ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಬಳಿ ನಿಗೂಢ ಶಬ್ದ ಕೇಳಿ ಬರುತ್ತಿದ್ದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಕೊಪ್ಪ ಗ್ರಾಮದ ಪಟ್ಟಲದಮ್ಮ ದೇವಾಲಯದ ಗೋಪುರದಿಂದ ಕಳೆದ 8-10 ದಿನಗಳಿಂದ ವಿಚಿತ್ರವಾದ ಶಬ್ದ ಕೇಳಿ ಬರುತ್ತಿದ್ದು, ಈ ಶಬ್ದ ಎಲ್ಲಿಂದ ಬರುತ್ತಿದೆ ಎಂಬ ಕುತೂಹಲದಿಂದ ಗ್ರಾಮಸ್ಥರು ದೇವಾಲಯದ ಮೇಲೆ ಹತ್ತಿ ಪರಿಶೀಲನೆ ನಡೆಸಿದ್ದಾರೆ.
ಕೊಪ್ಪ ಗ್ರಾಮದ ಪಟ್ಟಲದಮ್ಮ ದೇವಾಲಯದ ಗೋಪುರ
ಗೋಪುರದಲ್ಲಿರುವ ದೇವರ ಗೊಂಬೆಗಳ ಬಳಿಯಿಂದ ಶಬ್ದ ಕೇಳಿ ಬರುತ್ತಿದೆ. ಆದರೆ ಈ ವಿಚಿತ್ರ ಶಬ್ದದ ಮೂಲ ತಿಳಿಯಲಾಗದೆ ಗ್ರಾಮಸ್ಥರು ಗಾಬರಿಯಾಗಿದ್ದಾರೆ. ಇನ್ನೂ ಕಳೆದ 11 ವರ್ಷಗಳಿಂದ ಜಾಗದ ವಿವಾದದಿಂದ ದೇವಾಲಯ ಕಾಮಗಾರಿ ನಡೆಯದೆ ಹಬ್ಬ ನಿಂತಿದ್ದು, ದೇವಿ ಮುನಿಸಿಕೊಂಡಿದ್ದಾಳೆ. ಹಾಗಾಗಿಯೇ ದೇವಿ ಹೀಗೇ ವಿಚಿತ್ರ ಶಬ್ದ ಮಾಡುತ್ತ ಸೂಚನೆ ಕೊಡುತ್ತಿದ್ದಾಳೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.
ದೇವಾಲಯದ ಹೊರಗೆ ಕುತೂಹಲದಿಂದ ಗ್ರಾಮಸ್ಥರು ಶಬ್ದವನ್ನು ಆಲಿಸುತ್ತಿರುವ ದೃಶ್ಯ
ಆಸ್ತಿ ವಿವಾದ, 6 ತಿಂಗಳಿಂದ ದೇಗುಲಕ್ಕೆ ಬೀಗ: ತೆರವಿಗೆ ಮುಂದಾದ ಜಿಲ್ಲಾಡಳಿತ, ಆದರೆ..?