ಮಕ್ಕಳಲ್ಲಿ ಹೆಚ್ಚಿದ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ
ಕೊವಿಡ್ ಬಳಿಕ ಜನರ ಮಾನಸಿಕ ಚಿಂತನೆ ಅಷ್ಟೇ ಅಲ್ಲ.. ದೈಹಿಕ ಬೆಳವಣಿಗೆಯಲ್ಲೂ ಸಾಕಷ್ಟು ಬದಲಾವಣೆ ಕಂಡಿದೆ. ಅದರಲ್ಲೂ ಇತ್ತಿಚ್ಚಿನ ದಿನಗಳಲ್ಲಿ ಮಕ್ಕಳು ಹಾಗೂ ಯುವಕರಲ್ಲಿ ಅತಿಯಾದ ಬೇಕರಿ, ಫಾಸ್ಟ್ ಫುಡ್ ಅಭ್ಯಾಸ ಹಾಗೂ ಹೊರಾಂಗಣ ಆಟಗಳು ಮರೆತಿರುವ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತಿದ್ದು, ಈ ಬಗ್ಗೆ ಆತಂಕಕಾರಿಯಾದ ವರದಿಯೊಂದು ತಿಳಿಸಿದೆ.

ಬೆಂಗಳೂರು, (ಮಾರ್ಚ್ 06): ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಆಹಾರ ಸೇವನೆ ಹೆಚ್ಚುತ್ತಿರುವುದರಿಂದ ಜನರಲ್ಲಿ ಬೊಜ್ಜು ಮತ್ತು ಮಧುಮೇಹ ವೇಗವಾಗಿ ಹೆಚ್ಚುತ್ತಿದೆ. ಈ ಬಗ್ಗೆ ಲ್ಯಾನ್ಸೆಟ್ ತನ್ನ ಜರ್ನಲ್ ನಲ್ಲಿ ಭಾರೀಯರ ಸ್ಥೂಲಕಾಯದ ಬಗ್ಗೆ ಆತಂಕಕಾರಿ ವರದಿಯೊಂದನ್ನ ನೀಡಿದೆ. ಯುವ ಜನತೆ ಜಂಕ್ ಪುಡ್ ಸೇವನೆ ಏರಿಕೆಯಿಂದ ರಾಜ್ಯ ಸೇರಿದ್ದಂತೆ ದೇಶದಲ್ಲಿ ಸ್ಥೂಲಕಾಯ , ಬೊಜ್ಜಿನಿಂದ ಬಳಲುವವರ ಸಂಖ್ಯೆ 44 ಕೋಟಿಗೆ ಏರಿಕೆ ಕಂಡಿದೆ. ಈ ಪೈಕಿ 21.8 ಪುರುಷರಿದ್ರೆ 23.8 ಕೋಟಿ ಮಹಿಳೆಯರಿದ್ದು ಅತಿ ಹೆಚ್ಚು ಮಹಿಳೆಯರೇ ಸ್ಥೂಲಕಾಯದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಲ್ಯಾನ್ಸೆಟ್ ಅಂತಾರಾಷ್ಟ್ರೀಯ ಜರ್ನಲ್ ವರದಿಯಲ್ಲಿ ತಿಳಿಸಿದೆ.
.ಇನ್ನು ಕೊರೊನಾ ಬಳಿಕ ಯುವಕರು ಹಾಗೂ ಶಾಲಾ ಮಕ್ಕಳಿಗೆ ಹೊರಾಂಗಣ ಕ್ರೀಡೆ ಆಟದ ಚಟಿವಟಿಕೆ ಅಷ್ಟೇ ಕಡಿಮೆ ಮಾಡಿಲ್ಲ. ಮಕ್ಕಳ ತಿನ್ನುವ ಅಭ್ಯಾಸ ಕೂಡಾ ಹೆಚ್ಚಿಸಿದೆಯಂತೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಫಾಸ್ಟ್ ಫುಡ್, ಬೇಕರಿ ತಿಂಡಿ ಸೇವನೆ ಹೆಚ್ಚಾಗಿದ್ದು, ಶೇ.20 ಮಕ್ಕಳಲ್ಲಿ ಅತಿಯಾದ ಬೊಜ್ಜು ಕಾಣಿಸುತ್ತಿದೆ. 5 ರಿಂದ 14 ವಯಸ್ಸಿನ 3 ಕೋಟಿ ಮಕ್ಕಳು ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಈ ಅತಿಯಾದ ಬೊಜ್ಜು ಅಸ್ತಮಾ ಜೊತೆಗೂ ಕ್ಯಾನ್ಸರ್ ಗೂ ಕಾರಣವಾಗುತ್ತಿದೆ ಎಂದಯ ವರದಿಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ: ಇಡ್ಲಿ ತಿಂದರೆ ಬರಬಹುದು ಕ್ಯಾನ್ಸರ್! ಆಘಾತಕಾರಿ ವರದಿ ಬಹಿರಂಗ
ಬೊಜ್ಜಿನಿಂದ ಏನೆಲ್ಲಾ ಸಮಸ್ಯೆಗಳು?
ಜನರ ಅನಾರೋಗ್ಯಕರ ಆಹಾರ ಪದ್ಧತಿ.. ಅತಿಯಾದ ಜಂಕ್ ಪುಡ್ ಸೇವನೆ ಮತ್ತು ಅತಿಯಾದ ಮೊಬೈಲ್ ಬಳಕೆ ಹೊರಾಗಂಣ ಆಟ ಕಡಿಮೆಯಿಂದ ಈ ಬೊಜ್ಜು ಹೆಚ್ಚಾಗಿ ಸ್ಥೂಲಕಾಯ ಪ್ರೇರಿತ ಆಸ್ತಮಾ ಹಾಗೂ ಕ್ಯಾನ್ಸರ್ ಹೆಚ್ಚುತ್ತಿದೆ. ಬೊಜ್ಜು ಪ್ರೇರಿತ ಅಸ್ತಮಾ ಹಾಗೂ ಕ್ಯಾನ್ಸರ್ ಜನರ ಆರೋಗ್ಯಕ್ಕೆ ಕುತ್ತು ತರ್ತಿದೆ. ಚೀನಾ ನಂತರ ಭಾರತದಂತ ರಾಷ್ಟ್ರದಲ್ಲಿಯೂ ಈ ತೂಕ ಏರಿಕೆ ಸಮಸ್ಯೆ ಯುವಕರ ಆರೋಗ್ಯ ಹಾಗೂ ಆಸಕ್ತಿ ಕುಂದಲು ಕಾರಣವಾಗಿದೆಯಂತೆ. ಹೀಗಾಗಿ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಬಿ ಅಲರ್ಟ್ ಅಂತಿದ್ದಾರೆ ವೈದ್ಯರು.
ಇತ್ತೀಚೆಗೆ ಬೊಜ್ಜು ಗಮನಾರ್ಹವಾಗಿ ಹೆಚ್ಚಾಗಿದೆ. ಕೊವಿಡ್ ಟೈಮ್ ನಲ್ಲಿನ ಜೀವನಶೈಲಿಯಿಂದ ಶೇ.40% ರಷ್ಟು ಅಸ್ತಮಾ ಪ್ರಕರಣಗಳು ಆನುವಂಶಿಕವಾಗಿದ್ದರೆ.. ಇನ್ನುಳಿದಂತೆ ಸಿಟಿಯ ವಾಯುಮಾಲಿನ್ಯ ಹಾಗೂ ಆಹಾರ ಪದ್ಧತಿ ಮಕ್ಕಳ ಬೊಜ್ಜು ಹೆಚ್ಚಾಗಲು ಕಾರಣ ಎಂದು ವೈದ್ಯರು ಹೇಳುತ್ತಿದ್ದಾರೆ.
ಇನ್ನು 16 ವರ್ಷಕ್ಕಿಂತ ಕಿರಿಯ ಮಕ್ಕಳಲ್ಲಿಯೇ ಈ ಬೊಜ್ಜು ಹೆಚ್ಚಾಗುತ್ತಿದ್ದು ಬಾಲ್ಯದ ಈ ಬೊಜ್ಜು ಮಕ್ಕಳ ಟೈಪ್-2 ಡಯಾಬಿಟಿಸ್, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಅಸ್ಥಿಸಂಧಿವಾತ, ಪರಿಧಮನಿಯ ಹೃದಯ ಕಾಯಿಲೆ, ಪಾರ್ಶ್ವವಾಯು, ಪಿತ್ತಕೋಶದ ಕಾಯಿಲೆ, ಉಸಿರಾಟದ ತೊಂದರೆ ಸೇರಿದಂತೆ ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಎದುರಿಸಬಹುದು ಅಂತಿದ್ದಾರೆ. ಈ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಸ್ಥೂಲಕಾಯದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ. ಇನ್ನು ಶಾಲಾ ಮಕ್ಕಳಲ್ಲಿ ಈ ಬೊಜ್ಜು ಹೆಚ್ಚಾಗುತ್ತಿರುವ ಹಿನ್ನಲೆ ಮಕ್ಕಳ ಹಕ್ಕುಗಳ ಆಯೋಗ ಕೂಡಾ ಆರೋಗ್ಯ ಇಲಾಖೆಗೆ ಮಕ್ಕಳ ಆರೋಗ್ಯದ ಬಗ್ಗೆ ಮಾನಿಟರ್ ಮಾಡಲು ಹಾಗೂ ಸಲಹೆ ನೀಡಲು ತಿಳಿಸಿದೆ.
ಒಟ್ಟಿನಲ್ಲಿ ಇತ್ತೀಚೆಗೆ ಯುವಕರು ಹಾಗೂ ಮಕ್ಕಳು ಪೌಷ್ಟಿಕ ಮತ್ತು ಆರೋಗ್ಯಕರ ಆಹಾರಗಳನ್ನು ಸೇವಿಸುವಂತೆ ಮಾಡುವುದು ಸವಾಲಿನ ಕೆಲಸ. ಪೋಷಕರು ಎಷ್ಟೇ ಕಷ್ಟಪಟ್ಟರೂ ಇಂದಿನ ಮಕ್ಕಳು ಕರಿದ, ಸಂಸ್ಕರಿತ ಮತ್ತು ಸಕ್ಕರೆಭರಿತ ಆಹಾರಗಳನ್ನೇ ಇಷ್ಟಪಡುವಾಗ ಪೌಷ್ಠಿಕ ಆಹಾರ ನೀಡುವತ್ತ ಪೋಷಕರು ಹಚ್ಚು ಗಮನ ಹರಿಸಬೇಕಿದೆ.