ಕಾರು ಪಲ್ಟಿ: ಗಂಡಾಂತರದಿಂದ ಪಾರಾದ ಶಾಸಕ

ಕಾರು ಪಲ್ಟಿ: ಗಂಡಾಂತರದಿಂದ ಪಾರಾದ ಶಾಸಕ

ಬೆಳಗಾವಿ: ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಕಾರು ಅಪಘಾತವಾಗಿದೆ. ಕೂದಲೆಳೆ ಅಂತರದಲ್ಲಿ ಶಾಸಕ ಅರವಿಂದ ಬೆಲ್ಲದ್ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ಅರವಿಂದ ಬೆಲ್ಲದ್ ಕುಟುಂಬ ಸಮೇತ ಗೋವಾಕ್ಕೆ ಹೋಗಿದ್ದರು. ಗೋವಾದಿಂದ ಧಾರವಾಡಕ್ಕೆ ವಾಪಾಸ್ ಆಗುತ್ತಿದ್ದಾಗ ನಿಯಂತ್ರಣ ತಪ್ಪಿ ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಶಾಸಕರು ಮತ್ತು ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ವೇಳೆ ಸ್ವತಃ ಶಾಸಕರೇ ಕಾರು ಚಲಾಯಿಸುತ್ತಿದ್ದರು. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

sadhu srinath

|

Feb 25, 2020 | 4:50 PM

ಬೆಳಗಾವಿ: ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಕಾರು ಅಪಘಾತವಾಗಿದೆ. ಕೂದಲೆಳೆ ಅಂತರದಲ್ಲಿ ಶಾಸಕ ಅರವಿಂದ ಬೆಲ್ಲದ್ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ.

ಅರವಿಂದ ಬೆಲ್ಲದ್ ಕುಟುಂಬ ಸಮೇತ ಗೋವಾಕ್ಕೆ ಹೋಗಿದ್ದರು. ಗೋವಾದಿಂದ ಧಾರವಾಡಕ್ಕೆ ವಾಪಾಸ್ ಆಗುತ್ತಿದ್ದಾಗ ನಿಯಂತ್ರಣ ತಪ್ಪಿ ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಶಾಸಕರು ಮತ್ತು ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ವೇಳೆ ಸ್ವತಃ ಶಾಸಕರೇ ಕಾರು ಚಲಾಯಿಸುತ್ತಿದ್ದರು. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Follow us on

Related Stories

Most Read Stories

Click on your DTH Provider to Add TV9 Kannada