ಮಂಡ್ಯ: 15 ದಿನದ ಅಂತರದಲ್ಲಿ ತಂದೆ, ತಾಯಿ ಕೊರೊನಾಗೆ ಬಲಿ; ತಬ್ಬಲಿಯಾದ 5 ದಿನದ ಮಗು

ನಂಜುಂಡೇಗೌಡ (45) ಮತ್ತು ಮಮತಾ (31) ಮೃತ ದಂಪತಿ. ನಂಜುಂಡೇಗೌಡ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಏಪ್ರಿಲ್ನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ನಂಜುಂಡೇಗೌಡ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ತುಂಬು ಗರ್ಭಿಣಿಯಾಗಿದ್ದ ನಂಜುಂಡೇಗೌಡ ಪತ್ನಿ ಮಮತಗೂ ಸೋಂಕು ದೃಢಪಟ್ಟಿತ್ತು.

ಮಂಡ್ಯ: 15 ದಿನದ ಅಂತರದಲ್ಲಿ ತಂದೆ, ತಾಯಿ ಕೊರೊನಾಗೆ ಬಲಿ; ತಬ್ಬಲಿಯಾದ 5 ದಿನದ ಮಗು
ಸಾಂದರ್ಭಿಕ ಚಿತ್ರ

ಮಂಡ್ಯ: ಕೊರೊನಾ ಸೋಂಕು ತಂದೆ, ತಾಯಿ ಇಬ್ಬರನ್ನು ಕಿತ್ತುಕೊಂಡು 5 ದಿನದ ಮಗುವನ್ನು ಅನಾಥಮಾಡಿದೆ. ಕಣ್ಣು ಬಿಡುವ ಮುನ್ನವೇ ಮಗು 15 ದಿನದ ಅಂತರದಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡು ಅನಾಥವಾಗಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ನಡೆದಿದೆ. ಏಪ್ರಿಲ್ 30ರಂದು ತಂದೆ ನಂಜೇಗೌಡ ಕೊವಿಡ್ಗೆ ಬಲಿಯಾಗಿದ್ದರು. ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಇಂದು (ಮೇ 15) ತಾಯಿ ಸಾವನ್ನಪ್ಪಿದ್ದಾರೆ.

ನಂಜುಂಡೇಗೌಡ (45) ಮತ್ತು ಮಮತಾ (31) ಮೃತ ದಂಪತಿ. ನಂಜುಂಡೇಗೌಡ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಏಪ್ರಿಲ್ನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ನಂಜುಂಡೇಗೌಡ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ತುಂಬು ಗರ್ಭಿಣಿಯಾಗಿದ್ದ ನಂಜುಂಡೇಗೌಡ ಪತ್ನಿ ಮಮತಗೂ ಸೋಂಕು ದೃಢಪಟ್ಟಿತ್ತು. ವೈದ್ಯರ ಸಲಹೆ ಮೇರೆಗೆ ಹೋಂ ಐಶೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ಸಮಸ್ಯೆ ಎದುರಾದಾಗ ಮಿಮ್ಸ್ಗೆ ದಾಖಲಾಗಿದ್ದರು.

ಏಪ್ರಿಲ್ 30 ರಂದು ಚಿಕಿತ್ಸೆ ಫಲಕಾರಿಯಾಗದೆ ನಂಜುಂಡೇಗೌಡ ಮೃತಪಟ್ಟರು. ಮೇ 11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಮತಾ ಕೂಡಾ ಚಿಕಿತ್ಸೆ ಫಲಿಸದೇ ನಿನ್ನೆ ( ಮೇ 14) ಸಂಜೆ ಸಾವನ್ನಪ್ಪಿದ್ದಾರೆ. ಮದುವೆಯಾದ 9 ವರ್ಷದ ನಂತರ ಮಗು ಜನಿಸಿದ್ದು, ಸಂತೋಷದ ಘಳಿಗೆಯಲ್ಲಿ ಕೊರೊನಾ ತಂದೆ, ತಾಯಿ ಪ್ರೀತಿಯಿಂದ ಮಗುವನ್ನು ವಂಚಿತವಾಗಿಸಿದೆ. ಮೃತ ದಂಪತಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಇದನ್ನೂ ಓದಿ

ರವಿ ಡಿ. ಚೆನ್ನಣ್ಣನವರ್ ಫೊಟೋ ಹಾಕಿಕೊಂಡು ಓಡಾಡಿದ ವಾಹನ ಚಾಲಕನಿಗೆ 500 ರೂಪಾಯಿ ದಂಡ

ಕೊವಿನ್​ಗೆ ಪರ್ಯಾಯವಾಗಿ ಕರ್ನಾಟಕ ಸರ್ಕಾರದಿಂದ ಹೊಸ ಪೋರ್ಟಲ್; ಇನ್ನುಮುಂದೆ ಬೇಕೆಂದಲ್ಲಿ ಲಸಿಕೆ ಕಾಯ್ದಿರಿಸುವಂತಿಲ್ಲ

(Father and mother died due to corona 15 days apart at Mandya)