AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಕೆದಾಟು ಯೋಜನೆ: ತಮಿಳುನಾಡು ನಿರ್ಣಯದ ವಿರುದ್ಧ ಪರಿಷತ್​ನಲ್ಲೂ ಒಮ್ಮತದಿಂದ ಖಂಡನಾ ನಿರ್ಣಯ ಅಂಗೀಕಾರ

ಕಾವೇರಿ ನದಿ ನೀರು ಹಂಚಿಕೆಯ ವಿವಾದವೂ ಸ್ವಾತಂತ್ರ್ಯ ಪೂರ್ವದಲ್ಲಿ ಉದ್ಭವವಾದಾಗ, ಎರಡು ರಾಜ್ಯಗಳು ಮಾತುಕತೆ ನಡೆಸಿ ನೀರು ಹಂಚಿಕೆ ಬಗ್ಗೆ ಎರಡು ಒಪ್ಪಂದ ಮಾಡಿಕೊಂಡಿವೆ.

ಮೇಕೆದಾಟು ಯೋಜನೆ: ತಮಿಳುನಾಡು ನಿರ್ಣಯದ ವಿರುದ್ಧ ಪರಿಷತ್​ನಲ್ಲೂ ಒಮ್ಮತದಿಂದ ಖಂಡನಾ ನಿರ್ಣಯ ಅಂಗೀಕಾರ
ವಿಧಾನ ಪರಿಷತ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Mar 25, 2022 | 12:52 PM

Share

ಪರಿಷತ್​ನಲ್ಲಿ ಮೇಕೆದಾಟು ಯೋಜನೆ (Mekedatu Project) ವಿರುದ್ದ ತಮಿಳುನಾಡು ಸರ್ಕಾರ ತೆಗೆದುಕೊಂಡಿದ್ದ ನಿರ್ಣಯಕ್ಕೆ ಖಂಡನಾ ನಿರ್ಣಯ ಮಂಡನೆ ಮಾಡಲಾಗಿದೆ. ಕಾನೂನು ಸಚಿವ ಮಾಧುಸ್ವಾಮಿರಿಂದ ಮಂಡನೆ ಮಾಡಲಾಗಿದ್ದು, ನಿನ್ನೆ ವಿಧಾನ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕಾರ ಆಗಿತ್ತು. ಸರ್ಕಾರ ಖಂಡನಾ ನಿರ್ಣಯವನ್ನ ಕಾಂಗ್ರೆಸ್ ಸ್ವಾಗತಿಸಿದೆ. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡಿತ್ತು. ಸರ್ಕಾರದ ನಿರ್ಣಯ ಸರ್ವಾನುಮತದಿಂದ ಕಾಂಗ್ರೆಸ್ ಒಪ್ಪಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಕಾವೇರಿ ನದಿ ನೀರು ಹಂಚಿಕೆಯ ವಿವಾದವೂ ಸ್ವಾತಂತ್ರ್ಯ ಪೂರ್ವದಲ್ಲಿ ಉದ್ಭವವಾದಾಗ, ಎರಡು ರಾಜ್ಯಗಳು ಮಾತುಕತೆ ನಡೆಸಿ ನೀರು ಹಂಚಿಕೆ ಬಗ್ಗೆ ಎರಡು ಒಪ್ಪಂದ ಮಾಡಿಕೊಂಡಿವೆ. 1893 ಹಾಗೂ 1924ರಲ್ಲಿ ಮೈಸೂರು ಸಂಸ್ಥಾನ ಹಾಗೂ ಮದ್ರಾಸ್ ಪ್ರೆಸಿಡೆನ್ಸಿ ನಡುವೆ ಕಾವೇರಿ ನದಿ ನೀರು ಹಂಚಿಕೆಯ ಒಪ್ಪಂದ ಏರ್ಪಟ್ಟಿವೆ.

ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ನಂತರ ಈ ಹಳೆಯ ಒಪ್ಪಂದಗಳು ರದ್ದಾಗಬೇಕಾಗಿತ್ತು. ಆದರೆ, ಈ ಒಪ್ಪಂದಗಳು ಇಂದಿಗೂ ರದ್ದಾಗಿಲ್ಲ. ಈ ಒಪ್ಪಂದಗಳೇ ಈಗ ತಮಿಳುನಾಡಿಗೆ ಅಸ್ತ್ರವಾಗಿವೆ. ಈ ಒಪ್ಪಂದಗಳ ಪ್ರಕಾರ, ಮೇಲ್ಭಾಗದ ರಾಜ್ಯವಾದ ಕರ್ನಾಟಕವು ತನ್ನ ನೆಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ಅಣೆಕಟ್ಟು, ಡ್ಯಾಂ ನಿರ್ಮಾಣ ಮಾಡಬೇಕಾದರೂ, ಕೆಳಭಾಗದ ರಾಜ್ಯವಾದ ತಮಿಳುನಾಡಿನ ಒಪ್ಪಿಗೆಯನ್ನು ಪಡೆಯಬೇಕು. ತಮಿಳುನಾಡಿನ ಒಪ್ಪಿಗೆ ಇಲ್ಲದೇ ಕರ್ನಾಟಕವು ಕಾವೇರಿ ನದಿಗೆ ತನ್ನ ರಾಜ್ಯದಲ್ಲಿ ಯಾವುದೇ ಡ್ಯಾಂ ನಿರ್ಮಾಣ ಮಾಡುವಂತಿಲ್ಲ. ಕಾವೇರಿ ನದಿ ನೀರಿನ ಸಹಜ ಹರಿವಿಗೆ ತಡೆಯೊಡ್ಡುವಂತಿಲ್ಲ.

2018ರ ಫೆಬ್ರವರಿ ತಿಂಗಳಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ ಕರ್ನಾಟಕಕ್ಕೆ 14.75 ಟಿಎಂಸಿ ನೀರುನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಕರ್ನಾಟಕಕ್ಕೆ ಹಂಚಿಕೆಯಾಗಿದ್ದ ನೀರಿನ ಪ್ರಮಾಣವು 270 ಟಿಎಂಸಿಯಿಂದ 284.75 ಟಿಎಂಸಿಗೆ ಏರಿಕೆಯಾಗಿದೆ. ಕಾವೇರಿ ನದಿ ನೀರು ನ್ಯಾಯಾಧಿಕರಣವು ತಮಿಳುನಾಡಿನಲ್ಲಿ ಲಭ್ಯವಿರುವ ಅಂತರ್ಜಲವನ್ನು ತನ್ನ ತೀರ್ಪು ನೀಡುವಾಗ ಪರಿಗಣಿಸಿರಲಿಲ್ಲ. ಇದನ್ನು ಕರ್ನಾಟಕದ ಪರ ವಕೀಲ ಫಾಲಿ ಎಸ್‌. ನಾರಿಮನ್ ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು. ಹೀಗಾಗಿ, ಸುಪ್ರೀಂಕೋರ್ಟ್ ತಮಿಳುನಾಡಿನ ಲಭ್ಯವಿರುವ ಅಂತರ್ಜಲವನ್ನು 10 ಟಿಎಂಸಿ ಎಂದು ಪರಿಗಣಿಸಿ, ಇದನ್ನು ತಮಿಳುನಾಡಿನ ಪಾಲಿನಲ್ಲಿ ಕಡಿತ ಮಾಡಿದೆ. ಜತೆಗೇ ಬೆಂಗಳೂರು ನಗರದ ಕುಡಿಯುವ ನೀರಿನ ಉದ್ದೇಶಕ್ಕಾಗಿ 4.75 ಟಿಎಂಸಿ ನೀರುನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಿದೆ. ಇದರಿಂದಾಗಿ ಕರ್ನಾಟಕಕ್ಕೆ ವಾರ್ಷಿಕ 284 ಟಿಎಂಸಿ ಕಾವೇರಿ ನೀರನ್ನು ಬಳಸಿಕೊಳ್ಳುವ ಹಕ್ಕು ಸಿಕ್ಕಿದೆ. ಈ ಮೊದಲು ಕರ್ನಾಟಕಕ್ಕೆ ವಾರ್ಷಿಕ 270 TMC ನೀರು ಬಳಕೆಗೆ ಮಾತ್ರ ಕಾವೇರಿ ನದಿ ನೀರು ನ್ಯಾಯಾಧೀಕರಣ ಅವಕಾಶ ಕೊಟ್ಟಿತ್ತು.

ಇದನ್ನೂ ಓದಿ:

ಅಲ್ಪಸಂಖ್ಯಾತರಿಗೆ ಕಡಿಮೆ ಪರಿಹಾರ, ಹತ್ಯೆಗೀಡಾದ ಹಿಂದೂಗಳ ಕುಟುಂಬಕ್ಕೆ ಹೆಚ್ಚು ಪರಿಹಾರ: ಸಿದ್ದರಾಮಯ್ಯ ಕಿಡಿ

Published On - 12:48 pm, Fri, 25 March 22