ಕಣ್ಣುಮಿಟುಕಿಸದೆ 28 ನಿಮಿಷಗಳ ಕಾಲ ಸೂರ್ಯನನ್ನು ದಿಟ್ಟಿಸಿ ನೋಡಿ ವ್ಯಕ್ತಿಯೊಬ್ಬರು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಮೈಸೂರಿನ ಯೋಗ ತಜ್ಞ, ಸಾಮಾಜಿಕ ಕಾರ್ಯಕರ್ತ ಬದ್ರಿ ನಾರಾಯಣ್ ಕೆ.ಎಸ್ ಅವರು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಸುಮಾರು 28 ನಿಮಿಷಗಳ ಕಾಲ ಕಣ್ಣು ಮಿಟುಕಿಸದೆ ಸೂರ್ಯನನ್ನು ದಿಟ್ಟಿಸಿ ವಿಶ್ವದಾಖಲೆ ನಿರ್ಮಿಸುವ ಪ್ರಯತ್ನ ಮಾಡಿದರು.
ಈ ಕುರಿತು ಯೋಗ ಗುರು ಕೆ.ರಾಘವೇಂದ್ರ ಪೈ ಈ ಕುರಿತು ಮಾತನಾಡಿ, ‘ಈ ಯೋಗಕ್ಕೆ ತ್ರಾಟಕ ಕ್ರಿಯೆ ಎನ್ನುತ್ತಾರೆ. ಇದನ್ನು ಹಠ ಯೋಗಿಗಳು ಮಾತ್ರ ಸಾಧಿಸಲು ಸಾಧ್ಯ’ ಎಂದಿದ್ದಾರೆ. ಬದರಿ ನಾರಾಯಣ್ ಮಲೇಷ್ಯಾ ಮತ್ತು ಒಮಾನ್ ಕಂಪನಿಗಳಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, 15 ವರ್ಷಗಳ ಹಿಂದೆ ಮೈಸೂರಿಗೆ ಮರಳಿದ್ದರು. ಅವರು ಪ್ಲಾಸ್ಟಿಕ್ ಪಿಇಟಿ ಬಾಟಲಿಗಳ ಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಪಾರ್ಥೇನಿಯಂ ಸಸ್ಯಗಳನ್ನು ನಿರ್ಮೂಲನೆ ಮಾಡುವ ಕೆಲಸ ಮಾಡುತ್ತಿದ್ದಾರೆ.
ಮತ್ತಷ್ಟು ಓದಿ:
ಬದರಿ ನಾರಾಯಣ್ ಮಲೇಷ್ಯಾ ಮತ್ತು ಒಮಾನ್ ಕಂಪನಿಗಳಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, 15 ವರ್ಷಗಳ ಹಿಂದೆ ಮೈಸೂರಿಗೆ ಮರಳಿದ್ದರು. ಅವರು ಪ್ಲಾಸ್ಟಿಕ್ ಪಿಇಟಿ ಬಾಟಲಿಗಳ ಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಪಾರ್ಥೇನಿಯಂ ಸಸ್ಯಗಳನ್ನು ನಿರ್ಮೂಲನೆ ಮಾಡುವ ಕೆಲಸ ಮಾಡುತ್ತಿದ್ದಾರೆ.
ಮಂಗಳವಾರ ಪ್ರಾಣಾಯಾಮ ಮಾಡುತ್ತಾ ಉರಿಬಿಸಿಲಿನಲ್ಲೇ ಬರಿಗಣ್ಣಿನಲ್ಲಿ ಸೂರ್ಯನನ್ನು 42 ನಿಮಿಷಗಳ ಕಾಲ ನೋಡಿ ದಾಖಲೆ ಮಾಡಿದರು. ‘ಈ ಪ್ರಕ್ರಿಯೆಗೆ ಸೂರ್ಯ ಕಿರಣ ಕ್ರಿಯೆ ಎಂದು ಹೇಳುತ್ತೇವೆ. ಸೂರ್ಯನನ್ನು ನೇರವಾಗಿ ನೋಡುವುದು ಅಪಾಯಕಾರಿ. ಆದರೆ, ನಿರಂತರ ಪ್ರಾಣಾಯಾಮದ ಜೊತೆಗಿನ ಅಭ್ಯಾಸದ ಮೂಲಕ ನಾನು ಈ ಸಾಧನೆ ಮಾಡಿದ್ದೇನೆ. ಹೀಗಾಗಿ ಇದನ್ನು ಯಾರೂ ಪ್ರಯತ್ನಿಸಬಾರದು’ ಎಂದು ಅವರು ವಿನಂತಿಸಿದರು.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ