ಕೊವಿಡ್ ಸೋಂಕಿತರ ಮನೋಲ್ಲಾಸಕ್ಕೆ ಹಾಡಿ, ನೃತ್ಯ ಮಾಡಿ ರಂಜಿಸಿದ ಮಳವಳ್ಳಿ ಶಾಸಕ ಅನ್ನದಾನಿ

ಕೆಲ ಸೋಂಕಿತರು ಜಿಲ್ಲೆಯ ಮಳವಳ್ಳಿ ಪಟ್ಡಣದ ಕೆಎಸ್ಆರ್​ಟಿಸಿ ತರಬೇತಿ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರಿಗೆ ಮನರಂಜನೆ ನೀಡುವುದಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು, ಜೆಡಿಎಸ್ ಶಾಸಕ ಅನ್ನದಾನಿ ಹಾಡು, ನೃತ್ಯ ಮಾಡಿ ರಂಜಿಸಿದ್ದಾರೆ.

ಕೊವಿಡ್ ಸೋಂಕಿತರ ಮನೋಲ್ಲಾಸಕ್ಕೆ ಹಾಡಿ, ನೃತ್ಯ ಮಾಡಿ ರಂಜಿಸಿದ ಮಳವಳ್ಳಿ ಶಾಸಕ ಅನ್ನದಾನಿ
ನೃತ್ಯ ಮಾಡಿ ರಂಜಿಸಿದ ಶಾಸಕ ಅನ್ನದಾನಿ

ಮಂಡ್ಯ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್​ಡೌನ್​ ಕೂಡ ವಿಧಿಸಿದೆ. ಈಗಾಗಲೇ ಜನರ ಮನಸಲ್ಲಿ ಕೊರೊನಾ ಬಗ್ಗೆ ಭಯ ಹುಟ್ಟಿಕೊಂಡಿದೆ. ಕೊರೊನಾ ಸೋಂಕು ತಗುಲಿದೆ ಎಂದು ತಿಳಿದಾಗ ಹೆಚ್ಚು ಸೋಂಕಿತರು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾರೆ. ಮುಂದಿನ ಜೀವನ ಹೇಗೆ ಎನ್ನುವ ಆತಂಕ ಎದುರಾಗುತ್ತದೆ. ಈ ಭೀತಿಯಿಂದ ಹಲವು ಸೋಂಕಿತರು ದೈಹಿಕ, ಮಾನಸಿಕವಾಗಿ ಕುಗ್ಗುತ್ತ ಹೋಗುತ್ತಾರೆ. ಹೀಗಾಗಿ ಸೋಂಕಿತರಿಗೆ ಈ ಸಮಯದಲ್ಲಿ ಧೈರ್ಯ ಹೇಳುವುದು ಅನಿವಾರ್ಯವಾಗಿದೆ. ಅದರಂತೆ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಶಾಸಕ ಅನ್ನದಾನಿ ಅವರು ಸೋಂಕಿತರ ಜೊತೆ ನೃತ್ಯ ಮಾಡಿ ರಂಜಿಸುವ ಮೂಲಕ ಸೋಂಕಿತರಿಗೆ ಮನರಂಜನೆ ನೀಡಿದ್ದಾರೆ.

ಕೆಲ ಸೋಂಕಿತರು ಜಿಲ್ಲೆಯ ಮಳವಳ್ಳಿ ಪಟ್ಡಣದ ಕೆಎಸ್ಆರ್​ಟಿಸಿ ತರಬೇತಿ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರಿಗೆ ಮನರಂಜನೆ ನೀಡುವುದಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು, ಜೆಡಿಎಸ್ ಶಾಸಕ ಅನ್ನದಾನಿ ಹಾಡು, ನೃತ್ಯ ಮಾಡಿ ರಂಜಿಸಿದ್ದಾರೆ. ಶಾಸಕ ಅನ್ನದಾನಿ ಕಾರ್ಯಕ್ರಮದಲ್ಲಿ ಜಾನಪದ ಗೀತೆ ಹಾಡಿ ನೃತ್ಯ ಮಾಡಿದ್ದಾರೆ. ಶಾಸಕರ ಜೊತೆ ಸೋಂಕಿತರು ಹೆಜ್ಜೆ ಹಾಕಿ ಸಂತೋಷದ ಘಳಿಗೆಯನ್ನು ಸವಿದಿದ್ದಾರೆ.

ಕೊವಿಡ್ ಸೋಂಕಿತರಿಗೆ ಯೋಗ, ಪ್ರಾಣಾಯಾಮ
ಬಾಗಲಕೋಟೆ: ಕೊರೊನಾ ಸೋಂಕಿತರಿಗೆ ಯೋಗ, ಪ್ರಾಣಾಯಾಮದ ಅಗತ್ಯವಿದೆ. ಹೀಗಾಗಿ ಜಿಲ್ಲೆಯ ಹುನಗುಂದ ಸರಕಾರಿ ಬಾಲಕರ ವಸತಿ ನಿಲಯದಲ್ಲಿ ಸ್ಥಾಪಿಸಲಾದ ಕೊವಿಡ್ ಕೇರ್ ಸೆಂಟರ್​ನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆಯ ಜೊತೆಗೆ ಯೋಗ ಮತ್ತು ಪ್ರಾಣಾಯಾಮವನ್ನು ಹೇಳಿಕೊಡಲಾಗುತ್ತಿದೆ. ಸೋಂಕಿತರನ್ನು ಬೇಗ ಗುಣಮುಖರನ್ನಾಗಿ ಮಾಡುತ್ತಿರುವ ಕಮ್ಯುನಿಟಿ ಹೇಲ್ತ್ ಅಧಿಕಾರಿಗಳು ದೇಹದಲ್ಲಿರುವ ಆಕ್ಸಿಜನ್ ಪ್ರಮಾಣ ಹೆಚ್ಚಿಸುವ ಆಸನಗಳನ್ನು ಅಭ್ಯಾಸ ಮಾಡಿಸುತ್ತಿದ್ದಾರೆ.

Yoga

ಸೋಂಕಿತರಿಗೆ ಯೋಗ ಹೇಳಿಕೊಡಲಾಗುತ್ತಿದೆ

ಕೊವಿಡ್​ ಕೇರ್​ ಸೆಂಟರ್​ನಲ್ಲಿ ಸಂಗೀತ ಕಾರ್ಯಕ್ರಮ
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿರುವ ಕೊವಿಡ್ ಕೇರ್ ಸೆಂಟರ್​ನಲ್ಲಿ ಬಸವ ಜಯಂತಿ ಅಂಗವಾಗಿ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸೋಂಕಿತ ರವಿಶಂಕರ್ ಕೀಬೋರ್ಡ್ ನುಡಿಸಿ ರಂಜಿಸಿದರು. ಸೋಂಕಿತರು ಗೊಂಬೆ ಹೇಳುತೈತೆ ಹಾಡಿಗೆ ದನಿಗೂಡಿಸಿದರು. ರವಿಶಂಕರ್ ಸಂಗೀತಕ್ಕೆ ನರ್ಸ್​ಗಳು ಚಪ್ಪಾಳೆ ತಟ್ಟಿದರು.

ಇದನ್ನೂ ಓದಿ

ಕರ್ನಾಟಕದ ಹಳ್ಳಿಗರ ಅಭಿಮಾನಕ್ಕೆ ಸನ್ನಿ ಲಿಯೋನ್​ ಫಿದಾ; ಅನಾಥ ಮಕ್ಕಳ ತಾಯಿ ಎಂದ ಫ್ಯಾನ್ಸ್​

ಅನವಶ್ಯಕವಾಗಿ ಲಾಠಿಚಾರ್ಜ್ ಆರೋಪ ಪೊಲೀಸರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಸಾರ್ವಜನಿಕರು…

(Malavalli MLA Annadani danced to entertain the covid infected at mandya)