ಭೂ ಸ್ವಾಧೀನಕ್ಕೆ ಪರಿಹಾರ ನೀಡುವಲ್ಲಿ ವಿಳಂಬ: ಜಪ್ತಿಯಾಯ್ತು ಮೈಸೂರು ಮುಡಾ ಆಯುಕ್ತರ ಕಾರು!

ದಶಕಗಳ ಹಿಂದೆ ಬಡಾವಣೆ ನಿರ್ಮಾಣಕ್ಕೆ ರೈತರ ಜಮೀನನ್ನು ಮುಡಾ ಭೂ ಸ್ವಾಧೀನ ಮಾಡಿಕೊಂಡಿತ್ತು. ಚಿನ್ನಸ್ವಾಮಿ ಎಂಬವರ 1 ಎಕರೆ 25 ಗುಂಟೆ ಜಮೀನನ್ನು ಮುಡಾ ಸ್ವಾಧೀನ ಪಡಿಸಿಕೊಂಡಿತ್ತು.

  • TV9 Web Team
  • Published On - 18:24 PM, 28 Jan 2021
ಭೂ ಸ್ವಾಧೀನಕ್ಕೆ ಪರಿಹಾರ ನೀಡುವಲ್ಲಿ ವಿಳಂಬ: ಜಪ್ತಿಯಾಯ್ತು ಮೈಸೂರು ಮುಡಾ ಆಯುಕ್ತರ ಕಾರು!
ಮುಡಾ ಕಾರ್ ಜಪ್ತಿ

ಮೈಸೂರು: ಭೂ ಸ್ವಾಧೀನಕ್ಕೆ ಹೆಚ್ಚುವರಿ ಪರಿಹಾರ ನೀಡುವಲ್ಲಿ ವಿಳಂಬವಾದ ಕಾರಣ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರ ಕಾರು ಜಪ್ತಿ ಮಾಡಲಾಗಿದೆ. ಚಿನ್ನಸ್ವಾಮಿ ಎಂಬುವರ ಆಸ್ತಿಗೆ ಪರಿಹಾರ ನೀಡುವಲ್ಲಿ ಮುಡಾ ತಡಮಾಡಿತ್ತು. ಪರಿಹಾರಧನ ನೀಡುವುದಕ್ಕೆ ವಿಳಂಬವಾದ ಹಿನ್ನೆಲೆಯಲ್ಲಿ ಮುಡಾಗೆ ಸಂಬಂಧಪಟ್ಟ ವಾಹನಗಳನ್ನು ಜಪ್ತಿ ಮಾಡುವ ಬಗ್ಗೆ ಕೋರ್ಟ್ ಆದೇಶ ನೀಡಿದೆ.

ದಶಕಗಳ ಹಿಂದೆ ಬಡಾವಣೆ ನಿರ್ಮಾಣಕ್ಕೆ ರೈತರ ಜಮೀನನ್ನು ಮುಡಾ ಭೂ ಸ್ವಾಧೀನ ಮಾಡಿಕೊಂಡಿತ್ತು. ಚಿನ್ನಸ್ವಾಮಿ ಎಂಬವರ 1 ಎಕರೆ 25 ಗುಂಟೆ ಜಮೀನನ್ನು ಮುಡಾ ಸ್ವಾಧೀನ ಪಡಿಸಿಕೊಂಡಿತ್ತು. ನಾಲ್ಕನೇ ಎಸಿಜೆ ನ್ಯಾಯಾಲಯ ಭೂ ಸ್ವಾಧೀನಕ್ಕೆ ರೈತರಿಗೆ ಪರಿಹಾರ ನೀಡುವಂತೆ ಆದೇಶಿಸಿತ್ತು.

ಆದರೆ, ಪರಿಹಾರ ವಿಳಂಬವಾದ ಹಿನ್ನೆಲೆ ಮುಡಾ ಆಯುಕ್ತರ ಕಾರು ಜಪ್ತಿಪಡಿಸಲು ಕೋರ್ಟ್ ಆದೇಶ ನೀಡಿದೆ. ಕೋರ್ಟ್ ಆದೇಶದಂತೆ, ಆಯುಕ್ತರ ಕಾರ್ ಸಹಿತ ಪ್ರಾಧಿಕಾರದ ಎರಡು ಕಾರ್​ಗೆ ಅಮೀನರು ನೋಟಿಸ್ ಪ್ರತಿ ಅಂಟಿಸಿದ್ದಾರೆ.

ಮುಡಾ ಕಾರ್​ಗಳಿಗೆ ಅಂಟಿಸಿರುವ ನೋಟೀಸ್

ಮೈಸೂರು ಪ್ರವಾಸಿಗರಿಗಾಗಿ.. ಅಂಬಾರಿ ಹೆಸರಿನ ಡಬಲ್ ಡೆಕ್ಕರ್ ಬಸ್ ಸಂಚಾರಕ್ಕೆ ಸಿದ್ಧ

ಮುಡಾದಲ್ಲಿ ಬಗೆದಷ್ಟೂ ಹೊರ ಬರ್ತಿದೆ ಗೋಲ್​ಮಾಲ್, ಒಬ್ಬನಿಗೆ 3 ನಿವೇಶನ ಮಂಜೂರು