ಸಚಿವರ ಮನೆ, ಸರ್ಕಾರಿ ಕಟ್ಟಡಗಳ ವಿದ್ಯುತ್ ಬಿಲ್ ಬಾಕಿ ಇದ್ರೂ ವಸೂಲಿಗೆ ಮುಂದಾಗದ ಹೆಸ್ಕಾಂ

ಬಿ.ಶ್ರೀರಾಮುಲು ಸುಮಾರು 3 ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸದೆ 95 ಸಾವಿರಕ್ಕೂ ಹೆಚ್ಚು ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಹಾಗೂ ಕನ್ನಡ ಸಾಹಿತ್ಯ ಭವನದ 1.13 ಲಕ್ಷಕ್ಕೂ ಅಧಿಕ ಬಿಲ್ ಬಾಕಿ ಇದೆ. ಶ್ರೀರಾಮುಲು ಸೇರಿದಂತೆ ಪ್ರಭಾವಿಗಳ ಒಡೆತನದ ಆಸ್ತಿಗಳ ವಿದ್ಯುತ್ ಬಿಲ್ ಸಹ ಬಾಕಿ ಇದೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿದೆ.

  • TV9 Web Team
  • Published On - 9:08 AM, 28 Jan 2021
ಸಚಿವರ ಮನೆ, ಸರ್ಕಾರಿ ಕಟ್ಟಡಗಳ ವಿದ್ಯುತ್ ಬಿಲ್ ಬಾಕಿ ಇದ್ರೂ ವಸೂಲಿಗೆ ಮುಂದಾಗದ ಹೆಸ್ಕಾಂ
ಪ್ರಾತಿನಿಧಿಕ ಚಿತ್ರ

ಗದಗ: ರಾಜ್ಯದ ಕೆಲ ಪ್ರಭಾವಿ ಸಚಿವರು ತಮ್ಮ ಮನೆ, ಸರ್ಕಾರಿ ಕಟ್ಟಡಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಗದಗ ಜಿಲ್ಲೆಯಲ್ಲಿ ಲಕ್ಷ ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಉಳಿದಿದೆ. ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ಗದಗ ಹೊಸ ಬಸ್ ನಿಲ್ದಾಣ ಬಳಿಯ ಮನೆಯ ವಿದ್ಯುತ್ ಬಿಲ್ ಬಾಕಿ ಉಳಿದಿದೆ.

ಬಿ.ಶ್ರೀರಾಮುಲು ಸುಮಾರು 3 ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸದೆ 95 ಸಾವಿರಕ್ಕೂ ಹೆಚ್ಚು ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಹಾಗೂ ಕನ್ನಡ ಸಾಹಿತ್ಯ ಭವನದ 1.13 ಲಕ್ಷಕ್ಕೂ ಅಧಿಕ ಬಿಲ್ ಬಾಕಿ ಇದೆ. ಶ್ರೀರಾಮುಲು ಸೇರಿದಂತೆ ಪ್ರಭಾವಿಗಳ ಒಡೆತನದ ಆಸ್ತಿಗಳ ವಿದ್ಯುತ್ ಬಿಲ್ ಸಹ ಬಾಕಿ ಇದೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿದೆ.

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಪ್ರಭಾವಿಗಳ ಹೆದರಿಕೆಯೋ ಗೊತ್ತಿಲ್ಲ ಬಾಕಿ ಬಿಲ್ ವಸೂಲಿಗೆ ಹೆಸ್ಕಾಂ ಅಧಿಕಾರಿಗಳು ಮಾತ್ರ ಮುಂದಾಗುತ್ತಿಲ್ಲ. ಸಾಮಾನ್ಯ ಜನರು ಬಿಲ್ ಹಣ ಪಾವತಿಸಿಲ್ಲ ಅಂದ್ರೆ ಸಾವಿರ, ಎರಡು ಸಾವಿರ ಬಾಕಿಗೆ ವಿದ್ಯುತ್ ಕಟ್ ಮಾಡಿ‌ ಹೆಸ್ಕಾಂ ಕಿರುಕುಳ ನೀಡುತ್ತೆ. ಆದ್ರೆ ಪ್ರಭಾವಿಗಳ, ಸರ್ಕಾರಿ ಕಟ್ಟಡಗಳ ಲಕ್ಷಾಂತರ ವಿದ್ಯುತ್ ಬಿಲ್ ಪಾವತಿಯಾಗದೆ ಬಾಕಿ ಉಳಿದಿದ್ದರೂ ಯಾವ ಅಧಿಕಾರಿಯೂ ತಲೆ ಕೆಡಿಸಿಕೊಳ್ಳದಂತಹ ಪರಿಸ್ಥಿತಿ ಇದೆ.

ಗಡಿ ಕಾಯೋ ಯೋಧರಿಗೆ ವಿದ್ಯುತ್ ಇಲಾಖೆ shock.. 1.5 ಕೋಟಿ ರೂ. ಬಿಲ್ ಪಾವತಿಸಲು ಸೂಚನೆ