ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹೆತ್ತವರ ಸಾವು.. ಮಂಡ್ಯದಲ್ಲಿ ಮನಕಲಕುವ ಘಟನೆ

3 ದಿನ ಹಿಂದೆ ಕೊವಿಡ್‌ಗೆ ತಮ್ಮಯ್ಯಚಾರಿ ಬಲಿಯಾಗಿದ್ದರು. ಈ ಸುದ್ದಿ ಕೇಳಿ ಆಘಾತದಿಂದ ತಾಯಿ ಜಯಮ್ಮ(74) ಮೃತಪಟ್ಟಿದ್ದಾರೆ. ಪತ್ನಿ ಮೃತಪಟ್ಟ ಕೆಲವೇ ನಿಮಿಷಗಳಲ್ಲಿ ಪತಿ ಕೆಂಪಚಾರಿ (84) ಕೂಡ ಸಾವನ್ನಪ್ಪಿದ್ದಾರೆ.

  • TV9 Web Team
  • Published On - 9:59 AM, 4 May 2021
ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹೆತ್ತವರ ಸಾವು.. ಮಂಡ್ಯದಲ್ಲಿ ಮನಕಲಕುವ ಘಟನೆ
ಜಯಮ್ಮ, ಕೆಂಪಚಾರಿ ದಂಪತಿ

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಕೊವಿಡ್ ಸೋಂಕಿಗೆ 54 ವರ್ಷದ ತಮ್ಮಯ್ಯಚಾರಿ ಬಲಿಯಾಗಿದ್ದು ಮಗನ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಆಘಾತ ತಡೆಯಲಾಗದೇ ಹೆತ್ತವರೂ ಮೃತಪಟ್ಟಿದ್ದಾರೆ.

3 ದಿನ ಹಿಂದೆ ಕೊವಿಡ್‌ಗೆ ತಮ್ಮಯ್ಯಚಾರಿ ಬಲಿಯಾಗಿದ್ದರು. ಈ ಸುದ್ದಿ ಕೇಳಿ ಆಘಾತದಿಂದ ತಾಯಿ ಜಯಮ್ಮ(74) ಮೃತಪಟ್ಟಿದ್ದಾರೆ. ಪತ್ನಿ ಮೃತಪಟ್ಟ ಕೆಲವೇ ನಿಮಿಷಗಳಲ್ಲಿ ಪತಿ ಕೆಂಪಚಾರಿ (84) ಕೂಡ ಸಾವನ್ನಪ್ಪಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ತಮ್ಮಯ್ಯಚಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೂರು ದಿನಗಳ ಹಿಂದೆಯೇ ತಮ್ಮಯ್ಯಚಾರಿ ಮೃತಪಟ್ಟಿದ್ದರು. ಈ ವಿಷಯವನ್ನು ಹೆತ್ತವರಿಂದ ಕುಟುಂಬಸ್ಥರು ಬಚ್ಚಿಟ್ಟಿದ್ದರು. ಇನ್ನು ಕೆಮ್ಮು ಜ್ವರದಿಂದ ಬಳಲುತ್ತಿದ್ದ ಕೆಂಪಚಾರಿಯನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಗ ಸತ್ತು ಮೂರು ದಿನದ ಬಳಿಕ ಅಂದ್ರೆ ನಿನ್ನೆ ಮಗನ ಸಾವಿನ ವಿಚಾರ ಆತನ ತಂದೆ ತಾಯಿಗೆ ಸಂಬಂಧಿಕರು ತಿಳಿಸಿದ್ದಾರೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತದಿಂದ ತಾಯಿ ಜಯಮ್ಮ ಬಳಿಕ ತಂದೆ ಕೆಂಪಚಾರಿ ಮೃತಪಟ್ಟಿದ್ದಾರೆ. ಮಹಾಮಾರಿ ಕೊರೊನಾ ತನ್ನ ಪ್ರಭಾವದಿಂದ ಮೂವರನ್ನು ಬಲಿ ಪಡೆದಿದೆ.

ಇದನ್ನೂ ಓದಿ: ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಯಡವಟ್ಟು; ಮಾಯಪ್ಪನ ಶವವನ್ನು ಪಾಯಪ್ಪನ ಕುಂಟುಂಬಸ್ಥರಿಗೆ ಹಸ್ತಾಂತರ