ಗುಂಪುಗಾರಿಕೆ ಮಾಡುವವರಿಗೆ ದೇವರು ಒಳ್ಳೇ ಬುದ್ಧಿ ನೀಡಲಿ -ಸಚಿವ ವಿ.ಸೋಮಣ್ಣ

ಗುಂಪುಗಾರಿಕೆ ಮಾಡುವವರಿಗೆ ದೇವರು ಒಳ್ಳೇ ಬುದ್ಧಿ ನೀಡಲಿ ಎಂದು ಗುಂಪುಗಾರಿಕೆ ಮಾಡುವವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ. ನಮ್ಮದೇನಿದ್ದರೂ ಕೊರೊನಾ ವಿರುದ್ಧ ಹೋರಾಟವಷ್ಟೇ ಮಳೆಗಾಲ ಆರಂಭವಾಗಿದೆ, ಈ ಬಗ್ಗೆ ಕೊಡಗಿಗೆ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಅದನ್ನು ಮಾಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಗುಂಪುಗಾರಿಕೆ ಮಾಡುವವರಿಗೆ ದೇವರು ಒಳ್ಳೇ ಬುದ್ಧಿ ನೀಡಲಿ -ಸಚಿವ ವಿ.ಸೋಮಣ್ಣ
ಸಚಿವ ವಿ.ಸೋಮಣ್ಣ
TV9kannada Web Team

| Edited By: Ayesha Banu

Jun 18, 2021 | 12:47 PM

ಬೆಂಗಳೂರು: ಗುಂಪುಗಾರಿಕೆ ಮಾಡುವವರಿಗೆ ದೇವರು ಒಳ್ಳೇ ಬುದ್ಧಿ ನೀಡಲಿ ಎಂದು ಬೆಂಗಳೂರಿನಲ್ಲಿ ಸಚಿವ ವಿ.ಸೋಮಣ್ಣ ಗುಂಪುಗಾರಿಕೆ ಮಾಡುವವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕರ್ನಾಟಕದ ರಾಜಕೀಯದಲ್ಲಿ ಅನೇಕ ಪರ-ವಿರೋಧ ಮಾತುಗಳು ಕೇಳಿ ಬರುತ್ತಿವೆ. ನಾಯಕತ್ವ ಬದಲಾವಣೆಗೆ ಕಸರತ್ತು ನಡೆಯುತ್ತಿದೆ. ಬಿಜೆಪಿಯಲ್ಲೇ ಭಿನ್ನಾಭಿಪ್ರಾಯ ಉಂಟಾಗಿದೆ. ಕೆಲವರು ನಾಯಕತ್ವ ಬದಲಾವಣೆ ಬೇಕು ಎಂದರೆ ಮತ್ತೆ ಕೆಲವರು ಬೇಡ ಎನ್ನುತ್ತಿದ್ದಾರೆ. ಘರ್ಷಣೆ ತಾರಕಕ್ಕೇರುತ್ತಿದ್ದಂತೆ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಬೆಂಗಳೂರಿಗೆ ಭೇಟಿ ನೀಡಿ ಶಾಸಕರು, ಕೆಲ ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ವಿ.ಸೋಮಣ್ಣ, ಗುಂಪುಗಾರಿಕೆ ಮಾಡುವವರಿಗೆ ದೇವರು ಒಳ್ಳೇ ಬುದ್ಧಿ ನೀಡಲಿ ಎಂದು ಗುಂಪುಗಾರಿಕೆ ಮಾಡುವವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಈ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ. ನಮ್ಮದೇನಿದ್ದರೂ ಕೊರೊನಾ ವಿರುದ್ಧ ಹೋರಾಟವಷ್ಟೇ ಮಳೆಗಾಲ ಆರಂಭವಾಗಿದೆ, ಈ ಬಗ್ಗೆ ಕೊಡಗಿಗೆ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಅದನ್ನು ಮಾಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಶಾಸಕ ಮುನಿರತ್ನ ಸಚಿವರಾಗಲಿದ್ದಾರೆ ಎಂದಿದ್ದ ವಿ.ಸೋಮಣ್ಣ ಮುಂದಿನ 8-10 ದಿನಗಳಲ್ಲಿ ಶಾಸಕ ಮುನಿರತ್ನ ಸಚಿವರಾಗಲಿದ್ದಾರೆ ಎಂದು ಬೆಂಗಳೂರಿನಲ್ಲಿ ವಸತಿ ಸಚಿವ ವಿ.ಸೋಮಣ್ಣ ಈ ಹಿಂದೆ ಹೇಳಿದ್ದರು. ಪಕ್ಷಾತೀತವಾಗಿ, ಜಾತ್ಯತೀತವಾಗಿ ಒಳ್ಳೆಯ ಕೆಲಸ ಮಾಡಬೇಕಿದೆ. ರಾಜ್ಯದಲ್ಲಿ ಸುಭಿಕ್ಷ ಸರ್ಕಾರ ಬರಬೇಕು. ಒಳ್ಳೆ ಕೆಲಸ ಆಗಬೇಕಾದರೆ ಮುನಿರತ್ನರಂತಹ ಶಾಸಕರು ಬರಬೇಕಿದೆ ಎಂದು ಅವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಫುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಭೋವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನ ನೇಮಿಸಿ, ಇಲ್ಲ ಅಂದ್ರೆ ಲಿಂಬಾವಳಿ ಮನೆ ಮುಂದೆ ಧರಣಿ ನಡೆಸುತ್ತೇವೆ -ಭೋವಿ ಮುಖಂಡರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada