ತಿಗಳಿಗೆ ಗೋಪಿ ಚಂದನ ಇಡುವುದರ ಬಗ್ಗೆ ‘ಎಲ್ಲಿದೆ ಅದಕ್ಕೆ ಆಧಾರ’ ಎಂದು ಪ್ರಶ್ನೆ ಮಾಡಿದ್ದರು. ಪ್ರತಿಯೊಂದು ವಿಚಾರದಲ್ಲೂ ಮಧ್ವಾಚಾರ್ಯರ ಕೃತಿಗಳಲ್ಲಿ ಏನಿದೆಯೋ ಅದನ್ನು ಮಾತ್ರ ಆಧಾರ ಎಂದು ಪರಿಗಣಿಸಿದ್ದರು.

ಇದನ್ನೂ ಓದಿ: ವಿದ್ಯಾವಾಚಸ್ಪತಿ, ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ ವಿಧಿವಶ

ಆವೆಮಣ್ಣಿನ ಆಟದ ಬಂಡಿ ಪುಸ್ತಕದ ಮುಖಪುಟ

ಬನ್ನಂಜೆಯವರು, ಸಂಪ್ರದಾಯ ಮತ್ತು ಆಧುನಿಕತೆ ಎರಡನ್ನೂ ಕೂಡ ಬೇರೆಬೇರೆ ಎಂದು ತಿಳಿಯದೆ ಸಮನ್ವಯೀಕರಿಸಿ ನೋಡಿದರು. ಬಹುಶಃ ಆ ಕಾರಣದಿಂದಲೇ ಎಲ್ಲರಿಗೂ ಅವರ ಹತ್ತಿರ ಹೋಗಲು ಸಾಧ್ಯವಾಯಿತು. ಸಾಮಾನ್ಯವಾಗಿ ಮಾಧ್ವ ಸಂಪ್ರದಾಯದ ಇತರ ವಿದ್ವಾಂಸರ ಬಳಿ ಅಷ್ಟು ಮುಕ್ತ ಸಂವಾದದ ಅವಕಾಶ ಸಿಗುವುದಿಲ್ಲ. ಅವೆಲ್ಲವನ್ನೂ ಮೀರಿದ ಬನ್ನಂಜೆಯವರು, ವೈಚಾರಿಕವಾಗಿ ಯೋಚನೆ ಮಾಡುತ್ತಿದ್ದರು. ಮಠಗಳ ಸಂಪ್ರದಾಯವನ್ನೂ ಪ್ರಶ್ನೆ ಮಾಡಬಲ್ಲವರಾಗಿದ್ದರು. ಅಂತಹ ವಿದ್ವಾಂಸರು ಸಿಗುವುದು ಬಹಳ ಕಷ್ಟ. ಸಾಧಾರವಾಗಿ ಇದ್ದದ್ದನ್ನು ಒಪ್ಪುತ್ತಿದ್ದ ಗೋವಿಂದಾಚಾರ್ಯರು, ಸಂಶೋಧನಾತ್ಮಕವಾಗಿ ಯೋಚನೆ ಮಾಡುತ್ತಿದ್ದರು. ಅವರಿಗೆ ತಪ್ಪು ಅನಿಸಿದ್ದನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಕನ್ನಡ ಸಾಹಿತ್ಯಕ್ಕೂ ಹಲವು ಕೃತಿಗಳನ್ನು ನೀಡಿದವರು ಗೋವಿಂದಾಚಾರ್ಯರು. ಅವರ ಅನುವಾದಗಳು ಹಿಂದಿನವರು ಮಾಡಿದ ಅನುವಾದಗಳಿಗಿಂತ ಭಿನ್ನವಾದಂಥವು. ಅವರು, ಕನ್ನಡವನ್ನು ಕನ್ನಡವಾಗಿಯೇ ನೋಡಿದ ಪರಿ ಅಂಥದ್ದು. ಹಾಗಾಗಿಯೇ ಮೃಚ್ಛಕಟಿಕಕ್ಕೆ ‘ಆವೆಮಣ್ಣಿನ ಆಟದ ಬಂಡಿ’ ಎಂದು ಹೆಸರಿಡಲು ಸಾಧ್ಯವಾಯಿತು.

ಶಾಸ್ತ್ರ ಗ್ರಂಥಗಳನ್ನು ಅನುವಾದ ಮಾಡಿದರು. ಅನುವಾದವೂ ಕೂಡ ಶಕ್ತಿ ಎಂಬುದನ್ನು ತೋರಿಸಿಕೊಟ್ಟರು. ಹಲವಾರು ಕೃತಿಗಳನ್ನು ಸಂಪಾದನೆ ಮಾಡಿದರು. 20ನೇ ಶತಮಾನದ ಇಡೀ ಕರ್ನಾಟಕದ ವಿದ್ವಾಂಸರ ಸಮೂಹದಲ್ಲಿ ಇಬ್ಬರು ಬಹಳ ಮುಖ್ಯವಾದವರು. ಒಬ್ಬರು ಎಸ್.ಕೆ. ರಾಮಚಂದ್ರರಾಯರು (ಸಾಕೃ) ಮತ್ತೊಬ್ಬರು ಬನ್ನಂಜೆ ಗೋವಿಂದಾಚಾರ್ಯರು.

ವಿದ್ವತ್ತು, ವೇದಾಂತ ಮಾತ್ರವಲ್ಲ. ಛಂದಸ್ಸು, ವ್ಯಾಕರಣ, ಜೋತಿಷ್ಯ, ಸಂಗೀತ, ಚಿತ್ರಕಲೆ ಹೀಗೆ 64 ವಿದ್ಯೆಗಳಲ್ಲೂ ಪ್ರವೀಣರು ಎಂಬಂತೆ ಇದ್ದವರು ಗೋವಿಂದಾಚಾರ್ಯರು. ನಮ್ಮಲ್ಲಿ ಒಬ್ಬರು ತರ್ಕ ವಿದ್ವಾಂಸರು, ಒಬ್ಬರು ವೇದಾಂತ ಹೇಳುವವರು, ಮತ್ತೊಬ್ಬರು ಪ್ರವಚನ ಮಾಡುವವರು ಇರಬಹುದು. ಆದರೆ ಎಲ್ಲವನ್ನೂ ಮೈಗೂಡಿಸಿಕೊಂಡ ವಿದ್ವಾಂಸರು ಕಡಿಮೆ. ಕಾವ್ಯ, ವೇದ, ಉಪನಿಷತ್ತು, ಪುರಾಣ ಅಷ್ಟನ್ನೂ ಕೂಡ ಸರ್ವತಂತ್ರ ಸ್ವತಂತ್ರರಾಗಿ ಸಮನ್ವಯ ಮಾಡಬಲ್ಲ ವಿದ್ವಾಂಸರಾಗಿದ್ದವರು ಬನ್ನಂಜೆಯವರು.

ನಿರೂಪಣೆ: ಗಣಪತಿ ದಿವಾಣ

ಸೃಷ್ಟಿಶೀಲ, ಸೃಜನಶೀಲ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ: ಲಕ್ಷ್ಮೀಶ ತೋಳ್ಪಾಡಿ

ಒಡನಾಡಿಯ ನೆನಪು | ಗೀತಾ ಭಾಷ್ಯ ಮುಗಿಸಿಯೇ ‘ಹೋಗಬೇಕು’ ಅಂದುಕೊಂಡಿದ್ದರು ಬನ್ನಂಜೆ ಗೋವಿಂದಾಚಾರ್ಯ

Published On - 9:56 pm, Sun, 13 December 20

ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ