ಮತ್ತೊಂದು ಹಗರಣ: ಅಧಿಕಾರಿಗಳಿಂದ ಮುಡಾಗೆ ಕೋಟ್ಯಂತರ ರೂಪಾಯಿ ವಂಚನೆ

| Updated By: ವಿವೇಕ ಬಿರಾದಾರ

Updated on: Nov 03, 2024 | 11:33 AM

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಮತ್ತೊಂದು ದೊಡ್ಡ ಹಗರಣ ಬಯಲಾಗಿದೆ. ಬ್ಯಾಂಕ್ ಆಫ್ ಬರೋಡಾ ಮತ್ತು ಮುಡಾ ಅಧಿಕಾರಿಗಳು ಸೇರಿ 93 ಗ್ರಾಹಕರಿಂದ ಪಡೆದ ಕೋಟ್ಯಂತರ ರೂಪಾಯಿಗಳನ್ನು ಖಾತೆಗೆ ಜಮಾ ಮಾಡದೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಈ ವಂಚನೆ ನಡೆದಿದೆ ಎಂದು ಆರೋಪಿಸಲಾಗಿದೆ.

ಮತ್ತೊಂದು ಹಗರಣ: ಅಧಿಕಾರಿಗಳಿಂದ ಮುಡಾಗೆ ಕೋಟ್ಯಂತರ ರೂಪಾಯಿ ವಂಚನೆ
ಮುಡಾ
Follow us on

ಮೈಸೂರು, ನವೆಂಬರ್​ 03: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಮುಡಾದ (Muda) ಖಾತೆಗೆ ಹಣ ಜಮಾ ಮಾಡದೆ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಧಿಕಾರಿಗಳು ಪ್ರಾಧಿಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ. ಈ ವಂಚನೆ ಪ್ರಕರಣದಲ್ಲಿ ಪ್ರಾಧಿಕಾರದ ಹೊರಗುತ್ತಿಗೆ ನೌಕರರು, ಅಧಿಕಾರಿಗಳು, ಬ್ಯಾಂಕ್​ ಸಿಬ್ಬಂದಿ ಶಾಮಿಲಾಗಿದ್ದಾರೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಉಳಿಸಿ ಹೋರಾಟಗಾರರ ವೇದಿಕೆ ಆರೋಪ ಮಾಡಿದೆ.

ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಿಬ್ಬಂದಿಗಳು ಮತ್ತು ಪ್ರಾಧಿಕಾರದ ಕೆಲವು ಅಧಿಕಾರಿಗಳು ಮುಡಾ ಕಂದಾಯ ಇಲಾಖೆಯ ವಿವಿಧ ಸೇವೆಗಳಿಗಾಗಿ 93 ಗ್ರಾಹಕರಿಂದ ಹಣ ಪಡೆದು, ಪ್ರಾಧಿಕಾರದ ಖಾತೆಗೆ ಜಮೆ ಮಾಡಿಲ್ಲ. ಪ್ರಾಧಿಕಾರದ ಖಾತೆಗೆ ಹಣ ಜಮೆ ಆಗಿರುವ ರೀತಿಯಲ್ಲಿ ಸುಳ್ಳು ಬ್ಯಾಕ್ ಚಲನಗಳನ್ನು ಸೃಷ್ಟಿಸಿ ಪ್ರಾಧಿಕಾರಕ್ಕೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

“93 ಜನರು ಹಣ ನೀಡಿರುವ ಚಲನ್​ಗಳು ನಮ್ಮ ಬಳಿ ಇವೆ. ಆದರೆ, ಹಣ ನಮ್ಮ ಖಾತೆಗೆ ಜಮೆಯಾಗಿಲ್ಲ. ಹೀಗಾಗಿ, ಕೂಡಲೆ ನಮ್ಮ ಖಾತೆಗೆ ಹಣ ಜಮೆ ಮಾಡಿ ಎಂದು ಮುಡಾ ಹಣಕಾಸು ವಿಭಾಗ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಿಗೆ ಪತ್ರ ಬರೆದಿದೆ. ಈ ಪತ್ರಕ್ಕೆ ಬ್ಯಾಂಕ್ ಆಫ್ ಬರೋಡಾ, “ನೀವು ಕೇಳಿರುವ 93 ಚಲನ್​ಗಳಲ್ಲಿ 92 ಚಲನ್ ಹಣ ನಮ್ಮ ಬ್ಯಾಂಕ್ ಖಾತೆಗೆ ಬಂದಿಲ್ಲ ಎಂದು ಮರು ಉತ್ತರ ನೀಡಿದೆ.

ಇದನ್ನೂ ಓದಿ: ಮುಡಾ ಸೈಟ್​ ಹಿಂಪಡೆಯಲು ಸಿದ್ದರಾಮಯ್ಯ ಸಮ್ಮತಿ: ನಿವೇಶನ ​ಪಡೆದವರಿಗೆ ಟೆನ್ಷನ್​ ಶುರು

ಹಣ ಕಟ್ಟಿದ್ದಾರೆ ಅಂತ ಬ್ಯಾಂಕ್ ಸೀಲ್ ಇದೆ. ಖಾತೆಗೆ ಮಾತ್ರ ಹಣ ಜಮೆಯಾಗಿಲ್ಲ. ಇದರಿಂದ ಹಣಕಾಸು ವಿಭಾಗ ಅಧಿಕಾರಿಗಳು ಕಂಗಾಲಾಗಿದ್ದು, ಪ್ರಾಥಮಿಕ ತನಿಖೆ ನಡೆಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮುಡಾ ಮತ್ತು ಬ್ಯಾಂಕ್​ ಸಿಬ್ಬಂದಿ ಬ್ಯಾಂಕ್ ಚಲನ್ ಮತ್ತು ಸೀಲು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತಿಳಿದಿದೆ.

ಈಗಾಗಲೆ ಮುಡಾದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಮೈಸೂರು ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.

ಗ್ರಾಹಕರ ವಿರುದ್ಧ ಎಫ್​ಐಆರ್​ ದಾಖಲಿಸಿದ ಮುಡಾ

ಬ್ಯಾಂಕ್​ನ ನಕಲಿ ಸೀಲ್ ಮಾಡಿಸಿ ಮುಡಾಗೆ ಗ್ರಾಹಕರೇ ವಂಚಿಸಿದ್ದಾರೆ ಎಂದು ಎಫ್​ಐಆರ್​ ದಾಖಲಾಗಿದೆ. ಗ್ರಾಹಕರ ವಿರುದ್ಧ ತಹಶೀಲ್ದಾರ್  ಕಳೆದ ವರ್ಷ ನವೆಂಬರ್​​ 8 ರಂದು ದೂರು ನೀಡಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:07 am, Sun, 3 November 24