ಮೈಸೂರು: ಸೈಕಲ್ ಬಳಕೆ ಉತ್ತೇಜಿಸುವ ಸಲುವಾಗಿ ಮೈಸೂರು ಜಿಲ್ಲಾಡಳಿತ ಪ್ರಾರಂಭಿಸಿದ ದೇಶದ ಮೊದಲ ಸಾರ್ವಜನಿಕ ಬೈಸಿಕಲ್ ಸೇವೆ ಟ್ರಿನ್ ಟ್ರಿನ್ ಪ್ರಾರಂಭವಾಗಿ ಇಂದಿಗೆ ಮೂರು ವರ್ಷ ಪೂರೈಸಿದೆ. ಕಳೆದ ಮೂರು ವರ್ಷದ ಹಿಂದೆ ಪ್ರಾರಂಭವಾದ ಸೇವೆ ಇಂದು ಯಶಸ್ವಿಯಾಗಿ ಜನಮನ್ನಣೆಗಳಿಸಿದೆ.
ಪರಿಸರ ಸ್ನೇಹಿಯಾದ ಸೈಕಲ್ಗಳ ಬಳಕೆ ಹೆಚ್ಚಿಸಬೇಕು ಎಂಬ ದೃಷ್ಟಿಯಿಂದ ಅಂದು ಪ್ರಾರಂಭಮಾಡಲಾಗಿತ್ತು. ಇದಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ರು. ಇದಾದ ನಂತರ ಮೈಸೂರಿನಲ್ಲಿ ಜನಪ್ರಿಯಗೊಂಡು ಬಳಕೆದಾರರು ಕೂಡ ಹೆಚ್ಚಾದ್ರು. ಸದ್ಯ ಎಷ್ಟೊ ಜನ ಸ್ಕೂಟರ್ಗಳನ್ನು ಬಿಟ್ಟು ಸೈಕಲ್ ಬಳಕೆಯತ್ತ ಮುಖಮಾಡಿದ್ದಾರೆ. ಆರೋಗ್ಯದ ದೃಷ್ಟಿ ಹಾಗೂ ಪರಿಸರ ದೃಷ್ಟಿಯಿಂದ ಈ ಸೈಕಲ್ ಬಳಕೆ ಅತ್ಯುತ್ತಮ ಎನ್ನುವುದು ಬಳಕೆದಾರರ ಮಾತಾಗಿದೆ.
ಟ್ರಿನ್ ಟ್ರಿನ್ ವಿಶೇಷ:
ಸದ್ಯ 14 ಸಾವಿರ ಜನರು ಈ ಸೇವೆಗೆ ಚಂದಾದಾರರಾಗಿದ್ದಾರೆ.ಅದರಲ್ಲಿ ಚಾಮುಂಡಿ ಬೆಟ್ಟ ಸೇರಿ ಮೈಸೂರಿನ 45 ಕಡೆ ಟ್ರಿನ್ ಟ್ರಿನ್ ಬೈಸಿಕಲ್ ಕೇಂದ್ರಗಳಿದ್ದು ಇದರಲ್ಲಿ 450 ಸೈಕಲ್ ಗಳಿವೆ. ಸದ್ಯ 14 ಸಾವಿರ ಜನ ಚಂದಾದಾರರು ನಿತ್ಯ ಬಳಕೆಯಲ್ಲಿ ತೊಡಗಿದ್ದಾರೆ.
Published On - 4:12 pm, Thu, 4 June 20