ಸಹಕಾರಿ ಕ್ಷೇತ್ರದಲ್ಲಿ ನನಗೆ ಅನುಭವ ಇಲ್ಲವೆಂದು HDK ಹೇಳಿದ್ದರು -ಮೈಮುಲ್ ಚುನಾವಣೆಯಲ್ಲಿ GTD ಬಣಕ್ಕೆ ಭರ್ಜರಿ ಜಯ

ಹೆಚ್​ಡಿಕೆ ಪ್ರಚಾರಕ್ಕೆ ಬಂದ ಆರಂಭದಲ್ಲೇ ಬೇಸರವಾಯಿತು. ಸಹಕಾರಿ ಕ್ಷೇತ್ರದಲ್ಲಿ ನನಗೆ ಅನುಭವ ಇಲ್ಲವೆಂದು ಹೇಳಿದ್ದರು. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಜೆಡಿಎಸ್​ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

  • TV9 Web Team
  • Published On - 20:55 PM, 16 Mar 2021
ಸಹಕಾರಿ ಕ್ಷೇತ್ರದಲ್ಲಿ ನನಗೆ ಅನುಭವ ಇಲ್ಲವೆಂದು HDK ಹೇಳಿದ್ದರು -ಮೈಮುಲ್ ಚುನಾವಣೆಯಲ್ಲಿ GTD ಬಣಕ್ಕೆ ಭರ್ಜರಿ ಜಯ
ಜಿ.ಟಿ.ದೇವೇಗೌಡ

ಮೈಸೂರು: ಮೈಮುಲ್ ಚುನಾವಣೆ ರಾಜಕೀಯ ಚುನಾವಣೆ ಅಲ್ಲ. ಮೈಮುಲ್ ಚುನಾವಣೆಯಲ್ಲಿ ರಾಜಕೀಯ ಬೆರೆಸಬಾರದು ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಹೆಚ್.ಡಿ.ಕುಮಾರಸ್ವಾಮಿ ಸಹ ರಾಜಕೀಯ ಬೆರೆಸಬಾರದು. ರಾಜಕೀಯ ಬೆರೆಸದಂತೆ ಇತರರನ್ನೂ ನೋಡಿಕೊಳ್ಳಿ ಎಂದು ಜಿಟಿಡಿ ಹೇಳಿದರು.

ಮೈಮುಲ್ ಚುನಾವಣೆಯಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಸಹಕಾರಿಗಳ ಷೇರುಗಳಿಂದ ಮೈಮುಲ್ ಈ ಮಟ್ಟಕ್ಕೆ ಬೆಳೆದಿದೆ. ಇತ್ತೀಚೆಗೆ ಹಾಲು ಉತ್ಪಾದಕರಿಗೆ ಬೆಂಬಲ ಬೆಲೆ ನೀಡಿ ಸಿದ್ದರಾಮಯ್ಯ, B.S.ಯಡಿಯೂರಪ್ಪ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಮೈಮುಲ್ ಚುನಾವಣೆಯಲ್ಲಿ ನಾನು ಎಂಬ ಪ್ರಶ್ನೆಯೇ ಇಲ್ಲ. ಚುನಾವಣೆಯಲ್ಲಿ ಗೆದ್ದಿರುವವರೆಲ್ಲ ನಮಗೆ ಬೆಂಬಲ ಕೊಡುತ್ತಾರೆ. ಮೈಮುಲ್ ಚುನಾವಣೆಯಲ್ಲಿ ಯಾವುದೇ ಪಕ್ಷ ಇರುವುದಿಲ್ಲ. ಸಹಕಾರಿ ಕ್ಷೇತ್ರದಲ್ಲಿ ನಾನು ಆಲದಮರವೆಂದು ಎಲ್ಲೂ ಹೇಳಿಲ್ಲ. ಹೆಚ್​ಡಿಕೆ ಪ್ರಚಾರಕ್ಕೆ ಬಂದ ಆರಂಭದಲ್ಲೇ ಬೇಸರವಾಯಿತು. ಸಹಕಾರಿ ಕ್ಷೇತ್ರದಲ್ಲಿ ನನಗೆ ಅನುಭವ ಇಲ್ಲವೆಂದು ಹೇಳಿದ್ದರು. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಜೆಡಿಎಸ್​ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಪ್ರತಿಷ್ಠಿತ ಮೈಮುಲ್ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಮುಖಭಂಗ ಎದುರಾಗಿದೆ. ಎಲೆಕ್ಷನ್​ನಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಣ ಜಯಭೇರಿ ಬಾರಿಸಿದೆ. ಹುಣಸೂರು ಉಪವಿಭಾಗದ ಎಲ್ಲಾ 8 ಸ್ಥಾನಗಳಲ್ಲಿ ಜಿ.ಟಿ.ದೇವೇಗೌಡರ ಬಣ ಗೆಲುವು ಸಾಧಿಸಿದೆ. ಇದಲ್ಲದೆ, ಚುನಾವಣೆಯಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಬಾಮೈದ ಸಹ ಪರಾಜಯಗೊಂಡಿದ್ದಾರೆ. ಇದಲ್ಲದೆ, ಪಿರಿಯಾಪಟ್ಟಣ ಶಾಸಕ ಮಹದೇವು ಪುತ್ರ ಪ್ರಸನ್ನಗೆ ಗೆಲುವು ಸಾಧಿಸಿದ್ದಾರೆ.

ಮೈಸೂರು ಮೈಮುಲ್‌ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 8ಕ್ಕೆ 8 ಸ್ಥಾನಗಳನ್ನು ಜಿ. ಟಿ. ದೇವೇಗೌಡರ ಬಣದ ಅಭ್ಯರ್ಥಿಗಳು ಗೆದ್ದಿದ್ದಾರೆ. ಹೀಗಾಗಿ, ಹುಣಸೂರು ಉಪ ವಿಭಾಗದಲ್ಲಿ ಜಿಟಿಡಿ ಟೀಂ ಕ್ಲೀನ್ ಸ್ವೀಪ್ ಮಾಡಿದೆ. ಗೆದ್ದ ಅಭ್ಯರ್ಥಿಗಳ ಪಟ್ಟಿ ಹೀಗಿದೆ.
1. ಪ್ರಸನ್ನ
2. ಈರೇಗೌಡ ಕೆ.
3. ಕುಮಾರ ಕೆ. ಎಸ್
4. ಎ. ಟಿ. ಸೋಮಶೇಖರ್
5. ಜಗದೀಶ್ ಉ. ಬಸಪ್ಪ
6. ರಾಜೇಂದ್ರ ಹೆಚ್. ಡಿ
7. ಶಿವಗಾಮಿ ಎ
8. ದ್ರಾಕ್ಷಯಿನಿ

ಇದನ್ನೂ ಓದಿ: ಪ್ರತಿಷ್ಠಿತ ಮೈಮುಲ್ ಚುನಾವಣೆ: ಮಾಜಿ ಸಿಎಂ HDKಗೆ ಮುಖಭಂಗ; GTD ಬಣಕ್ಕೆ ಭರ್ಜರಿ ಜಯ