ಮೈಸೂರು: ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಣ್ಣ ಬಣ್ಣದ ಕ್ರಿಸ್ಮಸ್ ಸ್ಟಾರ್ಸ್, ಬಗೆ ಬಗೆಯ ಜಿಂಗಲ್ ಬೆಲ್ಸ್, ಜಗಮಗಿಸುತ್ತಿರೋ ಕಾಲೇಜು. ಕ್ರಿಸ್ಮಸ್ಗೆ ಭರ್ಜರಿ ತಯಾರಿ ನಡೆಸ್ತಿರೋ ವಿದ್ಯಾರ್ಥಿಗಳು. ಕ್ರಿಸ್ಮಸ್ ಅಂದಕೂಡಲೇ ಇಂಥಾ ಕಲಾಕೃತಿಗಳು ಸರ್ವೆ ಸಾಮಾನ್ಯ. ಆದ್ರೆ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಈ ಬಾರಿ ಕ್ರಿಸ್ಮಸ್ಗಾಗಿ ವಿಭಿನ್ನ ಹಾಗೂ ವಿನೂತನ ಚಿಂತನೆ ಮಾಡಲಾಗಿದೆ.
ವಿದ್ಯಾರ್ಥಿಗಳ ಕೈಚಳಕದಿಂದ ಮೂಡಿದ ಕಲಾಕೃತಿಗಳು: ವಿದ್ಯಾರ್ಥಿಗಳು ತಮ್ಮ ಕೈಚಳಕದಿಂದ ಕ್ರಿಸ್ಮಸ್ ಸ್ಟಾರ್, ಏಸು ಕ್ರಿಸ್ತ ಹುಟ್ಟಿದ ಸ್ಥಳ, ಕಿಸ್ಮಸ್ ಟ್ರೀ, ಸಾಂತಾ ಕ್ಲಾಸ್, ಅರಮನೆ ಆಕೃತಿ. ಹೀಗೆ ಬಗೆ ಬಗೆಯ ಕಲಾಕೃತಿಗಳನ್ನ ತಯಾರಿಸಿದ್ದಾರೆ. ಇವೆಲ್ಲವೂ ತಯಾರಾಗಿರೋದು ಕಸ ಹಾಗೂ ಸ್ಟೋರ್ ರೂಂನಲ್ಲಿ ಬಿದ್ದಿದ್ದ ಹಳೇ ವಸ್ತುಗಳಿಂದ. ಕಾಲೇಜಿನಲ್ಲಿ ಈಗಾಗಲೇ ಯೂಸ್ ಮಾಡಿ ಮೂಲೆ ಸೇರಿದ್ದ ನೋಟಿಸ್ ಬೋರ್ಡ್, ಪ್ಲೈವುಡ್ ಶೀಟ್, ಪೇಪರ್ ಲೋಟ, ಹಳೆಯ ಛತ್ರಿ ಹಾಗೂ ಪ್ರಾಜೆಕ್ಟ್ಗಳನ್ನ ಬಳಸಿ ಕಲಾಕೃತಿಗಳನ್ನ ತಯಾರಿಸಲಾಗಿದೆ.
ಕಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ಕಳೆದೊಂದು ವಾರದಿಂದ ಕಾಲೇಜಿನ ವಿದ್ಯಾರ್ಥಿಗಳು ಇದರ ತಯಾರಿಯಲ್ಲಿ ತೊಡಗಿದ್ದಾರೆ. ಅದ್ರಲ್ಲೂ ಕ್ರಿಸ್ಮಸ್ ಥೀಮ್ನಲ್ಲಿ ಇವುಗಳು ರೆಡಿಯಾಗ್ತಿರೋದು ಹಬ್ಬದ ಸಂಭ್ರಮವನ್ನ ದುಪ್ಪಟ್ಟು ಮಾಡಿದೆ. ಒಟ್ನಲ್ಲಿ, ಎಲ್ಲೆಡೆ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿದೆ. ಅದ್ರಲ್ಲೂ ಹಬ್ಬದ ಸಿದ್ಧತೆಯಲ್ಲಿ ಪರಿಸರ ಕಾಳಜಿ ಜೊತೆಗೆ ಹಳೇ ವಸ್ತುಗಳನ್ನ ಮರುಬಳಕೆ ಮಾಡಿಕೊಂಡ ಕಾನ್ಸೆಪ್ಟ್ ಎಲ್ಲರ ಗಮನ ಸೆಳೀತಿದೆ.