136ನೇ ಜಯಂತಿಯ ಸಂಭ್ರವನ್ನ ಮುಸುಕಾಗಿಸಿದೆ.. ಕೆಟ್ಟುನಿಂತ ದೊಡ್ಡ ಗಡಿಯಾರ!
ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಕ್ಕೆ 25 ವರ್ಷ ತುಂಬಿದ ನೆನಪಿಗಾಗಿ ನಿರ್ಮಿಸಿದ್ದ ಮೈಸೂರಿನ ದೊಡ್ಡ ಗಡಿಯಾರ ಇದೀಗ ಕೆಟ್ಟು ನಿಂತಿದೆ. ಅಷ್ಟೆ ಅಲ್ಲದೆ ಗೋಡೆಯಲ್ಲಿ ಬಿರುಕು ಸಹ ಕಾಣಿಸಿಕೊಂಡಿದೆ. ಮೈಸೂರಿನ ದೊಡ್ಡ ಗಡಿಯಾರ ಅರಮನೆಗಳ ನಗರಿಗೆ ಪಾರಂಪರಿಕ ಕಟ್ಟಡಗಳಲ್ಲೇ ಅತ್ಯಂತ ವಿಶೇಷವಾದದ್ದು. ಮೈಸೂರು ಅರಮನೆಗೆ ಕಣ್ಣಳತೆ ದೂರದಲ್ಲಿರುವ ಈ ದೊಡ್ಡ ಗಡಿಯಾರ ಪ್ರವಾಸಿಗರನ್ನ ಸೂಜಿ ಗಲ್ಲಿನಂತೆ ಸೆಳೆಯುತ್ತೆ. ಇದೀಗ ಗಡಿಯಾರ ಗೋಪುರ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಜೊತೆಗೆ ಗಡಿಯಾರವು ಸಹ ನಿಂತುಹೋಗಿದೆ. 90 ಅಡಿ ಎತ್ತರದ […]
ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಕ್ಕೆ 25 ವರ್ಷ ತುಂಬಿದ ನೆನಪಿಗಾಗಿ ನಿರ್ಮಿಸಿದ್ದ ಮೈಸೂರಿನ ದೊಡ್ಡ ಗಡಿಯಾರ ಇದೀಗ ಕೆಟ್ಟು ನಿಂತಿದೆ. ಅಷ್ಟೆ ಅಲ್ಲದೆ ಗೋಡೆಯಲ್ಲಿ ಬಿರುಕು ಸಹ ಕಾಣಿಸಿಕೊಂಡಿದೆ. ಮೈಸೂರಿನ ದೊಡ್ಡ ಗಡಿಯಾರ ಅರಮನೆಗಳ ನಗರಿಗೆ ಪಾರಂಪರಿಕ ಕಟ್ಟಡಗಳಲ್ಲೇ ಅತ್ಯಂತ ವಿಶೇಷವಾದದ್ದು. ಮೈಸೂರು ಅರಮನೆಗೆ ಕಣ್ಣಳತೆ ದೂರದಲ್ಲಿರುವ ಈ ದೊಡ್ಡ ಗಡಿಯಾರ ಪ್ರವಾಸಿಗರನ್ನ ಸೂಜಿ ಗಲ್ಲಿನಂತೆ ಸೆಳೆಯುತ್ತೆ.
ಇದೀಗ ಗಡಿಯಾರ ಗೋಪುರ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಜೊತೆಗೆ ಗಡಿಯಾರವು ಸಹ ನಿಂತುಹೋಗಿದೆ. 90 ಅಡಿ ಎತ್ತರದ ದೊಡ್ಡ ಗಡಿಯಾರ ಎರಡು ತಿಂಗಳಿಂದಲೂ ಕೆಟ್ಟುನಿಂತಿದ್ದು, ಇದರ ನಿರ್ವಹಣೆ ಮಾಡುತ್ತಿರುವ ಮಹಾನಗರ ಪಾಲಿಕೆ ಸರಿಪಡಿಸಿಲ್ಲ. ಇದರ ಜೊತೆಗೆ ಕಳೆದ ಒಂದು ವರ್ಷದ ಹಿಂದೆಯೇ ಗಡಿಯಾರದ ಗೋಡೆಯಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಪಾಲಿಕೆ ಗಮನಕ್ಕೆ ತರಲಾಗಿತ್ತು. ಆದರೆ ಈವರೆಗೆ ಇದರ ರಿಪೇರಿ ಕಾರ್ಯ ಸಹ ನಡೆದಿಲ್ಲ. ಪಾಲಿಕೆ ನಡೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ಸಹ ವ್ಯಕ್ತವಾಗುತ್ತಿದೆ.
ರಾಜಶ್ರೀ ಕೃಷ್ಣರಾಜ ಒಡೆಯರ್ ಹೆಸರಲ್ಲಿ 10 ಜನರಿಗೆ ಪ್ರಶಸ್ತಿ: YSV ದತ್ತಾ ಮಾತ್ನಾಡಿದ್ದಾರೆ ಕೇಳಿ
ದೊಡ್ಡ ಗಡಿಯಾರದ ಇತಿಹಾಸ: ದೊಡ್ಡ ಗಡಿಯಾರಕ್ಕೆ ಬಹುದೊಡ್ಡ ಇತಿಹಾಸವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಜನಪರ ಆಡಳಿತ, ಕ್ರಾಂತಿಕಾರ ಸಾಮಾಜಿಕ ಬದಲಾವಣೆ ಹಾಗೂ ಅಭಿವೃದ್ಧಿ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿದ್ದರು. ನಾಲ್ವಡಿ ಅವರ ಪಟ್ಟಾಭಿಷೇಕದ ಬೆಳ್ಳಿಹಬ್ಬದ ನೆನಪಿಗಾಗಿ 1927ರಲ್ಲಿ ಅರಮನೆ ಸಿಬ್ಬಂದಿಗಳೇ ದೇಣಿಗೆ ಸಂಗ್ರಹಿಸಿ ದೊಡ್ಡ ಗಡಿಯಾರ ನಿರ್ಮಿಸಿದ್ದರು. ಅಷ್ಟೆ ಅಲ್ಲದೆ ದೊಡ್ಡ ಗಡಿಯಾರದಲ್ಲಿ ಬೃಹತ್ ಗಾತ್ರದ ಗಂಟೆಯು ಸಹ ಇದ್ದು ಪ್ರತಿಗಂಟೆಗೊಮ್ಮೆ ಶಬ್ದ ಮಾಡುತ್ತಿತ್ತು. ಆದರೆ ಕಟ್ಟಡದ ಸುರಕ್ಷತೆ ದೃಷ್ಟಿಯಿಂದ 1990 ರಲ್ಲಿ ಗಂಟೆ ಬಾರಿಸುವುದನ್ನು ನಿಲ್ಲಿಸಲಾಯಿತು.
Published On - 1:17 pm, Thu, 4 June 20