ಮೈಸೂರಿನಲ್ಲಿ ಭಿಕ್ಷುಕಿಗೆ ಮದ್ಯಪಾನ ಮಾಡಿಸಿ ಅತ್ಯಾಚಾರ; ಐವರು‌‌ ಕಾಮುಕರು ಪೊಲೀಸರ ವಶಕ್ಕೆ

ಘಟನಾ ಸ್ಥಳದ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿರುವ ಪೊಲೀಸರು, ಭಿಕ್ಷುಕಿ ಮೇಲೆ ಐವರು ಅತ್ಯಾಚಾರ ಎಸಗಿರುವ ಮಾಹಿತಿ ಹೊರಹಾಕಿದ್ದಾರೆ.

  • TV9 Web Team
  • Published On - 19:23 PM, 17 Feb 2021
rape and murder
ಸಾಂದರ್ಭಿಕ ಚಿತ್ರ

ಮೈಸೂರು: ನಗರದ ಕೆ.ಟಿ.ಸ್ಟ್ರೀಟ್​ನಲ್ಲಿ ಭಿಕ್ಷುಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ವಿಚಾರಗಳು ಬೆಳಕಿಗೆ ಬಂದಿವೆ. ಭಿಕ್ಷುಕಿ ಮೇಲೆ ಐವರು ಅತ್ಯಾಚಾರವೆಸಗಿರುವ ವಿಚಾರ ತಿಳಿದುಬಂದಿದೆ. ಮೊನ್ನೆ (ಫೆ.15) ರಾತ್ರಿ 11 ಗಂಟೆ ವೇಳೆ ಭಿಕ್ಷುಕಿಗೆ ಮದ್ಯಪಾನ ಮಾಡಿಸಿ ಗುಂಪು ಅತ್ಯಾಚಾರ ಮಾಡಿರುವ ಮಾಹಿತಿ ಬಹಿರಂಗವಾಗಿದೆ.

ಘಟನಾ ಸ್ಥಳದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿರುವ ಪೊಲೀಸರು, ಭಿಕ್ಷುಕಿ ಮೇಲೆ ಐವರು ಅತ್ಯಾಚಾರ ಎಸಗಿರುವ ಮಾಹಿತಿ ಹೊರಹಾಕಿದ್ದಾರೆ. ಒಬ್ಬ ಅತ್ಯಾಚಾರ ಎಸಗುತ್ತಿರುವುದನ್ನು ನೋಡಿ ಮತ್ತೆ ನಾಲ್ವರಿಂದ ಈ ಹೇಯ ಕೃತ್ಯ ನಡೆದಿದೆ.

ಇದೀಗ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಫಿಕ್ (26), ಮಂಜುನಾಥ್ (23), ಕೃಷ್ಣ (4O), ಮನು (23), ರೇವಣ್ಣ(20) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೈಸೂರು ಜೋಡಿ ಕೊಲೆ: ಆರೋಪಿ ಬಂಧನ, ಮತ್ತೋರ್ವನಿಗಾಗಿ ಶೋಧ