ಅಪ್ಪ-ಅಣ್ಣ ಬೈದ್ರು ಅಂತ ತಮ್ಮ ಆತ್ಮಹತ್ಯೆಗೆ ಶರಣು.. ನಾನೇ ಇದಕ್ಕೆ ಕಾರಣ ಅಂತ ಅಣ್ಣಾನೂ ಸಾವು

ಹರೀಶ್ ತಂದೆ ಚಿನ್ಮಯಿಗೌಡ ಟ್ರ್ಯಾಕ್ಟರ್ ಜೋರಾಗಿ ಓಡಿಸಬೇಡ ಎಂದು ಹರೀಶ್‌ಗೆ ಬುದ್ಧಿವಾದ ಹೇಳಿದ್ದರು. ಅಲ್ಲದೆ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ವೆಂಕಟೇಶ್ ಕೂಡ ತಮ್ಮ ಹರೀಶ್‌ಗೆ ಕರೆ ಮಾಡಿ ಬುದ್ಧಿವಾದ ಹೇಳಿದ್ದ. ಆತ್ಮೀಯನಾಗಿದ್ದ ಅಣ್ಣ ಬೈದ ಹಿನ್ನೆಲೆಯಲ್ಲಿ ತಮ್ಮ ನೇಣಿಗೆ ಶರಣಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಅಣ್ಣನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • TV9 Web Team
  • Published On - 10:28 AM, 26 Feb 2021
ಅಪ್ಪ-ಅಣ್ಣ ಬೈದ್ರು ಅಂತ ತಮ್ಮ ಆತ್ಮಹತ್ಯೆಗೆ ಶರಣು.. ನಾನೇ ಇದಕ್ಕೆ ಕಾರಣ ಅಂತ ಅಣ್ಣಾನೂ ಸಾವು
ಆತ್ಮಹತ್ಯೆ ಮಾಡಿಕೊಂಡಿರುವ ಅಣ್ಣ-ತಮ್ಮ

ಮೈಸೂರು: ತಮ್ಮ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಅಣ್ಣನೂ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಎಲೆಗುಂಡಿ ಬಳಿ ನಡೆದಿದೆ. ವೆಂಕಟೇಶ್(28), ಹರೀಶ್(26) ಆತ್ಮಹತ್ಯೆ ಮಾಡಿಕೊಂಡ ಅಣ್ಣ-ತಮ್ಮಂದಿರು. ಇಬ್ಬರ ಚಿತೆಯನ್ನು ಅಕ್ಕ-ಪಕ್ಕದಲಿಟ್ಟು ಅಗ್ನಿ ಸ್ಪರ್ಶ ಮಾಡಲಾಗಿದೆ. ಈ ದೃಶ್ಯ ಕಂಡ ಜನ ಕಣ್ಣೀರು ಹಾಕಿದ್ದಾರೆ.

ರೈತನಾಗಿದ್ದ ತಮ್ಮ ಹರೀಶ್​ ಟ್ರ್ಯಾಕ್ಟರ್ ಚಾಲಕನಾಗಿದ್ದ. ಹಾಗೂ ರ್‍ಯಾಷ್ ಡ್ರೈವ್ ಮಾಡುತ್ತಿದ್ದ. ಹೀಗಾಗಿ ಹರೀಶ್ ತಂದೆ ಚಿನ್ಮಯಿಗೌಡ ಟ್ರ್ಯಾಕ್ಟರ್ ಜೋರಾಗಿ ಓಡಿಸಬೇಡ ಎಂದು ಹರೀಶ್‌ಗೆ ಬುದ್ಧಿವಾದ ಹೇಳಿದ್ದರು. ಅಲ್ಲದೆ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ವೆಂಕಟೇಶ್ ಕೂಡ ತಮ್ಮ ಹರೀಶ್‌ಗೆ ಕರೆ ಮಾಡಿ ಬುದ್ಧಿವಾದ ಹೇಳಿದ್ದ.

ಆತ್ಮೀಯನಾಗಿದ್ದ ಅಣ್ಣ ಬೈದ ಹಿನ್ನೆಲೆಯಲ್ಲಿ ತಮ್ಮ ನೇಣಿಗೆ ಶರಣಾಗಿದ್ದಾನೆ. ಬಳಿಕ ವೆಂಕಟೇಶ್ ಸ್ನೇಹಿತರು ಹರೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯಗಳನ್ನು ವೆಂಕಟೇಶ್​ ಫೋನಿಗೆ ಕಳಿಸಿದ್ದರು. ಅದನ್ನು ನೋಡಿ ವೆಂಕಟೇಶ್, ನನ್ನ ತಮ್ಮನ ಸಾವಿಗೆ ನಾನೇ ಕಾರಣ ಎಂದು ಊರಿಗೆ ಬಾರದೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mysuru Brothers Suicide

ಆತ್ಮಹತ್ಯೆ ಮಾಡಿಕೊಂಡಿರುವ ಅಣ್ಣ-ತಮ್ಮ

ಇದನ್ನೂ ಓದಿ: ತಮ್ಮನಿಗೆ ಕೊರೊನಾ ವಕ್ಕರಿಸಿದ್ದಕ್ಕೆ ಅಣ್ಣ ಆತ್ಮಹತ್ಯೆಗೆ ಶರಣು?