ಕಳ್ಳತನಕ್ಕೆ ಬಂದು ಸಿಕ್ಕಿ ಬಿದ್ದ ಖದೀಮರಿಗೆ ಧರ್ಮದೇಟು.. ಸ್ವಯಂ ಚಾಕು ಇರಿದುಕೊಂಡು ಅಸ್ವಸ್ಥನಾದ ಕಳ್ಳ

ಹಾಡ ಹಗಲೇ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಸಲೀಂ ಉಲ್ಲಾ ಖಾನ್, ಜಬಿ ಉಲ್ಲಾ ಎಂಬ ಇಬ್ಬರು ಕಳ್ಳರು ರಾಮಲಿಂಗಯ್ಯ ಎಂಬುವವರ ಮನೆ ಬಾಗಿಲಿನ ಬೀಗ ಹೊಡೆದು ಮನೆಗೆ ನುಗ್ಗಿದ್ದಾರೆ. ಬಳಿಕ ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮನೆ ಮಾಲೀಕ ರಾಮಲಿಂಗಯ್ಯ ಜಮೀನಿನಿಂದ ವಾಪಸ್ ಬಂದಿದ್ದಾನೆ.

  • TV9 Web Team
  • Published On - 7:59 AM, 3 Mar 2021
ಕಳ್ಳತನಕ್ಕೆ ಬಂದು ಸಿಕ್ಕಿ ಬಿದ್ದ ಖದೀಮರಿಗೆ ಧರ್ಮದೇಟು.. ಸ್ವಯಂ ಚಾಕು ಇರಿದುಕೊಂಡು ಅಸ್ವಸ್ಥನಾದ ಕಳ್ಳ
ಕಳ್ಳನಿಗೆ ಸಾರ್ವಜನಿಕರಿಂದ ಧರ್ಮದೇಟು

ಮಂಡ್ಯ: ಕಳ್ಳತನಕ್ಕೆ ಯತ್ನಿಸಿದ್ದವರಿಗೆ ಹಿಗ್ಗಾಮುಗ್ಗ ಬಾರಿಸಿ ಬೆಂಡೆತ್ತಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಅಂಕನಾಥಪುರ ಗ್ರಾಮದಲ್ಲಿ ನಡೆದಿದೆ. ತುಮಕೂರು ಮೂಲದ ಸಲೀಂ ಉಲ್ಲಾ ಖಾನ್, ಜಬಿ ಉಲ್ಲಾ ಸಿಕ್ಕಿಬಿದ್ದ ಕಳ್ಳರು. ಸಾರ್ವಜನಿಕರು ಸಿಕ್ಕಿ ಬಿದ್ದ ಕಳ್ಳರಿಗೆ ಧರ್ಮದೇಟು ಕೊಟ್ಟಿದ್ದು ಇಬ್ಬರು ಕಳ್ಳರ ಪೈಕಿ ಒಬ್ಬ ಕಳ್ಳ ಚಾಕು ತಿವಿದುಕೊಂಡಿದ್ದು ತೀವ್ರ ಅಸ್ವಸ್ಥನಾಗಿದ್ದಾನೆ.

ಹಾಡ ಹಗಲೇ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಸಲೀಂ ಉಲ್ಲಾ ಖಾನ್, ಜಬಿ ಉಲ್ಲಾ ಎಂಬ ಇಬ್ಬರು ಕಳ್ಳರು ರಾಮಲಿಂಗಯ್ಯ ಎಂಬುವವರ ಮನೆ ಬಾಗಿಲಿನ ಬೀಗ ಹೊಡೆದು ಮನೆಗೆ ನುಗ್ಗಿದ್ದಾರೆ. ಬಳಿಕ ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮನೆ ಮಾಲೀಕ ರಾಮಲಿಂಗಯ್ಯ ಜಮೀನಿನಿಂದ ವಾಪಸ್ ಬಂದಿದ್ದಾನೆ. ಕಳ್ಳರು ಮನೆಗೆ ನುಗ್ಗಿರೋದನ್ನು ನೋಡಿ ಕೂಗಿಕೊಂಡಿದ್ದಾನೆ. ತಕ್ಷಣ ಸುತ್ತುವರಿದ ಗ್ರಾಮಸ್ಥರು ಇಬ್ಬರನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಈ ವೇಳೆ ಸಲೀಂ ಉಲ್ಲಾ ಖಾನ್ ಸ್ವಯಂ ಚಾಕು ಇರಿದುಕೊಂಡು ತೀವ್ರ ಅಸ್ವಸ್ಥನಾಗಿದ್ದಾನೆ.

ಸಾರ್ವಜನಿಕರಿಂದ ಧರ್ಮದೇಟು ತಿಂದ ಮತ್ತೋರ್ವ ಖದೀಮ ಜಬಿ ಉಲ್ಲಾಗೂ ತೀವ್ರ ಗಾಯಗಳಾಗಿವೆ. ಸದ್ಯ ಕಳ್ಳರಿಬ್ಬರನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mandya Thief

ಜಬಿ ಉಲ್ಲಾ

ಇದನ್ನೂ ಓದಿ: ಸದಾಶಿವನಗರ: ಹಣ ಕಸಿದು ಪರಾರಿಯಾಗುತ್ತಿದ್ದ ಕಳ್ಳರಿಗೆ ಸ್ಥಳೀಯರಿಂದ ಸಿಕ್ತು ಬಿಸಿ ಬಿಸಿ ಕಜ್ಜಾಯ