ಮೈಸೂರು ಪಾಲಿಕೆ ಚುನಾವಣೆ: ಕುಮಾರಸ್ವಾಮಿ ಮೈಂಡ್​ ರೀಡ್​ ಮಾಡೋದು ಕಷ್ಟ ಕಷ್ಟ. ಅವರ ಹೇಳಿಕೆಯೇ ಒಂದು, ನಡೆದ ವಾಸ್ತವವೇ ಇನ್ನೊಂದು- ಎಸ್​.ಟಿ. ಸೋಮಶೇಖರ್

Mysore Corporation Mayor Election: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್​ ಬೆಂಬಲದಿಂದ ಜೆಡಿಸ್​ ಅಭ್ಯರ್ಥಿಗೆ ಮೇಯರ್​ಗಿರಿ ಲಭ್ಯವಾಗಿದೆ. ಈ ಕುರಿತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ ಸೋಮಶೇಖರ್​ ಪ್ರತಿಕ್ರಿಯೆ ಇಲ್ಲಿದೆ.

  • TV9 Web Team
  • Published On - 14:15 PM, 24 Feb 2021
ಮೈಸೂರು ಪಾಲಿಕೆ ಚುನಾವಣೆ: ಕುಮಾರಸ್ವಾಮಿ ಮೈಂಡ್​ ರೀಡ್​ ಮಾಡೋದು ಕಷ್ಟ ಕಷ್ಟ. ಅವರ ಹೇಳಿಕೆಯೇ ಒಂದು, ನಡೆದ ವಾಸ್ತವವೇ ಇನ್ನೊಂದು- ಎಸ್​.ಟಿ. ಸೋಮಶೇಖರ್
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ ಸೋಮಶೇಖರ್

ಮೈಸೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್​ ಬೆಂಬಲದಿಂದ ಜೆಡಿಎಸ್​ ಅಭ್ಯರ್ಥಿ ರುಕ್ಮಿಣಿ ಮಾದೇಗೌಡಗೆ ಮೇಯರ್​ಗಿರಿ ಲಭ್ಯವಾಗಿದೆ. ಮೈಸೂರು ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತ ಇರಲಿಲ್ಲ. ಆದರೆ ಹೆಚ್​.ಡಿ.ಕುಮಾರಸ್ವಾಮಿ ಹೇಳಿಕೆಯ ಮೇಲೆ ನಮಗೆ ವಿಶ್ವಾಸವಿತ್ತು. ಅಧಿಕಾರ ಕೈತಪ್ಪಬಹುದೆಂದು ನಾನು ನಿರೀಕ್ಷಿಸಿರಲಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್​ ಹೇಳಿದರು.

ಈ ಬಾರಿ ನಮಗೆ ಅನುಕೂಲವಾಗಬಹುದು ಎಂಬ ವಿಶ್ವಾಸವಿತ್ತು. ಆದರೆ ಯಾರ ಮಾತು ನಂಬೋದು, ಯಾರನ್ನು ಬಿಡೋದು ಎಂಬುದೇ ಅರ್ಥವಾಗುತ್ತಿಲ್ಲ. ಈ ರೀತಿಯಾಗಿ ಆಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಹೆಚ್​.ಡಿ. ಕುಮಾರಸ್ವಾಮಿ ಮೈಂಡ್​ ರೀಡ್​ ಮಾಡೋದು ನಮಗೆ ಕಷ್ಟ. ಅವರ ಹೇಳಿಕೆಯೇ ಒಂದು. ಆದರೆ ನಡೆದ ವಾಸ್ತವವೇ ಇನ್ನೊಂದಾಗಿದೆ. ಕಾಂಗ್ರೆಸ್ ಜತೆ ಹೋಗದಿದ್ದರೆ ನಮಗೆ ಬೆಂಬಲಿಸಲು ಹೇಳಿದ್ದೆವು. ಆದರೆ ಕುಮಾರಸ್ವಾಮಿ ಹೋಗಲ್ಲ, ಹೋಗಲ್ಲ ಎಂದು ಈಗ ಹೋಗಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಮೈತ್ರಿ ಮುರಿಯೋಕೆ ಸಿದ್ದರಾಮಯ್ಯ ಕಾರಣ ಎಂದು ಹೆಚ್​.ಡಿ.ಕುಮಾರಸ್ವಾಮಿ ಈಚೆಗೆ ಹೇಳಿದ್ದರು.  ಇವರ ಹೇಳಿಕೆಯಿಂದ ನಮಗೆ ಅನುಕೂಲವಾಗುವ ವಿಶ್ವಾಸವಿತ್ತು. ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತ ಇರಲಿಲ್ಲ. ಆದರೆ ವಿಶ್ವಾಸವಿತ್ತು. ಸೋಲು ಗೆಲುವು ಎಲ್ಲವೂ ಅವರಿಗೆ ಸಲ್ಲಬೇಕು. ಸಿದ್ದರಾಮಯ್ಯ ಮೇಯರ್ ಕೋಟಾ ತಗೊಳಿ ಎಂದಿದ್ದರು. ಆದರೆ, ಅವರ ಎದುರೇ ಜೆಡಿಎಸ್​ ಮೇಯರ್​​ಗಿರಿ ತಗೊಂಡಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಎಂಬ ಹುಲಿಯನ್ನು ಹಿಡಿದು ಕುಮಾರಸ್ವಾಮಿ ಬೋನಿಗೆ ಹಾಕಿದ್ದಾರೆ: ಬಿಜೆಪಿ ಸಂಸದ ಪ್ರತಾಪ್ ಸಿಂಹ
ವಿಪಕ್ಷ ನಾಯಕ ಸಿದ್ದರಾಮಯ್ಯ ಹುಲಿ ಎಂದುಕೊಂಡಿದ್ದೆವು. ಇಂದು ಆ ಹುಲಿಯನ್ನು ಹಿಡಿದು ಹೆಚ್‌.ಡಿ.ಕುಮಾರಸ್ವಾಮಿ ಬೋನಿಗೆ ಹಾಕಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಈಗ ಬೋನಿನಲ್ಲಿರುವ ಹುಲಿ. ಕಾಂಗ್ರೆಸ್ ಪಕ್ಷದ ಹೀನಾಯ ಸ್ಥಿತಿಯ ಪ್ರದರ್ಶನವಾಗಿದೆ. ಅವರ ಅಭ್ಯರ್ಥಿಗೆ ಅವರೇ ಮತ ಹಾಕದಂತೆ ಕಾಂಗ್ರೆಸ್‌ ಪಕ್ಷದವರಿಗೆ ಕೈಕಟ್ಟಿದ್ಯಾರು? ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ಕಾರ್ಯತಂತ್ರ ಬದಲಿಸಿ ಮೇಯರ್ ಸ್ಥಾನ ಬಿಟ್ಟುಕೊಟ್ಟೆವು: ತನ್ವೀರ್ ಸೇಠ್
ಒಪ್ಪಂದದ ಪ್ರಕಾರ ನಮಗೆ ಮೇಯರ್ ಸ್ಥಾನ ಸಿಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬಿಜೆಪಿಗೆ ಅಧಿಕಾರ ಸಿಗುವ ಸಾಧ್ಯತೆಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ, ಕಾರ್ಯತಂತ್ರ ಬದಲಿಸಿ ಮೇಯರ್ ಸ್ಥಾನ ಬಿಟ್ಟುಕೊಟ್ಟೆವು. ಜೆಡಿಎಸ್ ನಮಗೆ ಬೆಂಬಲ ಕೇಳಿತ್ತು ಅಥವಾ ಕೇಳಿಲ್ಲ ಎಂಬುದು ಬೇರೆ ಪ್ರಶ್ನೆ. ನಮ್ಮ ಉದ್ದೇಶ ಈಡೇರಬೇಕಿತ್ತು ಅಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹುಲಿಯನ್ನ ಬೋನಿಗೆ ಹಾಕಿದ್ದಾರೆಂಬ ಹೇಳಿಕೆ ವಿಚಾರ ಹರಿದಾಡುತ್ತಿದೆ. ಹುಲಿಯನ್ನು ಬೋನಿಗೆ ಹಾಕುವುದು ಹಳೆಯ ಸಂಸ್ಕೃತಿ. ಆದರೆ ಮಂಗಗಳು ಎಲ್ಲಿವೆ ಪ್ರತಾಪ್​ ಸಿಂಹ ಹೇಳಲಿ ಎಂದು ತನ್ವೀರ್ ಸೇಠ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಮೈಸೂರು ಪಾಲಿಕೆ ಮೇಯರ್ ಫೈಟ್ ಮೆಗಾ ಟ್ವಿಸ್ಟ್; ಜೆಡಿಎಸ್ ಅಭ್ಯರ್ಥಿಗೆ ಮೇಯರ್ ಗಿರಿ ದಯಪಾಲಿಸಿದ ಕಾಂಗ್ರೆಸ್!

ಇದನ್ನೂ ಓದಿ: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಟ್ವಿಸ್ಟ್.. ಕೊನೆಯ ಕ್ಷಣದಲ್ಲಿ ಮೈತ್ರಿ ಮುರಿದ JDS