ಕಾಡಾನೆ ದಾಳಿಗೆ ಟ್ರ್ಯಾಕ್ಟರ್ ಟ್ರಾಲಿ, ಕಾರು ಜಖಂ

Elephant attack: ಮುದಗನೂರು ಗ್ರಾಮದ ನಾಗೇಶ್ಗೆ ಸೇರಿದ ಟ್ರ್ಯಾಕ್ಟರ್ ಟ್ರಾಲಿಯನ್ನು ಪಲ್ಟಿ ಮಾಡಿದ ಆನೆ ಚಿಕ್ಕ ಹೆಜ್ಜೂರು ಗಿರಿಜನ ಹಾಡಿಯ ಭಾಸ್ಕರ್ ರವರಿಗೆ ಸೇರಿದ ಮಾರುತಿ ಆಲ್ಟೊ ಕಾರನ್ನು ಎಳೆದಾಡಿದೆ.

  • TV9 Web Team
  • Published On - 21:59 PM, 16 Feb 2021
ಕಾಡಾನೆ ದಾಳಿಗೆ ಟ್ರ್ಯಾಕ್ಟರ್ ಟ್ರಾಲಿ, ಕಾರು ಜಖಂ
ಪಲ್ಟಿಯಾಗಿರುವ ಟ್ರ್ಯಾಕ್ಟರ್ ಮತ್ತು ಗ್ಲಾಸ್ ಒಡೆದಿರುವ ಕಾರು

ಮೈಸೂರು: ಕಾಡಾನೆ ದಾಳಿಯಿಂದ ಟ್ರ್ಯಾಕ್ಟರ್ ಟ್ರಾಲಿ ಮತ್ತು ಕಾರು ಜಖಂ ಆಗಿರುವ ಘಟನೆ ಹುಣಸೂರು ತಾಲೂಕಿನ ಗ್ರಾಮ ಚಿಕ್ಕಹೆಜ್ಜೂರು ಮತ್ತು ಮುದುಗನೂರು ಗ್ರಾಮದಲ್ಲಿ ನಡೆದಿದೆ.

ಮುದಗನೂರು ಗ್ರಾಮದ ನಾಗೇಶ್​ ಎಂಬುವವರಿಗೆ ಸೇರಿದ ಟ್ರ್ಯಾಕ್ಟರ್ ಟ್ರಾಲಿಯನ್ನು ಪಲ್ಟಿ ಮಾಡಿದ ಆನೆ ಚಿಕ್ಕ ಹೆಜ್ಜೂರು ಗಿರಿಜನ ಹಾಡಿಯ ಭಾಸ್ಕರ್ ರವರಿಗೆ ಸೇರಿದ ಮಾರುತಿ ಆಲ್ಟೊ ಕಾರನ್ನು ಎಳೆದಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಒಂಟಿ ಸಲಗವನ್ನು ಕಾಡಿಗಟ್ಟಲು ಹರಸಾಹಸ ಮಾಡಿದರು. ಊರಿನ ಒಳಗೆ ಆಗಾಗ್ಗೆ ಬಂದು ಆನೆ ದಾಂದಲೆ ಮಾಡುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಆನೆಗಳ ದಾಳಿಯನ್ನು ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕಾಡಾನೆಯನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ

ಕಾಡಾನೆ ದಾಳಿಯಿಂದ ಕಾರಿನ ಬಾಗಿಲು ಮತ್ತು ಗ್ಲಾಸ್​ ಪುಡಿಯಾಗಿದೆ.

ವಾಹನಗಳನ್ನು ಹಾಳು ಮಾಡಿದ ಒಂಟಿ ಸಲಗ.

ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆ ಹಾವಳಿ: ಅಧಿಕಾರಿಗಳ ಸಭೆ