ಧನುರ್ಮಾಸದಲ್ಲಿ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ: ಪರಾಕಾಷ್ಠೆ ಮೆರೆದ ಭಕ್ತರು

ಧನುರ್ಮಾಸದಲ್ಲಿ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ: ಪರಾಕಾಷ್ಠೆ ಮೆರೆದ ಭಕ್ತರು

ಕೋಲಾರ: ಆಕೆ ಆ ಊರಿನ ಅಧಿದೇವತೆ. ನಮ್ಮೂರಿಗೆ ಕೆಡುಕಾಗದಿರಲೆಂದು ಪ್ರತಿವರ್ಷ ಆಕೆಗೆ ಊರಿಗೆ ಊರೇ ಒಂದಾಗಿ ಪೂಜೆ ಸಲ್ಲಿಸ್ತಾರೆ. ಅದ್ರಲ್ಲೂ ಧನುರ್ಮಾಸದಲ್ಲಿ ನಡೆದ ದೇವತೆಗಳ ಜಾತ್ರಾ ಮಹೋತ್ಸವ ಭಕ್ತಿಯ ಜೊತೆ ಸಂತಸದ ಕ್ಷಣಕ್ಕೆ ಸಾಕ್ಷಿಯಾಯ್ತು. ಅಧಿದೇವತೆಗೆ ಅದ್ಧೂರಿ ಅಲಂಕಾರ, ಕಾಯೋ ಕರುಣಾಮಯಿಗೆ ಪೂಜೆ ಪುನಸ್ಕಾರ. ರಾಜಬೀದಿಗಳಲ್ಲಿ ಊರ ದೇವಿಗೆ ಜೈಂಕಾರ. ಮಾರಮ್ಮನ ಮೇಲೆ ಭಕ್ತಿಯ ಮಮಕಾರ. ಊರಿನ ಮೂಲೆ ಮೂಲೆಯಲ್ಲೂ ಸಂಭ್ರಮವೋ, ಸಂಭ್ರಮ. ಇಂತಹ ಭಕ್ತಿಭಾವದ ಸಂಗಮಕ್ಕೆ ಅಣಿಯಾಗಿದ್ದು ಮಾಲೂರಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ. ಊರಿಗೆ ಕೆಡುಕಾಗದಿರಲಿ, […]

sadhu srinath

|

Dec 23, 2019 | 7:06 PM

ಕೋಲಾರ: ಆಕೆ ಆ ಊರಿನ ಅಧಿದೇವತೆ. ನಮ್ಮೂರಿಗೆ ಕೆಡುಕಾಗದಿರಲೆಂದು ಪ್ರತಿವರ್ಷ ಆಕೆಗೆ ಊರಿಗೆ ಊರೇ ಒಂದಾಗಿ ಪೂಜೆ ಸಲ್ಲಿಸ್ತಾರೆ. ಅದ್ರಲ್ಲೂ ಧನುರ್ಮಾಸದಲ್ಲಿ ನಡೆದ ದೇವತೆಗಳ ಜಾತ್ರಾ ಮಹೋತ್ಸವ ಭಕ್ತಿಯ ಜೊತೆ ಸಂತಸದ ಕ್ಷಣಕ್ಕೆ ಸಾಕ್ಷಿಯಾಯ್ತು. ಅಧಿದೇವತೆಗೆ ಅದ್ಧೂರಿ ಅಲಂಕಾರ, ಕಾಯೋ ಕರುಣಾಮಯಿಗೆ ಪೂಜೆ ಪುನಸ್ಕಾರ. ರಾಜಬೀದಿಗಳಲ್ಲಿ ಊರ ದೇವಿಗೆ ಜೈಂಕಾರ. ಮಾರಮ್ಮನ ಮೇಲೆ ಭಕ್ತಿಯ ಮಮಕಾರ. ಊರಿನ ಮೂಲೆ ಮೂಲೆಯಲ್ಲೂ ಸಂಭ್ರಮವೋ, ಸಂಭ್ರಮ.

ಇಂತಹ ಭಕ್ತಿಭಾವದ ಸಂಗಮಕ್ಕೆ ಅಣಿಯಾಗಿದ್ದು ಮಾಲೂರಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ. ಊರಿಗೆ ಕೆಡುಕಾಗದಿರಲಿ, ಉತ್ತಮ ಮಳೆ-ಬೆಳೆ ಜೊತೆಗೆ ಎಲ್ಲರಿಗೂ ಒಳ್ಳೇ ಆರೋಗ್ಯ ದಯಪಾಲಿಸು ತಾಯಿ ಅಂತಾ ಮಾರಮ್ಮನ ಜಾತ್ರೆ ಮಾಡಲಾಗುತ್ತೆ. ಪ್ರತಿ ವರ್ಷದಂತೆ ಈ ವರ್ಷವೂ ಮಾರಮ್ಮನಿಗೆ ಮೂರು ದಿನಗಳ ಕಾಲ ನವದುರ್ಗಾ ಹೋಮ, ಲಲಿತಾ ಸಹಸ್ರನಾಮ, ಅನ್ನಪೂಣೇಶ್ವರಿ ಹೋಮಗಳನ್ನ ಮಾಡಲಾಯ್ತು.

ಈ ವೇಳೆ ಪೂರ್ಣಾಹುತಿಯಲ್ಲಿ ಅನ್ನಪೂರ್ಣೇಶ್ವರಿ ದೇವಾಲಯದ ಮುಖ್ಯಸ್ಥರಾದ ಭೀಮಸೇನಾ ಜೋಷಿ ಹಾಗೂ ಸಂಸದ ಮುನಿಸ್ವಾಮಿ ದಂಪತಿ ಭಾಗವಹಿಸಿದ್ರು. ಬಳಿಕ ಲೋಕಕಲ್ಯಾಣವಾಗಲೆಂದು ಮಾರಮ್ಮನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು. ಇದಕ್ಕೂ ಮುನ್ನ ನಡೆದ ಕಳಶ ಹೊತ್ತ ಸುಮಂಗಲಿಯರ ಮೆರವಣಿಗೆ ಎಲ್ಲರ ಕಣ್ಮನಸೆಳೀತು. ಇಡೀ ಊರಿಗೆ ಊರಿಗೆ ಭಕ್ತಿಯ ಜೊತೆಗೆ ಸಂಭ್ರಮದಲ್ಲಿ ಮಿಂದೇಳಿತು.

ದಲಿತ ವ್ಯಕ್ತಿ ಸವರ್ಣಿಯರ ಮೇಲೆ ನಡೆದುಕೊಂಡು ಹೋಗೋದೇ ವಿಶೇಷ: ಬಳ್ಳಾರಿ: ಹರಪನಹಳ್ಳಿ ತಾಲೂಕಿನ ಅರಸೀಕೆರೆಯಲ್ಲೂ ದಂಡಿ ದುರ್ಗಮ್ಮನ ಜಾತ್ರೆ ನಡೀತು. ದಲಿತ ವ್ಯಕ್ತಿ ಸವರ್ಣಿಯರ ಮೇಲೆ ನಡೆದುಕೊಂಡು ಹೋಗೋದೇ ಈ ಜಾತ್ರೆಯ ವಿಶೇಷವಾಗಿದೆ. ದಲಿತರ ಮೇಲೆ ದೇವರು ಬರ್ತಾರೆ. ಅವ್ರನ್ನ ಸ್ಪರ್ಶಿಸಿದ್ರೆ ಒಳ್ಳೇದಾಗುತ್ತೆ, ಪಾಪ ಕಳೆಯುತ್ತೆ ಅನ್ನೋ ನಂಬಿಕೆಯಿದೆ. ಹೀಗಾಗಿ 2 ಕಿ.ಮೀ ದೂರ ಭಕ್ತರು ಮಲಗಿದ್ರೆ, ಅವ್ರ ಬೆನ್ನ ಮೇಲೆ ಕಾಲಿಟ್ಟು ದಲಿತ ವ್ಯಕ್ತಿ ನಡೆದುಕೊಂಡು ಹೋದ್ರು. ಹೀಗೆ ಹರಕೆ ತೀರಿಸಿದ್ರೆ ಸಂಕಷ್ಟ ನಿವಾರಣೆಯಾಗುತ್ತೆ ಅನ್ನೋದು ಭಕ್ತರ ನಂಬಿಕೆಯಾಗಿದೆ. ಇದ್ರ ಜೊತೆಗೆ ಕಳೆದ 5 ವರ್ಷಗಳಿಂದ ಪ್ರಾಣಿಬಲಿ ಇಲ್ಲದೆ ಜಾತ್ರೆ ಮಾಡ್ತಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಒಟ್ನಲ್ಲಿ ಧನುರ್ಮಾಸದಲ್ಲಿ ನಡೆದ ಮಾರಮ್ಮ ಹಾಗೂ ದುರ್ಗಮ್ಮನ ಜಾತ್ರೆಯಲ್ಲಿ ಭಕ್ತರು ಹರಕೆ ತೀರಿಸಿ ಖುಷಿಪಟ್ರು. ಮುಂದಿನ ವರ್ಷದಲ್ಲೂ ಸುಖ, ಸಮೃದ್ಧಿ ಹಾಗೂ ಸೌಭಾಗ್ಯ ಒದಗಿಸು ತಾಯಿ ಅಂತಾ ಪ್ರಾರ್ಥನೆ ಸಲ್ಲಿಸಿ, ಭಕ್ತಿಯ ಪರಾಕಾಷ್ಠೆ ಮೆರೆದ್ರು.

Follow us on

Related Stories

Most Read Stories

Click on your DTH Provider to Add TV9 Kannada