ಪ್ರವಾಸಿಗರಿಗೆ ಗುಡ್ ನ್ಯೂಸ್, ಮೈಸೂರು ಮೃಗಾಲಯ ಓಪನ್ ಆಗುತ್ತೆ! ಯಾವಾಗ?
ಮೈಸೂರು: ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಎಲ್ಲಾ ಕಡೆ ಭರದ ಸಿದ್ಧತೆಗಳು ನಡೆಯುತ್ತಿವೆ. ಅದರಂತೆ ಜೂನ್ 8ರಂದು ಪ್ರವಾಸಿಗರ ವಿಕ್ಷಣೆಗೆ ಮೈಸೂರು ಮೃಗಾಲಯವನ್ನು ಸಹ ಓಪನ್ ಮಾಡಲಾಗುತ್ತಿದೆ. ಮೃಗಾಲಯ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಮಾರ್ಗಸೂಚಿ ಪಾಲನೆ ಮಾಡಲು ತಿಳಿಸಿದೆ. ಮೃಗಾಲಯ ಒಳಭಾಗದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿದೆ. ಅಲ್ಲದೆ ಪ್ರತಿ ಪಾಯಿಂಟ್ನಲ್ಲೂ ಸ್ಯಾನಿಟೈಸ್ ಕಡ್ಡಾಯವಾಗಿದೆ. ಪ್ರವಾಸಿಗರ ಮಧ್ಯೆ 6 ಅಡಿ ಅಂತರ ಪಾಲಿಸುವುದು ಕಡ್ಡಾಯ. ಗಂಟೆಗೆ 1 ಸಾವಿರ ಜನರಿಗೆ ಮಾತ್ರ ಪ್ರವೇಶ ಕೊಡಲಾಗಿದೆ. 1 ಸಾವಿರ ಜನರಿಗಿಂತ […]
ಮೈಸೂರು: ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಎಲ್ಲಾ ಕಡೆ ಭರದ ಸಿದ್ಧತೆಗಳು ನಡೆಯುತ್ತಿವೆ. ಅದರಂತೆ ಜೂನ್ 8ರಂದು ಪ್ರವಾಸಿಗರ ವಿಕ್ಷಣೆಗೆ ಮೈಸೂರು ಮೃಗಾಲಯವನ್ನು ಸಹ ಓಪನ್ ಮಾಡಲಾಗುತ್ತಿದೆ. ಮೃಗಾಲಯ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಮಾರ್ಗಸೂಚಿ ಪಾಲನೆ ಮಾಡಲು ತಿಳಿಸಿದೆ.
ಮೃಗಾಲಯ ಒಳಭಾಗದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿದೆ. ಅಲ್ಲದೆ ಪ್ರತಿ ಪಾಯಿಂಟ್ನಲ್ಲೂ ಸ್ಯಾನಿಟೈಸ್ ಕಡ್ಡಾಯವಾಗಿದೆ. ಪ್ರವಾಸಿಗರ ಮಧ್ಯೆ 6 ಅಡಿ ಅಂತರ ಪಾಲಿಸುವುದು ಕಡ್ಡಾಯ. ಗಂಟೆಗೆ 1 ಸಾವಿರ ಜನರಿಗೆ ಮಾತ್ರ ಪ್ರವೇಶ ಕೊಡಲಾಗಿದೆ. 1 ಸಾವಿರ ಜನರಿಗಿಂತ ಹೆಚ್ಚಿದ್ದರೆ 1 ಗಂಟೆ ಆದ ನಂತರ ಮೃಗಾಲಯಕ್ಕೆ ಪ್ರವೇಶ ಮಾಡಬೇಕು.
ಮೃಗಾಲಯದ ಒಳ ಬರುವಾಗ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಡೆಸಬೇಕು. 10 ವರ್ಷದೊಳಗಿನ ಮಕ್ಕಳು, 65 ವರ್ಷ ಮೇಲ್ಪಟ್ಟ ವೃದ್ಧರಿಗೆ ಮೃಗಾಲಯಕ್ಕೆ ಎಂಟ್ರಿ ಇಲ್ಲ. ಪ್ರತಿನಿತ್ಯ 8 ಗಂಟೆ ಮೃಗಾಲಯ ವೀಕ್ಷಣೆಗೆ ಲಭ್ಯವಾಗಲಿದೆ.
ಸೋಮವಾರ ಬೆಳಗ್ಗೆ 10ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಮೃಗಾಲಯ ಪುನರಾರಂಭ ಮಾಡಲಾಗುತ್ತೆ. ಮಂಗಳವಾರದಿಂದ ಬೆಳಗ್ಗೆ 8.30ಕ್ಕೆ ಎಂದಿನಂತೆ ಮೈಸೂರು ಮೃಗಾಲಯ ತೆರೆದಿರುತ್ತೆ.
Published On - 1:54 pm, Sat, 6 June 20